ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಉಗುರಿನಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ!

Health: ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿ ಸಾಕಷ್ಟು ಹಾಳಾಗುತ್ತಿದ್ದು. ಇದು ಕೊಲೆಸ್ಟ್ರಾಲ್ ಸೇರಿದಂತೆ ಹೃದ್ರೋಗ ಪಾರ್ಶ್ವವಾಯುಗಳಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತಿದೆ. ದೇಹದಲ್ಲಿ, ಕೊಲೆಸ್ಟ್ರಾಲ್ ಹೆಚ್ಚಾದಾಗ, ನಿಮ್ಮ ಉಗುರುಗಳಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.  

ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿ ಸಾಕಷ್ಟು ಹಾಳಾಗುತ್ತಿದ್ದು. ಇದು ಕೊಲೆಸ್ಟ್ರಾಲ್ ಸೇರಿದಂತೆ ಹೃದ್ರೋಗ ಪಾರ್ಶ್ವವಾಯುಗಳಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತಿದೆ. ಇದೇ ವೇಳೆ ಶರೀರದಲ್ಲಿ, ಕೊಲೆಸ್ಟ್ರಾಲ್ ಮಟ್ಟದಲ್ಲಿನ ಹೆಚ್ಚಳದಿಂದಾಗಿ, ಬೊಜ್ಜು ಮತ್ತು ಅಧಿಕ ರಕ್ತದೊತ್ತಡದ ಅಪಾಯವು ಜನರಲ್ಲಿ ಹೆಚ್ಚಾಗುತ್ತದೆ. ಕೊಲೆಸ್ಟ್ರಾಲ್ ಹೆಚ್ಚಾದಾಗ, ನಿಮ್ಮ ಉಗುರುಗಳಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ಅವುಗಳನ್ನು ಮರೆತೂ ಕೂಡ ನಿರ್ಲಕ್ಷಿಸಬೇಡಿ.

ಕೊಲೆಸ್ಟ್ರಾಲ್ ಹೆಚ್ಚಾದಾಗ ಉಗುರುಗಳಲ್ಲಿ ಈ ಲಕ್ಷಣಗಳು ಕಂಡುಬರುತ್ತವೆ
ಉಗುರುಗಳ ಹಳದಿ

ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ ನಮ್ಮ ಉಗುರುಗಳ ಬಣ್ಣ ಹಳದಿಯಾಗುತ್ತದೆ. ಇದು ದೇಹದಲ್ಲಿನ ಕಳಪೆ ರಕ್ತ ಪರಿಚಲನೆಯನ್ನು ಸೂಚಿಸುತ್ತದೆ. ಕಳಪೆ ರಕ್ತ ಪರಿಚಲನೆಯ ಕಾರಣ , ನಿಮ್ಮ ಉಗುರುಗಳ ಬಣ್ಣವು ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ ಅಥವಾ ಉಗುರುಗಳಲ್ಲಿ ಬಿರುಕುಗಳು ಮೂಡಲು ಪ್ರಾರಂಭಿಸುತ್ತವೆ. ಅಷ್ಟೇ ಅಲ್ಲ, ಇದು ನಿಮ್ಮ ಉಗುರುಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.

ಕೈ ನೋವು
ದೇಹದಲ್ಲಿ ಪ್ಲೇಕ್ ಸಂಗ್ರಹವಾದಾಗ ಅದು ಅಪಧಮನಿಗಳನ್ನು ಮುಚ್ಚಿಹಾಕುತ್ತದೆ, ಇದನ್ನು ಅಪಧಮನಿಕಾಠಿಣ್ಯ ಎಂದು ಕರೆಯಲಾಗುತ್ತದೆ, ಕೊಲೆಸ್ಟ್ರಾಲ್ ದೇಹದಲ್ಲಿ ಸಂಗ್ರಹವಾಗುವುದರಿಂದ ಅದು ಕೈಗಳ ರಕ್ತನಾಳಗಳಲ್ಲಿ ಅಡೆತಡೆ ಉಂಟುಮಾಡಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ, ಕೈಯಲ್ಲಿ ನೋವು ಪ್ರಾರಂಭವಾಗುತ್ತದೆ.

ಕೈಯಲ್ಲಿ ಜುಮ್ಮೆನಿಸುವಿಕೆ
ದೇಹದ ಕೆಲವು ಭಾಗಗಳಲ್ಲಿ ರಕ್ತದ ಹರಿವಿನ ಅಡೆತಡೆಯಿಂದಾಗಿ ಕೈಯಲ್ಲಿ ಜುಮ್ಮೆನಿಸುವಿಕೆ ಅನುಭವ ಉಂಟಾಗುತ್ತದೆ. ಅಧಿಕ ಕೊಲೆಸ್ಟ್ರಾಲ್ ಮತ್ತು ಸ್ಥೂಲಕಾಯತೆಯಿಂದಾಗಿ, ಸರಿಯಾದ ರಕ್ತದ ಹರಿವು ಸಾಧ್ಯವಾಗುವುದಿಲ್ಲ. ಇದರಿಂದ ಕೈಯಲ್ಲಿ ಜುಮ್ಮೆನಿಸುವಿಕೆ ಉಂಟಾಗುತ್ತದೆ. ಹೀಗಾಗಿ ಕೈಗಳಲ್ಲಿ ಜುಮ್ಮೆನ್ನುವಿಕೆ ಅನುಭವಕ್ಕೆ ಬಂದರೆ ನಿರ್ಲಕ್ಷಿಸಬಾರದು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. Samagrasuddi.co.in ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

Source: https://zeenews.india.com/kannada/health/when-bad-cholesterol-level-rises-in-body-nails-show-these-symptoms-130212

Leave a Reply

Your email address will not be published. Required fields are marked *