Health: ರಸಭರಿತ ಮಾವಿನ ಹಣ್ಣಿನ ಋತು ಆರಂಭಗೊಂಡಿದೆ. ಸಿಹಿಯಾದ ಮಾವಿನಹಣ್ಣುಗಳನ್ನು ತಿನ್ನುವ ಮೊದಲು, ಜನರು ಅವುಗಳನ್ನು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ನೆನೆಸಿಡುತ್ತಾರೆ. ಹೀಗೆ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳೂ ದೂರಾಗುತ್ತವೆ. ಇದರಿಂದ ನೀವು ಹಲವು ರೀತಿಯ ರಾಸಾಯನಿಕಗಳಿಂದಲೂ ಕೂಡ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು.

ರಸಭರಿತವಾದ ಮಾವಿನ ಹಣ್ಣಿನ ರುಚಿಯನ್ನು ಸವಿಯುವ ಕಾಲ ಬಂದಿದೆ. ಮಾವಿನ ಹಣ್ಣು ಹೆಚ್ಚು ಪೌಷ್ಟಿಕಾಂಶಗಳನ್ನು ಹೊಂದಿದೆ. ಇದು ವಿಟಮಿನ್ ಎ, ಸಿ, ಫೈಬರ್, ಕಬ್ಬಿಣ, ಸೋಡಿಯಂ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಗಳ ಉತ್ತಮ ಮೂಲವಾಗಿದೆ. ಮಾವಿನಹಣ್ಣು ತಿನ್ನುವುದರಿಂದ ದೇಹದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ, ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಕರುಳಿನ ಆರೋಗ್ಯವೂ ಸುಧಾರಿಸುತ್ತದೆ. ಅಷ್ಟೇ ಅಲ್ಲ, ಮಾವು ಕಣ್ಣು, ಕೂದಲು ಮತ್ತು ತ್ವಚೆಗಳ ಆರೋಗ್ಯಕ್ಕೂ ಕೂಡ ತುಂಬಾ ಪ್ರಯೋಜನಕಾರಿಯಾಗಿದೆ. ಮಾವಿನ ಹಣ್ಣನ್ನು ತಿನ್ನುವ ಮೊದಲು ಜನರು ಅದನ್ನು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ಇಡುವುದನ್ನು ನೀವು ಗಮನಿಸಿರಬೇಕು. ಆದರೆ ಅದನ್ನು ಏಕೆ ನೀರಿನಲ್ಲಿ ನೆನೆಹಾಕಬೇಕು ಎಂಬುದು ನಿಮಗೆ ತಿಳಿದಿದೆಯೇ, ಇಲ್ಲ ಎಂದಾದರೆ ಈ ಲೇಖನ ತಪ್ಪದೆ ಓದಿ…
ಮಾವಿನಹಣ್ಣನ್ನು ತಿನ್ನುವ ಮೊದಲು ಏಕೆ ನೆನೆಹಾಕಬೇಕು?
ತಜ್ಞರ ಪ್ರಕಾರ, ಮಾವನ್ನು ತಿನ್ನುವ ಮೊದಲು ನೀರಿನಲ್ಲಿ ಇಡುವುದು ಪ್ರಯೋಜನಕಾರಿಯಾಗಿದೆ. ಇದರಿಂದಾಗಿ ದೇಹವು ಅನೇಕ ರೀತಿಯ ಸಮಸ್ಯೆಗಳಿಂದ ಪಾರಾಗುತ್ತದೆ. ನೀವು ಮಾವಿನ ಹಣ್ಣುಗಳನ್ನು ಖರೀದಿಸಿ ನೇರವಾಗಿ ತಿನ್ನಲು ಪ್ರಾರಂಭಿಸಿದರೆ, ಅದು ನಿಮ್ಮ ಆರೋಗ್ಯಕ್ಕೆ ಹಾನಿ ಉಂಟುಮಾಡಬಹುದು. ಇದು ರಾಸಾಯನಿಕ ಅಥವಾ ಅದರ ಮೇಲೆ ಅಂಟಿಕೊಂಡಿರುವ ಕೊಳೆಯ ಕಾರಣ ಸಂಭವಿಸುತ್ತದೆ, ಆದ್ದರಿಂದ ನೀವು ಸಿಹಿ ಮಾವಿನಹಣ್ಣುಗಳನ್ನು ಆನಂದಿಸುವ ಮುನ್ನ, ಅವುಗಳನ್ನು ಕನಿಷ್ಠ 1-2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನೀವು ಮಾವಿನಹಣ್ಣನ್ನು 30 ನಿಮಿಷಗಳ ಕಾಲ ಕೂಡ ನೀರಿನಲ್ಲಿ ನೆನೆಸಿಡಬಹುದು. ಇದನ್ನು ಮಾಡುವುದರಿಂದ ಅನೇಕ ಪ್ರಯೋಜನಗಳಿವೆ.
