ಸ್ವಾತಂತ್ರ್ಯ ಹೋರಾಟದಿಂದ ಬ್ಯಾಂಕ್ ರಾಷ್ಟ್ರೀಕರಣದವರೆಗೆ ಇಂದಿರಾ ಗಾಂಧಿ ಪಾತ್ರ ಮಹತ್ವದ್ದು: ತಾಜ್‌ಪೀರ್.

ಚಿತ್ರದುರ್ಗ ನ. 19

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಸ್ವಾತಂತ್ರ್ಯ ಹೋರಾಟ, ಭೂ ಸುಧಾರಣೆ, ಬ್ಯಾಂಕ್ ರಾಷ್ಟ್ರೀಕರಣ ಮತ್ತು ದೇಶದ ಐಕ್ಯತೆಯ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಇಂದಿರಾ ಗಾಂಧಿ ಅವರ ದಿಟ್ಟ ನಿರ್ಧಾರಗಳಿಂದ ಜನಸಾಮಾನ್ಯರಿಗೆ ಉತ್ತಮ ರೀತಿಯಾದ ಪ್ರಯೋಜನಗಳು ಆಗಿವೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅದ್ಯಕ್ಷರಾದ ಎಂ.ಕೆ.ತಾಜ್ ಪೀರ್ ತಿಳಿಸಿದರು.

ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ದೇಶದ ಪ್ರಥಮ ಮಹಿಳಾ ಪ್ರಧಾನ ಮಂತ್ರಿ, ಉಕ್ಕಿನ ಮಹಿಳೆ, ಭಾರತರತ್ನ ಶ್ರೀಮತಿ ಇಂದಿರಾಗಾಂಧಿ ಅವರ 109ನೇ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಇಂದಿರಾ ಗಾಂಧಿ ಅವರು ತಂದ ‘ಉಳುವವನೇ ಭೂಮಿಯ ಒಡೆಯ’ ಕಾನೂನನ್ನು ಮೊದಲು ಜಾರಿಗೆ ತಂದಿದ್ದು ನಮ್ಮ ಕರ್ನಾಟಕದಲ್ಲಿ ದೇವರಾಜ ಅರಸು ಅವರು ಎಂಬುದನ್ನು ಹಾಗೂ ಬ್ಯಾಂಕ್ ರಾಷ್ಟ್ರೀಕರಣ ಮತ್ತು ಅದರ ಫಲ ಸಾಮಾನ್ಯ ಜನರಿಗೆ ತಲುಪುವಂತೆ ಮಾಡಿದ್ದಾರೆ. ಇಂದಿರಾ ಗಾಂಧಿ ಅವರು ಕೇವಲ ನೆಹರು ಅವರ ಮಗಳಾಗಿರದೆ, ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದರು ಜವಾಹರಲಾಲ್ ನೆಹರು ಅವರು ಹಲವು ಬಾರಿ ಜೈಲಿಗೆ ಹೋದಾಗ, ಇಂದಿರಾ ಗಾಂಧಿ ಅವರು ಗಾಂಧೀಜಿ ಅವರ ಜೊತೆಗೆ ಇದ್ದು, ಅವರ ತತ್ವಗಳನ್ನು ಅಳವಡಿಸಿಕೊಂಡಿದ್ದರು. ಮುಂದೆ ದೇಶದ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡರು ಎಂದಿದ್ದಾರೆ ಎಂದರು.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಮತ್ತು ಸ್ವಾತಂತ್ರ್ಯದ ನಂತರ ದೇಶದ ಐಕ್ಯತೆಗಾಗಿ ಜೀವ ತ್ಯಾಗ ಮಾಡಿದ ನಾಯಕರ ಜನ್ಮದಿನಾಚರಣೆ ಆಚರಿಸುವ ಹಕ್ಕು, ಜವಾಬ್ದಾರಿ ಮತ್ತು ಸೌಭಾಗ್ಯ ಕೇವಲ ಕಾಂಗ್ರೆಸ್ ಪಕ್ಷದವರಿಗೆ ಮಾತ್ರ ಇದೆ ಬೇರೆ ಪಕ್ಷದವರು ತೋರಿಕೆಗಾಗಿ ಜನ್ಮದಿನಾಚರಣೆ ಮಾಡುತ್ತಾರೆ, ಆದರೆ ಕಾಂಗ್ರೆಸ್‍ನವರು ಇಷ್ಟಪಟ್ಟು, ಅಭಿಮಾನ ಮತ್ತು ಗೌರವದಿಂದ ಆಚರಿಸುತ್ತಾರೆ ಎಂದು ತಿಳಿಸಿದ ಅವರು, ಜಮೀನ್ದಾರರ ಜಮೀನಿನಲ್ಲಿ ದುಡಿಯುತ್ತಿದ್ದ ಬಡವರು, ರೈತರು ಮತ್ತು ಜೀತದಾಳುಗಳಿಗೆ ಭೂಮಿಯ ಮಾಲೀಕತ್ವ ನೀಡುವ ಉದ್ದೇಶದಿಂದ ಇಂದಿರಾ ಗಾಂಧಿ ಅವರು ‘ಉಳುವವನೇ ಭೂಮಿಯ ಒಡೆಯ’ ಕಾನೂನು ತಂದರು ಎಂದು ಹೇಳಿದ್ದಾರೆ. ಆಗ ಕೆಲವರು ವಿರೋಧ ವ್ಯಕ್ತಪಡಿಸಿದರೂ, ಲಕ್ಷಾಂತರ ಜನರಿಗೆ ಮಾಲೀಕತ್ವ ಸಿಗುವಂತೆ ನಿರ್ಧಾರ ಕೈಗೊಂಡರು ಎಂದಿದ್ದಾರೆ.

