IPL 2023 Points Table: ಭರ್ಜರಿ ಜಯದೊಂದಿಗೆ ಪಾಯಿಂಟ್ಸ್​ ಟೇಬಲ್​ನಲ್ಲಿ ಮೇಲೇರಿದ RCB

IPL 2023 Points Table: ಐಪಿಎಲ್ ಸೀಸನ್ 16 ಪೈಪೋಟಿ ಮುಂದುವರೆದಿದೆ. ಈಗಾಗಲೇ ಬಹುತೇಕ ತಂಡಗಳು 4 ಪಂದ್ಯಗಳನ್ನು ಆಡಿದ್ದು, ಇನ್ನು ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ 5 ಪಂದ್ಯಗಳು ಪೂರ್ಣಗೊಂಡಿದೆ. 21ನೇ ಪಂದ್ಯದ ಮುಕ್ತಾಯದ ಬೆನ್ನಲ್ಲೇ ಪಾಯಿಂಟ್ಸ್​ ಟೇಬಲ್​ನಲ್ಲೂ ಮಹತ್ವದ ಬದಲಾವಣೆಯಾಗಿದೆ.  ಆರ್​ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲುವ ಮೂಲಕ ಪಾಯಿಂಟ್ಸ್ ಟೇಬಲ್​ನಲ್ಲಿ ಮೇಲೇರಿದ್ದು, ಅತ್ತ ಸತತ ಸೋಲಿನಿಂದ ಕಂಗೆಟ್ಟಿರುವ ವಾರ್ನರ್ ಪಡೆಯು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಅದರಂತೆ ಶನಿವಾರದ ಅಂತ್ಯಕ್ಕೆ ಐಪಿಎಲ್​ ಪಾಯಿಂಟ್ಸ್​​ ಟೇಬಲ್​ನ ವಿವರ ಈ ಕೆಳಗಿನಂತಿದೆ...1- ರಾಜಸ್ಥಾನ್ ರಾಯಲ್ಸ್ (6 ಅಂಕಗಳು): 4 ಪಂದ್ಯಗಳನ್ನಾಡಿರುವ ರಾಜಸ್ಥಾನ್ ರಾಯಲ್ಸ್ ತಂಡವು 3 ಗೆಲುವು ಹಾಗೂ 1 ಸೋಲಿನೊಂದಿಗೆ ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಆರ್​ಆರ್​ ತಂಡದ ಪ್ರಸ್ತುತ ನೆಟ್​ ರನ್​ ರೇಟ್ ನೆಟ್​​ +1.588. 2- ಲಕ್ನೋ ಸೂಪರ್ ಜೈಂಟ್ಸ್ (6 ಅಂಕಗಳು)​: 5 ಪಂದ್ಯಗಳಲ್ಲಿ 2 ಸೋಲು ಹಾಗೂ 3 ಗೆಲುವು ದಾಖಲಿಸಿರುವ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವು +0.761 ನೆಟ್​ ರನ್​ ರೇಟ್​ನೊಂದಿಗೆ ದ್ವಿತೀಯ ಸ್ಥಾನ ಅಲಂಕರಿಸಿದೆ.3- ಗುಜರಾತ್ ಟೈಟಾನ್ಸ್ (6 ಅಂಕಗಳು): ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಆಡಿರುವ 4 ಪಂದ್ಯಗಳಲ್ಲಿ 1 ಸೋಲು ಹಾಗೂ 3 ಗೆಲುವು ದಾಖಲಿಸಿದೆ. ಈ ಮೂಲಕ +0.341 ನೆಟ್​ ರನ್​ ರೇಟ್​ನೊಂದಿಗೆ 3ನೇ ಸ್ಥಾನದಲ್ಲಿದೆ.4- ಪಂಜಾಬ್ ಕಿಂಗ್ಸ್ (6 ಅಂಕಗಳು)​: ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವು ಆಡಿರುವ 5 ಪಂದ್ಯಗಳಲ್ಲಿ 3 ಜಯ ಹಾಗೂ 2 ಸೋಲು ಕಂಡಿದ್ದು, -0.067 ನೆಟ್​ ರನ್​ ರೇಟ್​ನೊಂದಿಗೆ 4ನೇ ಸ್ಥಾನ ಅಲಂಕರಿಸಿದೆ.5- ಕೊಲ್ಕತ್ತಾ ನೈಟ್ ರೈಡರ್ಸ್ (4 ಅಂಕಗಳು): ಕೆಕೆಆರ್ ಆಡಿರುವ 4 ಪಂದ್ಯಗಳಲ್ಲಿ 2 ಸೋಲು, 2 ಗೆಲುವು ಕಂಡಿದೆ. ಇದೀಗ +0.711 ನೆಟ್​ ರನ್​ ರೇಟ್ ಹೊಂದಿರುವ ನಿತೀಶ್ ರಾಣಾ ಪಡೆಯು 5ನೇ ಸ್ಥಾನದಲ್ಲಿದೆ.6- ಚೆನ್ನೈ ಸೂಪರ್ ಕಿಂಗ್ಸ್ (4 ಅಂಕಗಳು)​: 4 ಪಂದ್ಯಗಳನ್ನಾಡಿರುವ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಸಿಎಸ್​ಕೆ ತಂಡವು 2 ಸೋಲು, 2 ಗೆಲುವಿನೊಂದಿಗೆ 6ನೇ ಸ್ಥಾನದಲ್ಲಿದೆ. ತಂಡದ ಪ್ರಸ್ತುತ ಪಾಯಿಂಟ್ಸ್ ಟೇಬಲ್​ ನೆಟ್​ ರನ್​ ರೇಟ್​ +0.225.7- ರಾಯಲ್ ಚಾಲೆಂಜರ್ಸ್ ಬೆಂಗಳೂರು (4 ಅಂಕಗಳು): ಫಾಫ್ ಡುಪ್ಲೆಸಿಸ್ ನೇತೃತ್ವದ ಆರ್​ಸಿಬಿ ತಂಡವು ಮೊದಲ ಪಂದ್ಯದಲ್ಲಿ ಗೆದ್ದರೆ, 2ನೇ ಮತ್ತು 3ನೇ ಪಂದ್ಯದಲ್ಲಿ ಸೋತಿತ್ತು. ಇದೀಗ 4ನೇ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗೆದ್ದಿದೆ. ಈ ಮೂಲಕ -0.316 ನೆಟ್​ ರನ್​ ರೇಟ್ ಕಲೆಹಾಕಿ 7ನೇ ಸ್ಥಾನದಲ್ಲಿದೆ.8- ಸನ್​ರೈಸರ್ಸ್ ಹೈದರಾಬಾದ್ (4 ಅಂಕಗಳು): ಆಡಿರುವ 4 ಪಂದ್ಯಗಳಲ್ಲಿ 2 ರಲ್ಲಿ ಜಯ ಸಾಧಿಸಿ, 2 ಪಂದ್ಯ ಸೋತಿರುವ ಸನ್​ರೈಸರ್ಸ್ ಹೈದರಾಬಾದ್ ತಂಡವು -0.822 ನೆಟ್​ ರನ್ ರೇಟ್​ನೊಂದಿಗೆ ಪಾಯಿಂಟ್ಸ್​ ಟೇಬಲ್​ನಲ್ಲಿ 8ನೇ ಸ್ಥಾನದಲ್ಲಿದೆ.9- ಮುಂಬೈ ಇಂಡಿಯನ್ಸ್ (2 ಅಂಕಗಳು): ಆಡಿರುವ 3 ಪಂದ್ಯಗಳಲ್ಲಿ 1 ಜಯ ಹಾಗೂ 2 ಸೋಲಿನೊಂದಿಗೆ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ -0.879 ನೆಟ್​ ರನ್​ ರೇಟ್ ಪಡೆದು 9ನೇ ಸ್ಥಾನದಲ್ಲಿದೆ.10- ಡೆಲ್ಲಿ ಕ್ಯಾಪಿಟಲ್ಸ್ (0): ಡೇವಿಡ್ ವಾರ್ನರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆಡಿರುವ 5 ಪಂದ್ಯಗಳಲ್ಲೂ ಸೋಲನುಭವಿಸಿದೆ. ಇನ್ನು ಗೆಲುವಿನ ಖಾತೆ ತೆರೆಯದ ಡೆಲ್ಲಿ ತಂಡವು -1.488 ನೆಟ್​ ರನ್​ ರೇಟ್​ನೊಂದಿಗೆ ಪಾಯಿಂಟ್ಸ್​ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದೆ.ಶನಿವಾರದವರೆಗೆ (ಏ.15) ಒಟ್ಟು 21 ಪಂದ್ಯಗಳು ಮುಗಿದಿದ್ದು, ಈ ಪಂದ್ಯಗಳ ಬಳಿಕ ಅಪ್​ಡೇಟ್ ಆಗಿರುವ ಪಾಯಿಂಟ್ಸ್​ ಟೇಬಲ್ ಅನ್ನು ಇಲ್ಲಿ ನೀಡಲಾಗಿದೆ.

source https://tv9kannada.com/photo-gallery/cricket-photos/ipl-2023-points-table-ipl-2023-standings-in-kannada-news-zp-au50-556923.html

Leave a Reply

Your email address will not be published. Required fields are marked *