ಮಾವಿನಹಣ್ಣನ್ನು ತಿನ್ನುವ ಮೊದಲು ನೀರಿನಲ್ಲಿ ನೆನೆಹಾಕುವುದರಿಂದಾಗುವ ಲಾಭಗಳು
ಚರ್ಮದ ಸಮಸ್ಯೆ ನಿವಾರಣೆ
ಆರೋಗ್ಯ ತಜ್ಞರ ಪ್ರಕಾರ ಮಾವಿನ ಹಣ್ಣನ್ನು ತಿನ್ನುವ ಮೊದಲು ನೀರಿನಲ್ಲಿ ನೆನೆಸಿಡಬೇಕು. ಹೀಗೆ ಮಾಡುವುದು ನಮ್ಮ ತ್ವಚೆಗೆ ಪ್ರಯೋಜನಕಾರಿಯಾಗಿದೆ. ಚಿಕ್ಕವರಿದ್ದಾಗ ಮಾವಿನ ಹಣ್ಣನ್ನು ಜಾಸ್ತಿ ತಿಂದ ಮಕ್ಕಳಿಗೆ ಹುಣ್ಣು ಜಾಸ್ತಿ ಬರುತ್ತಿದ್ದುದನ್ನು ನೀವು ನೋಡಿರಬಹುದು. ಏಕೆಂದರೆ ಮಾವಿನಹಣ್ಣನ್ನು ತಿನ್ನುವುದರಿಂದ ಅನೇಕರಿಗೆ ಮೊಡವೆಗಳು, ಹುಣ್ಣುಗಳು ಅಥವಾ ಚರ್ಮದ ಸಮಸ್ಯೆಗಳು ಎದುರಾಗುತ್ತವೆ. ಅಷ್ಟೇ ಅಲ್ಲ, ಮಲಬದ್ಧತೆ, ತಲೆನೋವು ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಸಹ ಸಂಭವಿಸಲು ಪ್ರಾರಂಭಿಸುತ್ತವೆ. ಮಾವಿನ ಹಣ್ಣನ್ನು ನೀರಿನಲ್ಲಿ ಇರಿಸುವುದರಿಂದ, ಅದರ ಬಿಸಿ ಪರಿಣಾಮವು ಹೊರಟುಹೋಗುತ್ತದೆ ಮತ್ತು ನೀವು ಅನೇಕ ಸಮಸ್ಯೆಗಳನ್ನು ಇದರಿಂದ ತಪ್ಪಿಸಬಹುದು.
ರಾಸಾಯನಿಕಗಳಿಂದ ಪಾರಾಗಬಹುದು
ಮಾವಿನ ಮರದಲ್ಲಿ ಹಣ್ಣುಗಳನ್ನು ರಕ್ಷಿಸಲು ಅನೇಕ ರೀತಿಯ ಕೀಟನಾಶಕಗಳನ್ನು ಬಳಸಲಾಗುತ್ತದೆ. ಆದರೆ ಅವು ನಮ್ಮ ದೇಹದ ಪಾಲಿಗೆ ವಿಷದಂತೆ ವರ್ತಿಸುತ್ತವೆ. ಅವುಗಳನ್ನು ನೆನೆಸದೆ ತಿನ್ನುವುದು ಅಲರ್ಜಿ, ಚರ್ಮದ ಕಿರಿಕಿರಿ ಅಥವಾ ಇತರ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ತಲೆನೋವು, ವಾಕರಿಕೆ ಮುಂತಾದ ಸಮಸ್ಯೆಗಳೂ ಬರಬಹುದು.
ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ: ಸಿಹಿ ಮಾವಿನಹಣ್ಣುಗಳು ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತವೆ. ಮಾವಿನ ಹಣ್ಣಿನಲ್ಲಿರುವ ಫೈಟೊ ಕೆಮಿಕಲ್ ಗಳು ತುಂಬಾ ಪ್ರಬಲವಾಗಿವೆ. ಇಂತಹ ಪರಿಸ್ಥಿತಿಯಲ್ಲಿ, ಅವುಗಳನ್ನು ನೀರಿನಲ್ಲಿ ಇರಿಸುವ ಮೂಲಕ, ನೀರು ಅವುಗಳನ್ನು ಹೀರಿಕೊಳ್ಳುವ ಕಾರಣ ಅವುಗಳ ಸಾಂದ್ರತೆಯು ಕಡಿಮೆಯಾಗುತ್ತದೆ, ಇದರಿಂದಾಗಿ ಅವು ನೈಸರ್ಗಿಕ ಫ್ಯಾಟ್ ಬಸ್ಟರ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ.
ದೇಹದ ಉಷ್ಣತೆಯನ್ನು ನಿರ್ವಹಿಸುತ್ತದೆ
ಮಾವಿನಹಣ್ಣು ತಿಂದ ನಂತರ ದೇಹದ ಉಷ್ಣತೆಯು ತುಂಬಾ ಹೆಚ್ಚಾಗುತ್ತದೆ. ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಸದಿದ್ದರೆ, ಥರ್ಮೋಜೆನಿಕ್ ಉತ್ಪಾದನೆಯು ಹೆಚ್ಚಾಗುತ್ತದೆ ಮತ್ತು ಇದು ಮೊಡವೆ, ಮಲಬದ್ಧತೆ, ತಲೆನೋವು ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. Samagrasuddi.co.in ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
Source: https://zeenews.india.com/kannada/health/do-you-know-these-health-benefits-of-soaked-mango-129829