ಮೊದಲು ಬ್ಯಾಂಕ್‍ಗಳು ಶ್ರೀಮಂತರಿಗೆ ಮಾತ್ರ ಸಾಲ ನೀಡುತ್ತಿದ್ದವು, ಆದರೆ 1972ರಲ್ಲಿ ಇಂದಿರಾ ಗಾಂಧಿ ಅವರು ದೊಡ್ಡ ನಿರ್ಧಾರ ತೆಗೆದುಕೊಂಡು ಎಲ್ಲಾ ಬ್ಯಾಂಕ್‍ಗಳನ್ನು ರಾಷ್ಟ್ರೀಕರಣ ಮಾಡಿದರು ಇದರಿಂದ ಸಾಮಾನ್ಯ ಜನರು, ರೈತರು, ಸಣ್ಣ ವ್ಯಾಪಾರಸ್ಥರು ಮತ್ತು ಕೂಲಿ ಕಾರ್ಮಿಕರಿಗೂ ಬ್ಯಾಂಕ್ ಖಾತೆ ತೆರೆಯಲು ಹಾಗೂ ಸಾಲ ಪಡೆಯಲು ಅವಕಾಶ ದೊರೆಯಿತು ಕಾಂಗ್ರೆಸ್ ಪಕ್ಷದಿಂದ ಹೋದವರು ಮುಂದೆ ನಶಿಸಿಹೋದರು, ಆದರೆ ಕಾಂಗ್ರೆಸ್ ಪಕ್ಷ ಮತ್ತು ಇಂದಿರಾ ಗಾಂಧಿ ಅವರ ತ್ಯಾಗ ಉಳಿಯಿತು ಎಂದು ಹೇಳಿದ್ದಾರೆ.

ಗ್ಯಾರೆಂಟಿ ಯೋಜನೆ ಜಿಲ್ಲಾಧ್ಯಕ್ಷರಾದ ಶಿವಣ್ಣ ಗಂಜಿಗಟ್ಟೆ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ನಾಯಕರ ಸೇವೆ ಮತ್ತು ಐತಿಹಾಸಿಕ ಕೊಡುಗೆಗಳು ಆಪಾರವಾಗಿದೆ. ಇಂದಿರಾ ಗಾಂಧಿ ಅವರ ಸೇವೆ, ಬಡತನ ನಿರ್ಮೂಲನೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಕೈಗೊಂಡ ಕ್ರಮಗಳನ್ನು ಶ್ಲಾಘಿನೀಯವಾಗಿವೆ ಇಂದಿರಾ ಗಾಂಧಿ ಅವರು ದೇಶ ಕಂಡ ದಿಟ್ಟ ಮಹಿಳೆಯಾಗಿದ್ದು, ಪ್ರಪಂಚದಲ್ಲೇ ಹೆಸರು ಗಳಿಸಿದ ನಾಯಕಿಯಾಗಿದ್ದಾರೆ ಹಿಂದಿನ ಮಾಧ್ಯಮಗಳು ಇಂದಿನಷ್ಟು ವ್ಯಾಪಕವಾಗಿರಲಿಲ್ಲವಾದರೂ, ಅವರು ನೀಡಿದ ಕಾರ್ಯಕ್ರಮಗಳು ಅಭೂತಪೂರ್ವವಾಗಿದ್ದು ವಿಶ್ವಸಂಸ್ಥೆಯ ಮೆಚ್ಚುಗೆಗೂ ಪಾತ್ರವಾಗಿವೆ ಎಂದು ಹೇಳಿದರು.

