IPL 2023: ಐಪಿಎಲ್​ನಲ್ಲಿ ಮತ್ತೊಂದು ದಾಖಲೆ ಬರೆದ ರೋಹಿತ್ ಶರ್ಮಾ

IPL 2023: ಹೈದರಾಬಾದ್​ನಲ್ಲಿ ಎಸ್​ಆರ್​ಹೆಚ್​ ವಿರುದ್ಧದ ಪಂದ್ಯದಲ್ಲಿ 28 ರನ್​ ಬಾರಿಸುವ ಮೂಲಕ ರೋಹಿತ್ ಶರ್ಮಾ ಐಪಿಎಲ್​ನಲ್ಲಿ ಮತ್ತೊಂದು ಮೈಲುಗಲ್ಲು ದಾಟಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ.ಸನ್​ರೈಸರ್ಸ್ ಹೈದರಾಬಾದ್ ವಿರುದ್ದ 14 ರನ್​ ಕಲೆಹಾಕುವುದರೊಂದಿಗೆ ರೋಹಿತ್ ಶರ್ಮಾ ಐಪಿಎಲ್​ನಲ್ಲಿ 6 ಸಾವಿರ ರನ್​ ಪೂರೈಸಿದರು. ಈ ಮೂಲಕ ವಿರಾಟ್ ಕೊಹ್ಲಿ, ಶಿಖರ್ ಧವನ್ ಹಾಗೂ ಡೇವಿಡ್ ವಾರ್ನರ್ ಬಳಿಕ ಐಪಿಎಲ್​ನಲ್ಲಿ 6000 ರನ್​ ಕಲೆಹಾಕಿದ ಬ್ಯಾಟ್ಸ್​ಮನ್ ಎನಿಸಿಕೊಂಡರು.ಐಪಿಎಲ್​ ರನ್ ಸರದಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕಿಂಗ್ ಕೊಹ್ಲಿ 220	ಇನಿಂಗ್ಸ್​ ಮೂಲಕ ಒಟ್ಟು 6844 ರನ್​ ಕಲೆಹಾಕಿದ್ದಾರೆ.ಇನ್ನು ದ್ವಿತೀಯ ಸ್ಥಾನದಲ್ಲಿ ಶಿಖರ್ ಧವನ್ ಇದ್ದು, ಧವನ್ 209 ಇನಿಂಗ್ಸ್​ಗಳ ಮೂಲಕ ಒಟ್ಟು 6477 ರನ್​ಗಳಿಸಿದ್ದಾರೆ.ಹಾಗೆಯೇ ಮೂರನೇ ಸ್ಥಾನದಲ್ಲಿ ಡೇವಿಡ್ ವಾರ್ನರ್ ಇದ್ದಾರೆ. ಕೇವಲ 167 ಇನಿಂಗ್ಸ್​ಗಳ ಮೂಲಕ ವಾರ್ನರ್ 6109	 ರನ್​ ಪೇರಿಸಿದ್ದಾರೆ.ಇದೀಗ 6 ಸಾವಿರ ರನ್​ ಸರದಾರರ ಪಟ್ಟಿಗೆ ರೋಹಿತ್ ಶರ್ಮಾ ಸೇರ್ಪಡೆಯಾಗಿದ್ದಾರೆ. 227 ಇನಿಂಗ್ಸ್​ಗಳ ಮೂಲಕ ಹಿಟ್​ಮ್ಯಾನ್ ಒಟ್ಟು 6014 ರನ್​ ಕಲೆಹಾಕಿದ್ದಾರೆ.ಇನ್ನು 6 ಸಾವಿರ ರನ್​ ಪೂರೈಸಲು ಅತೀ ಕಡಿಮೆ ಎಸೆತಗಳನ್ನು ಎದುರಿಸಿರುವುದು ಡೇವಿಡ್ ವಾರ್ನರ್. ವಾರ್ನರ್ ಕೇವಲ 4285 ಎಸೆತಗಳಲ್ಲಿ 6 ಸಾವಿರ ರನ್ ಪೂರೈಸಿದ್ದರು.ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದು, ಕಿಂಗ್ ಕೊಹ್ಲಿ 4595 ಎಸೆತಗಳಲ್ಲಿ 6 ಸಾವಿರ ರನ್ ಕಲೆಹಾಕಿದ್ದರು.ಹಾಗೆಯೇ 4616 ಎಸೆತಗಳಲ್ಲಿ 6 ಸಾವಿರ ರನ್ ಪೂರೈಸಿರುವ ರೋಹಿತ್ ಶರ್ಮಾ ಇದೀಗ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿದ್ದಾರೆ.
ಇನ್ನು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿರುವುದು ಶಿಖರ್ ಧವನ್. ಶಿಖರ್ 4738 ಎಸೆತಗಳಲ್ಲಿ 6 ಸಾವಿರ ರನ್ ಪೂರೈಸಿದ್ದರು.

source https://tv9kannada.com/photo-gallery/cricket-photos/ipl-2023-rohit-sharma-completes-6000-runs-in-ipl-kannada-news-zp-au50-559259.html

Leave a Reply

Your email address will not be published. Required fields are marked *