IPL 2023: ಸೌರವ್ ಗಂಗೂಲಿಯನ್ನು ಗುರಾಯಿಸಿದ ವಿರಾಟ್ ಕೊಹ್ಲಿ..!

IPL 2023: ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್​ಸಿಬಿ ನಡುವಣ ಪಂದ್ಯವು ಇದೀಗ ಹಲವು ಕಾರಣಗಳಿಂದ ಚರ್ಚಾ ವಿಷಯವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಬೌಲಿಂಗ್ ಆಯ್ದುಕೊಂಡಿದ್ದರು.ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ಪರ ವಿರಾಟ್ ಕೊಹ್ಲಿ ಅಬ್ಬರಿಸಿದ್ದರು. ಇದಾದ ಬಳಿಕ ಬೌಲಿಂಗ್​ನಲ್ಲಿ ಚೊಚ್ಚಲ ಪಂದ್ಯದಲ್ಲಿ ಕನ್ನಡಿಗ ವೈಶಾಕ್ ವಿಜಯಕುಮಾರ್ ಮಿಂಚಿದ್ದರು. ಆದರೆ ಇವೆಲ್ಲದರ ನಡುವೆ ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ ನಡುವಣ ಕೆಲ ಸನ್ನಿವೇಶಗಳು ಹೊಸ ಚರ್ಚೆಗಳನ್ನು ಹುಟ್ಟುಹಾಕಿದೆ.
ಹೌದು, ಈ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕರಾಗಿರುವ ಸೌರವ್ ಗಂಗೂಲಿಯನ್ನು ಗುರಾಯಿಸುತ್ತಿರುವ ಫೋಟೋಗಳು ವೈರಲ್ ಆಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು 8 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿದ್ದ ವೇಳೆ ವಿರಾಟ್ ಕೊಹ್ಲಿ ಡಗೌಟ್​ನಲ್ಲಿ ಕೂತಿದ್ದ ಸೌರವ್ ಗಂಗೂಲಿಯನ್ನು ಕೆಲ ಕ್ಷಣಗಳ ದಿಟ್ಟಿಸಿ ನೋಡಿದ್ದಾರೆ. ಇದನ್ನು ಗಮಿನಿಸಿದ ಮಿಚೆಲ್ ಮಾರ್ಷ್ ಹಾಗೂ ಇತರೆ ಸಿಬ್ಬಂದಿಗಳು ವಿರಾಟ್ ಕೊಹ್ಲಿಯನ್ನು ನೋಡುತ್ತಿರುವುದು ಕಾರಣಬಹುದು.ಆದರೆ ವಿರಾಟ್ ಕೊಹ್ಲಿ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಮುಂದಾದರೂ ಸೌರವ್ ಗಂಗೂಲಿ ಮಾತ್ರ ಆರ್​ಸಿಬಿ ಆಟಗಾರನತ್ತ ನೋಡಲು ಮುಂದಾಗಲಿಲ್ಲ. ಅದಾಗಲೇ ಡೆಲ್ಲಿ ತಂಡವು ಸೋಲಿನತ್ತ ಮುಖ ಮಾಡಿದ್ದರಿಂದ ಅದೇ ಚಿಂತೆಯಲ್ಲಿ ಸೌರವ್ ಗಂಗೂಲಿ ಕುಳಿತಿದ್ದರು.ಇನ್ನು ಈ ಪಂದ್ಯದಲ್ಲಿ ಆರ್​ಸಿಬಿ ತಂಡವು 23 ರನ್​ಗಳಿಂದ ಜಯ ಸಾಧಿಸಿದ್ದು, ಆ ಬಳಿಕ ನಡೆದ ಆಟಗಾರರ ಹಸ್ತಲಾಘವ ಸಮಯದಲ್ಲೂ ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ ಪರಸ್ಪರ ಮುಖಾಮುಖಿಯಾಗಿಲ್ಲ.ಆರ್​ಸಿಬಿ ತಂಡದ ಇತರೆ ಆಟಗಾರರಿಗೆ ಶೇಕ್ ಹ್ಯಾಂಡ್ ಮಾಡಲು ಸೌರವ್ ಗಂಗೂಲಿ ಸರದಿಯಲ್ಲಿ ನಿಂತಿದ್ದರು. ಹಸ್ತಲಾಘವ ಮಾಡುತ್ತಾ ಮುಂದೆ ಹೋದಾಗ ಕೊಹ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಅವರೊಂದಿಗೆ ಸಂಭಾಷಣೆಯಲ್ಲಿ ತೊಡಗಿದ್ದರು. ಈ ವೇಳೆ ಗಂಗೂಲಿ ವಿರಾಟ್ ಕೊಹ್ಲಿಯನ್ನು ಬಿಟ್ಟು ಮುಂದೆ ಸಾಗಿ ಇತರೆ ಆಟಗಾರರಿಗೆ ಶೇಕ್ ಹ್ಯಾಂಡ್ ನೀಡಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಅಂದಹಾಗೆ ಟೀಮ್ ಇಂಡಿಯಾ ನಾಯಕತ್ವದಿಂದ ಕೆಳಗಿಳಿಸಿದ ಬಳಿಕ ವಿರಾಟ್ ಕೊಹ್ಲಿ ಹಾಗೂ ಅಂದಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಡುವೆ ಶೀತಲ ಸಮರ ಶುರುವಾಗಿತ್ತು. ಇದೀಗ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಗಂಗೂಲಿ ಕೆಳಗಿಳಿದಿದ್ದಾರೆ. ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಾಗ್ಯೂ ಕೊಹ್ಲಿ-ದಾದಾ ನಡುವಣ ಮುನಿಸು ಮಾತ್ರ ಕೊನೆಗೊಂಡಿಲ್ಲ ಎಂಬುದಕ್ಕೆ ಈ ಘಟನೆಗಳೇ ಸಾಕ್ಷಿ.

source https://tv9kannada.com/photo-gallery/cricket-photos/ipl-2023-virat-kohli-gives-a-long-stare-to-sourav-ganguly-kannada-news-zp-au50-556906.html

Leave a Reply

Your email address will not be published. Required fields are marked *