ಅಂದಿನ ದಿನದಲ್ಲಿ ಬರಗಾಲ ಎದುರಿಸಿದ್ದ ಭಾರತಕ್ಕೆ ಅನ್ನ ನೀಡಿರುವುದು ಮತ್ತು ಈಗ ಅನ್ನಭಾಗ್ಯದಡಿ ಅಕ್ಕಿ ನೀಡುತ್ತಿರುವುದು ದೇಶದಲ್ಲೇ ಬೆಳೆದ ಫಲವಾಗಿದ್ದು, ಅಂದಿನ ಕಾಲದಲ್ಲಿ ಬೇರೆ ದೇಶಗಳಿಂದ ಹಾಗೂ ರೈಲ್ವೆ ಮೂಲಕ ಆಹಾರ ತಂದು ಜನರಿಗೆ ನೀಡಿದ ಸಾಧನೆ ಮಹತ್ವದ್ದಾಗಿದೆ ಕಾಂಗ್ರೆಸ್ ಪಕ್ಷವು ಜನಸಾಮಾನ್ಯರು ಮತ್ತು ಕಾರ್ಯಕರ್ತರೊಂದಿಗೆ ಆಳವಾಗಿ ಬೆಸೆದುಕೊಂಡಿದ್ದು,ನಾಯಕರ ಕಾರ್ಯಕ್ರಮಗಳನ್ನು ಜನರು ಬಳಸಿಕೊಂಡು ನಿರ್ಭಯದಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ ವಿರೋಧ ಪಕ್ಷದ ಕಚೇರಿಗಳಲ್ಲಿ ಕೆಲವೇ ಜಯಂತಿಗಳನ್ನು ಆಚರಿಸುವ ಪದ್ಧತಿಯಿದ್ದರೆ, ಕಾಂಗ್ರೆಸ್ ಪಕ್ಷದಲ್ಲಿ ಹಲವು ಮಹನೀಯರ ಜಯಂತಿಗಳು ಮತ್ತು ಕಾರ್ಯಕ್ರಮಗಳು ನಡೆಯುತ್ತವೆ ಸಂವಿಧಾನದ ಅಡಿಯಲ್ಲಿ ತಳ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ ಎಂದು ತಿಳಿಸಿದರು.

ನೆಹರು, ಇಂದಿರಾ ಗಾಂಧಿ ಹಾಗೂ ಮಹಾತ್ಮ ಗಾಂಧಿ ಅವರನ್ನು ವಿರೋಧಿಸುವ ಮನೋಭಾವದ ಕುರಿತು ಮಾತನಾಡಿದ ಅವರು, ಎಸ್‍ಸಿ, ಎಸ್‍ಟಿ, ಒಬಿಸಿ ಮತ್ತು ಹಿಂದುಳಿದ ವರ್ಗಗಳನ್ನು ಮೇಲಕ್ಕೆತ್ತುವ ಕಾರ್ಯಕ್ರಮಗಳನ್ನು ನೀಡಿದ್ದರಿಂದಲೇ ಮುಂದುವರಿದ ವರ್ಗಗಳು ಹಾಗೂ ವಿರೋಧಿಸುವ ಶಕ್ತಿಗಳು ಅಸಮಾಧಾನಗೊಂಡಿವೆ ದೇಶಕ್ಕೋಸ್ಕರ ಪ್ರಾಣ ಕೊಟ್ಟ ನಾಯಕರ ಇತಿಹಾಸವಿರುವ ಪಕ್ಷದ ವಿರುದ್ಧ, ಇತಿಹಾಸವೇ ಇಲ್ಲದ ಪಕ್ಷಗಳು ಇಂದಿನ ಮಾಧ್ಯಮಗಳ ಮೂಲಕ ಸುಳ್ಳು ಹರಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿ ದೇಶದ ಐಕ್ಯತೆ, ಸಂವಿಧಾನದ ಆಶಯ, ಬಡವರು ಮತ್ತು ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಿದ ಮಹನೀಯರ ಆದರ್ಶಗಳನ್ನು ಸ್ಮರಿಸಿ, ಅವರ ದಾರಿಯಲ್ಲಿ ನಡೆಯುವುದೇ ನಿಜವಾದ ಗೌರವವಾಗಿದೆ ಹಾಗೂ ಜನರನ್ನು ದಾರಿ ತಪ್ಪಿಸುವ ಸುಳ್ಳು ಪ್ರಚಾರಗಳನ್ನು ಎದುರಿಸಿ ಸತ್ಯವನ್ನು ಎತ್ತಿ ಹಿಡಿಯಬೇಕು ಎಂದು ಕರೆ ನೀಡಿದರು.

