‘ಲೇಡೀಸ್ ಫಿಗರ್’ ನಿರ್ವಹಣೆಗೆ ಬಲು ಲಾಭಕಾರಿ ಈ ‘ಲೇಡಿ ಫಿಂಗರ್’!

Health: ಬೆಂಡೆಕಾಯಿ ಸೇವನೆಯಿಂದ ಒಂದಲ್ಲ ಹಲವು ಲಾಭಗಳಿವೆ. ಒಂದು ವೇಳೆ ನಿಮಗೂ ಕೂಡ ಈ ತರಕಾರಿ ಇಷ್ಟವಿಲ್ಲ ಎಂದಾದರೆ, ಇಂದಿನಿಂದಲೇ ಬೆಂಡೆಕಾಯಿ ಸೇವನೆಯನ್ನು ಆರಂಭಿಸಿ.  

ಬೆಂಡೆಕಾಯಿಯಲ್ಲಿ ಹೇರಳಪ್ರಮಾಣದಲ್ಲಿ ವಿಟಮಿನ್ ಸಿ ಕಂಡುಬರುತ್ತದೆ. ಒಂದು ವೇಳೆ ನೀವು ನಿತ್ಯ 100 ಗ್ರಾಂ ಬೆಂಡೆಕಾಯಿಯನ್ನು ಸೇವಿಸಿದರೆ, ನಿಮ್ಮ ದೇಹಕ್ಕೆ ಬೇಕಾಗುವ ಒಟ್ಟು ವಿಟಮಿನ್ ಸಿಯ ಶೇ.38 ರಷ್ಟು ಬೇಡಿಕೆ ಈಡೇರಲಿದೆ. ಎಲ್ಲರಿಗೂ ತಿಳಿದಿರುವಂತೆ, ವಿಟಮಿನ್-ಸಿ ಅನೇಕ ರೋಗಗಳು ಮತ್ತು ಸೋಂಕುಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ಬೆಂಡೆಕಾಯಿಯು ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ನಮ್ಮ ದೇಹದ ತೂಕವನ್ನು ಸಹ ನಿಯಂತ್ರಿಸುತ್ತದೆ. ಇದು ಒಂದು ಹಸಿರು ತರಕಾರಿಯಾಗಿದ್ದು, ಇದರ ಸೇವನೆಯಿಂದ ಹಲವು ರೋಗಗಳು ದೂರವಿರುತ್ತವೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹ ಇದು ಬಹಳ ಸಹಕಾರಿಯಾಗಿದೆ. ಮಧುಮೇಹ ರೋಗಿಗಳಿಗೂ ಕೂಡ ಬೆಂಡೆಕಾಯಿ ವರದಾನಕ್ಕಿಂತ ಕಡಿಮೆಯಿಲ್ಲ. ಹಾಗಾದರೆ ಬೆಂಡೆಕಾಯಿ ಸೇವನೆಯಿಂದಾಗುವ ಇತರ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ.

ಬೆಂಡೆಕಾಯಿ ಸೇವನೆಯಿಂದ ತೂಕ ಇಳಿಕೆಯಾಗುತ್ತದೆ

ತೂಕ ಇಳಿಕೆಗೆ ಬೆಂಡೆಕಾಯಿ ತುಂಬಾ ಪ್ರಯೋಜನಕಾರಿಯಾಗಿದೆ.  ಈ ತರಕಾರಿಯಲ್ಲಿ ಫೈಬರ್ ಪ್ರಮಾಣವು ತುಂಬಾ ಅಧಿಕವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಇದರ ಸೇವನೆಯು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಂದರೆ, ಈ ತರಕಾರಿಯಲ್ಲಿ ನೀವು ಹೆಚ್ಚಿನ ಕ್ಯಾಲೊರಿಗಳನ್ನು ಪಡೆಯುವುದಿಲ್ಲ ಮತ್ತು ಇದು ತೂಕ ಇಳಿಕೆಗೆ ಸಹಕಾರಿ ಸಾಬೀತಾಗುತ್ತದೆ..

ಕ್ಯಾನ್ಸರ್ ರೋಗಿಗಳಿಗೂ ಕೂಡ ಇದು ಪರಿಹಾರ ನೀಡುತ್ತದೆ
ಕ್ಯಾನ್ಸರ್ ನಂತಹ ಮಾರಕ ಕಾಯಿಲೆಯಲ್ಲಿಯೂ ಕೂಡ ಬೆಂಡೆಕಾಯಿ ಸೇವನೆ ತುಂಬಾ ಪ್ರಯೋಜನಕಾರಿಯಾಗಿದೆ. ಒಂದು ವೇಳೆ ಇದನ್ನು ನೀವು ನಿಮ್ಮ ನಿತ್ಯದ ಆಹಾರದಲ್ಲಿ ಶಾಮೀಲುಗೊಳಿಸಿದರೆ, ಅದು ನಿಮ್ಮ ಕರುಳಿನಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದುಹಾಕುತ್ತದೆ. ಅಂದರೆ, ಇದು ಕರುಳಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ಮಧುಮೇಹ ರೋಗಿಗಳಿಗೂ ಲಾಭಕಾರಿಯಾಗಿದೆ
ಮಧುಮೇಹ ರೋಗಿಗಳಿಗೆ ಬೆಂಡೆಕಾಯಿ ವರದಾನಕ್ಕಿಂತ ಕಡಿಮೆಯಿಲ್ಲ. ನೀವು ಕೂಡ ಬೆನ್ದೆಕಾಯಿಯನ್ನು ನಿಮ್ಮ ಆಹಾರದಲ್ಲಿ ಶಾಮೀಲುಗೊಳಿಸಿದರೆ, ನಿಮ್ಮ ರಕ್ತದಲ್ಲಿನ ಸಕ್ಕರೆಯು ನಿಯಂತ್ರಣದಲ್ಲಿರುತ್ತದೆ. ಆದರೆ, ಗಂಭೀರ ರೋಗಲಕ್ಷಣಗಳನ್ನು ಹೊಂದಿರುವವರು ಬೆಂಡೆಕಾಯಿ  ಸೇವಿಸುವ ಮೊದಲು ತಮ್ಮ ವೈದ್ಯರನ್ನು ಸಂಪರ್ಕಿಸಬೇಕು.

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. Samagrasuddi.co.in ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

Source: https://zeenews.india.com/kannada/health/this-lady-finger-will-help-in-protecting-figure-of-ladies-through-weight-loss-130050

Leave a Reply

Your email address will not be published. Required fields are marked *