

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2023) ಇಂದು ಮಹತ್ವದ ಪಂದ್ಯ ನಡೆಯಲಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ಆ್ಯಡಂ ಮರ್ಕ್ರಮ್ ನಾಯಕತ್ವದ ಸನ್ರೈಸರ್ಸ್ ಹೈದರಾಬಾದ್ ತಂಡ ರೋಹಿತ್ ಶರ್ಮಾ (Rohit Sharma) ನೇತೃತ್ವದ ಮುಂಬೈ ಇಂಡಿಯನ್ಸ್ (SRH vs MI) ಅನ್ನು ಎದುರಿಸಲಿದೆ. ಎಸ್ಆರ್ಹೆಚ್ ಆಡಿದ ನಾಲ್ಕು ಪಂದ್ಯಗಳಲ್ಲಿ ತಲಾ ಎರಡರಲ್ಲಿ ಗೆಲುವು, ಎರಡರಲ್ಲಿ ಸೋಲು ಕಂಡು ನಾಲ್ಕು ಅಂಕದೊಂದಿಗೆ ಒಂಬತ್ತನೆ ಸ್ಥಾನದಲ್ಲಿದೆ. ಇತ್ತ ಮುಂಬೈ ಕೂಡ ಇದೇ ಪರಿಸ್ಥಿತಿಯಲ್ಲಿದ್ದು ರನ್ರೇಟ್ ಆಧಾರದ ಮೇಲೆ ಎಂಟನೇ ಸ್ಥಾನದಲ್ಲಿದೆ. ಉಭಯ ತಂಡಗಳಿಗೆ ಗೆಲುವು ಅನಿವಾರ್ಯ ಆಗಿರುವುದರಿಂದ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.
ಹೈದರಾಬಾದ್:
ಆರಂಭದ ಎರಡು ಪಂದ್ಯಗಳಲ್ಲಿ ಸೋಲುಂಡು ನಂತರದ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿ ಗೆಲುವಿನ ಲಯಕ್ಕೆ ಮರಳಿದ ಎಸ್ಆರ್ಹೆಚ್ ಹ್ಯಾಟ್ರಿಕ್ ಜಯದ ಕನಸಿನಲ್ಲಿದೆ. ಹಿಂದಿನ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಅಮೋಘ ಪ್ರದರ್ಶನ ನೀಡಿತ್ತು. ಹ್ಯಾರಿ ಬ್ರೂಕ್ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದರು. ನಾಯಕ ಆ್ಯಡಂ ಮರ್ಕ್ರಮ್ ಕೂಡ ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾಗಿದ್ದರು. ಅಬಿಷೇಕ್ ಶರ್ಮಾ ಕೂಡ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದಾರೆ. ರಾಹುಲ್ ತ್ರಿಪಾಠಿ ಹಾಗೂ ಹೆನ್ರಿಚ್ ಕ್ಲಾಸೆನ್ ಕಡೆಯಿಂದ ತಂಡಕ್ಕೆ ಕೊಡುಗೆ ಸಲ್ಲುತ್ತಿದೆ. ಆದರೆ, ಮಯಾಂಕ್ ಅಗರ್ವಾಲ್ ಕಡೆಯಿಂದ ನಿರೀಕ್ಷೆಗೆ ತಕ್ಕ ಆಟ ಬರುತ್ತಿಲ್ಲ.
ವಾಷಿಂಗ್ಟನ್ ಸುಂದರ್ ಕಡೆಯಿಂದ ಆಲ್ರೌಂಡ್ ಆಟ ಬರಬೇಕಿದೆ. ತಂಡದಲ್ಲಿ ಟಿ. ನಟರಾಜನ್, ಉಮ್ರಾನ್ ಮಲಿಕ್, ಮಯಾಂಕ್ ಮಾರ್ಕಂಡೆ, ಭುವನೇಶ್ವರ್ ಕುಮಾರ್ರಂತಹ ಅಪಾಯಕಾರಿ ಬೌಲರ್ಗಳಿದ್ದರೂ ಮಾರಕವಾಗಿ ಗೋಚರಿಸುತ್ತಿಲ್ಲ. ತನ್ನ ಗೆಲುವಿನ ಲಯವನ್ನು ಮುಂದುವರೆಸಬೇಕಾದರೆ ಎಸ್ಆರ್ಹೆಚ್ ಬೌಲರ್ ಇಂದು ಹೊಸ ಪ್ಲಾನ್ನೊಂದಿಗೆ ಕಣಕ್ಕಿಳಿಯಬೇಕು. ತಂಡದ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಆದರೂ ಅಚ್ಚರಿ ಪಡಬೇಕಿಲ್ಲ.
IPL 2023: RCB vs CSK ಪಂದ್ಯದಲ್ಲಿ ಸಿಡಿದ ಸಿಕ್ಸ್ಗಳು ಎಷ್ಟು ಗೊತ್ತಾ?