ಓಬಿಸಿ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್ ಮಾತನಾಡಿ, ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದವರಲ್ಲಿ ಕೆಲವೇ ಮಂದಿ ಮಾತ್ರ ‘ಉಕ್ಕಿನ ಮಹಿಳೆ’ (ಐರನ್ ಲೇಡಿ) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಇಂದಿರಾ ಗಾಂಧಿ ಅವರು ಅದರಲ್ಲಿ ಪ್ರಮುಖರಾಗಿ ದ್ದಾರೆ ವಿಶ್ವವೇ ಇಂದಿರಾ ಗಾಂಧಿ ಅವರನ್ನು ಕೊಂಡಾಡುತ್ತದೆ ಮಾಜಿ ಪ್ರಧಾನಿ ವಾಜಪೇಯಿ ಅವರೂ ಸಹ ಇಂದಿರಾ ಗಾಂಧಿ ಅವರನ್ನು ದುರ್ಗಾದೇವಿಗೆ ಹೋಲಿಸಿದ್ದರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ನಾಯಕತ್ವ, ದಿಟ್ಟ ನಿರ್ಧಾರಗಳು ಹಾಗೂ ಸಾಮಾಜಿಕ ನ್ಯಾಯದ ಕೊಡುಗೆಗಳು ಆಪಾರವಾಗಿವೆ. ಪ್ರತಿಯೊಬ್ಬ ಭಾರತೀಯನೂ ಭೂಮಿಯ ಒಡೆಯನಾಗಬೇಕು ಎಂಬ ಉದ್ದೇಶದಿಂದ, ಸಾವಿರಾರು ಎಕರೆ ಜಮೀನುದಾರರಿದ್ದರೂ ಸಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಲ್ಲಿ ಭೂಮಿ ಇಲ್ಲದವರಿಗೆ ಭೂಮಿ ತಂದುಕೊಟ್ಟ ಕೀರ್ತಿ ಇಂದಿರಾ ಗಾಂಧಿ ಅವರಿಗೆ ಸಲ್ಲುತ್ತದೆ ಎಂದು ಹೇಳಲಾಯಿತು.