ಮುಂಬೈ ಇಂಡಿಯನ್ಸ್:
ಮುಂಬೈ ಕೂಡ ಆರಂಭದ ಎರಡು ಪಂದ್ಯಗಳಲ್ಲಿ ಸೋತ ಬಳಿಕ ಗೆಲುವಿನ ಲಯಕ್ಕೆ ಮರಳಿದೆ. ಹಿಂದಿನ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಕಳಪೆ ಫಾರ್ಮ್ನಲ್ಲಿದ್ದ ಸೂರ್ಯಕುಮಾರ್ ಯಾದವ್ಗೆ ನಾಯಕತ್ವ ನೀಡಿದ ಬಳಿಕ ಫಾರ್ಮ್ಗೆ ಬಂದಿದ್ದಾರೆ. ರೋಹಿತ್ ಶರ್ಮಾ ಇಂದುಕೂಡ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಾಣಿಸಿಕೊಳ್ಳುತ್ತಾರ ನೋಡಬೇಕಿದೆ. ಇಶಾನ್ ಕಿಶನ್ ಸ್ಫೋಟಕ ಆರಂಭ ಒದಗಿಸುತ್ತಿದ್ದಾರೆ. ತಿಲಕ್ ವರ್ಮಾ, ಟಿಮ್ ಡೇವಿಡ್ ಪ್ರತಿ ಪಂದ್ಯದಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದಾರೆ.
ಅರ್ಜುನ್ ತೆಂಡೂಲ್ಕರ್ಗೆ ಇಂದಿನ ಪಂದ್ಯದಲ್ಲೂ ಸ್ಥಾನ ಸಿಗುತ್ತಾ ಎಂಬುದು ಕುತೂಹಲ ಕೆರಳಿಸಿದೆ. ಕ್ಯಾಮ್ರೋನ್ ಗ್ರೀನ್ ಕಡೆಯಿಂದ ಆಲ್ರೌಂಡ್ ಆಟ ಬರಬೇಕಿದೆ. ಡ್ಯೂಯೆನ್ ಜಾನ್ಸೆನ್, ರಿಲೆ ಮೆರೆಡಿತ್, ಹೃತಿಕ್ ಶೋಕೀನ್ ಮಾರಕವಾಗಬೇಕಿದೆ. ಪಿಯೂಷ್ ಚಾವ್ಲಾ ಮಾತ್ರ ಮುಂಬೈ ಬೌಲಿಂಗ್ನಲ್ಲಿ ಎದುರಾಳಿಗೆ ಕಂಠಕವಾಗಿ ಪರಿಣಮಿಸಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್: ಹ್ಯಾರಿ ಬ್ರೂಕ್, ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಆ್ಯಡಂ ಮರ್ಕ್ರಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಉಮ್ರಾನ್ ಮಲಿಕ್, ಟಿ ನಟರಾಜನ್, ಆದಿಲ್ ರಶೀದ್, ಅಕೇಲ್ ಹೊಸೈನ್, ಗ್ಲೆನೆನ್ ಫಿಲಿಪ್ಸ್, ಸಮರ್ಥ ವ್ಯಾಸ್, ಅನ್ಮೋಲ್ಪ್ರೀತ್ ಸಿಂಗ್, ಮಯಾಂಕ್ ದಾಗರ್, ಉಪೇಂದ್ರ ಯಾದವ್, ಅಭಿಷೇಕ್ ಶರ್ಮಾ, ಕಾರ್ತಿಕ್ ತ್ಯಾಗಿ, ಸನ್ವಿರ್ ಸಿಂಗ್, ಫಜಲ್ಹಕ್ ಫಾರೂಕಿ, ಅಬ್ದುಲ್ ಸಮದ್, ನಿತೀಶ್ ರೆಡ್ಡಿ, ವಿವ್ರಾಂತ್ ಶರ್ಮಾ.
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ನೆಹಾಲ್ ವಧೇರಾ, ಕ್ಯಾಮ್ರೋನ್ ಗ್ರೀನ್, ಅರ್ಜುನ್ ತೆಂಡೂಲ್ಕರ್, ಹೃತಿಕ್ ಶೋಕೀನ್, ಡ್ಯೂಯೆನ್ ಜಾನ್ಸೆನ್, ಪಿಯೂಷ್ ಚಾವ್ಲಾ, ರಿಲೆ ಮೆರೆಡಿತ್, ರಮಣದೀಪ್ ಸಿಂಗ್, ವಿಷ್ಣು ವಿನೋದ್, ಕುಮಾರ್ ಕಾರ್ತಿಕೇಯ, ಅರ್ಷದ್ ಖಾನ್, ಜೇಸನ್ ಬೆಹ್ರೆಂಡಾರ್ಫ್, ಸಂದೀಪ್ ವಾರಿಯರ್, ಜೋಫ್ರಾ ಆರ್ಚರ್, ಶಮ್ಸ್ ಮುಲಾನಿ, ಆಕಾಶ್ ಮಧ್ವಲ್, ಟ್ರಿಸ್ಟಾನ್ ಸ್ಟಬ್ಸ್, ಡೆವಾಲ್ಡ್ ಬ್ರೆವಿಸ್, ರಾಘವ್ ಗೋಯಲ್.
ಸ್ಳಳ: ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಸ್ಟೇಡಿಯಂ, ಹೈದರಾಬಾದ್.
ಸಮಯ: ಸಂಜೆ 7:30ಕ್ಕೆ
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