ಇಂದಿಗೂ ಮತ ಕೇಳಲು ಹೋದಾಗ ಇಂದಿರಾ ಗಾಂಧಿ ಅವರ ಹೆಸರನ್ನು ಹೇಳಲು ಹೆಮ್ಮೆಯಾಗುತ್ತದೆ ಬೇರೆ ಯಾವುದೇ ಪ್ರಧಾನಮಂತ್ರಿಯ ಹೆಸರು ಹೇಳಿಕೊಂಡು ಮತ ಕೇಳುವ ಪರಿಸ್ಥಿತಿ ಇಲ್ಲದೆ, ಇಂದಿರಾ ಗಾಂಧಿ ಅವರ ಹೆಸರಿನಲ್ಲೇ ಮತ ಕೇಳಲಾಗುತ್ತಿದೆ ದೇಶದ ರಕ್ಷಣೆ, ದಿಟ್ಟ ನಿರ್ಧಾರಗಳು ಹಾಗೂ ದುರ್ಬಲ ವರ್ಗಗಳಿಗೆ ಭೂಮಿಯ ಹಕ್ಕನ್ನು ನೀಡಿದ ಇಂದಿರಾ ಗಾಂಧಿ ಅವರ ಸಾಧನೆಗಳು ಸದಾ ಸ್ಮರಣೀಯವಾಗಿದ್ದು, ಅವರ ಹೆಸರು ಮತ್ತು ಕಾರ್ಯಗಳು ಇಂದಿಗೂ ಜನಮಾನಸದಲ್ಲಿ ಪ್ರಭಾವಶಾಲಿಯಾಗಿವೆ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡರಾದ ಮುನಿರಾ ಮಕಾಂದರ್ ಮಾತನಾಡಿ, ಇಂದಿರಾ ಗಾಂಧಿ ಅವರ ಆಡಳಿತಾವಧಿಯ ಕೊಡುಗೆಗಳು ಹಾಗೂ ಬಲಿದಾನಗಳನ್ನು ಜನಸಾಮಾನ್ಯರಿಗೆ, ವಿಶೇಷವಾಗಿ ಬಡವರು ಮತ್ತು ಕೂಲಿ ಕಾರ್ಮಿಕರಿಗೆ ತಲುಪಿಸುವ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕು ಇಂದಿರಾ ಗಾಂಧಿ ಅವರ ಹೆಸರು ಮತ್ತು ಸಾಧನೆಗಳು ಇಂದಿಗೂ ಜನರಲ್ಲಿ ಸ್ಫೂರ್ತಿ ತುಂಬುತ್ತಿದ್ದು, ಚುನಾವಣೆ ಮತ್ತು ಪಕ್ಷದ ಕಾರ್ಯ ಕ್ರಮಗ ಳಲ್ಲಿ ಅವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅಗತ್ಯವಿದೆ ಇಂದಿರಾ ಗಾಂಧಿ ಹಾಗೂ ಪಕ್ಷದ ಕೊಡುಗೆ ಮತ್ತು ಬಲಿದಾನಗಳನ್ನು ನಾಲ್ಕು ಗೋಡೆಗಳ ಒಳಗೆ ಮಾತನಾಡಿದರೆ ಪ್ರಯೋಜನವಿಲ್ಲ; ಅವುಗಳನ್ನು ಹೊರಗಡೆ ಜನರಿಗೆ ತಿಳಿಸಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮತಗಳನ್ನು ನೀಡುತ್ತಿರುವವರು ಬಡವರು ಆಗಿದ್ದು, ಇಂದಿರಾ ಗಾಂಧಿ ನೀಡಿದ ಕೊಡುಗೆಗಳನ್ನು ಜನರು ಸ್ಮರಿಸುತ್ತಾರೆ ಮನೆ ಮನೆ ಪ್ರಚಾರ, ಗ್ಯಾರಂಟಿ ಯೋಜನೆಗಳ ಪ್ರಚಾರ ಅಥವಾ ಯಾವುದೇ ಕಾರ್ಯಕ್ರಮ ಮಾಡುವಾಗ ಮೊದಲು ಇಂದಿರಾ ಗಾಂಧಿ ಅವರ ಬಗ್ಗೆ ಮಾತನಾಡಬೇಕು ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಇಂದಿರಾ ಗಾಂಧಿ ಅವರ ಕೊಡುಗೆಗಳನ್ನು ಕೇವಲ ಸಭೆಗಳಿಗೆ ಸೀಮಿತಗೊಳಿಸದೆ, ಬಡವರು ಮತ್ತು ಜನಸಾಮಾನ್ಯರ ನಡುವೆ ವ್ಯಾಪಕವಾಗಿ ಪ್ರಚಾರ ಮಾಡುವ ಮೂಲಕ ಪಕ್ಷಕ್ಕೆ ಬೆಂಬಲ ಮತ್ತು ಮತಗಳನ್ನು ಗಳಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್‍ಕುಮಾರ್, ಉಪಾಧ್ಯಕ್ಷ ರವಿಕುಮಾರ್, ಮುದಾಸಿರ್, ರಾಮನಾಯ್ಕ್,ಖುದ್ದುಸ್, ಸುದರ್ಶನ್, ಶಶಾಂಕ್, ಸಂದೀಪ್, ಚಾಂದ್‍ಪೀರ್, ದಾದಾಪೀರ್, ನಜ್ಮಾತಾಜ್ ರೇಣುಕಾ, ಅಬ್ದುಲ್, ಅಶ್ವಿನಿ, ಸುರೇಂದ್ರ ಸೇರಿದಂತೆ ಇತರರು ಭಾಗವಹಿಸಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group

Join WhatsApp Group

🔵 Facebook Page

Follow Facebook Page

⚫ Twitter / X

Follow on X (Twitter)

🟣 Threads

Follow on Threads

🟠 Instagram

Follow on Instagram

🔵 Telegram

Join Telegram Channel

🟢 WhatsApp Channel

Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *