Sachin Tendulkar Birthday: ಕ್ರಿಕೆಟ್ ದೇವರು ಸಚಿನ್​ ತೆಂಡೂಲ್ಕರ್ ಎಷ್ಟು ಕೋಟಿ ಒಡೆಯ ಗೊತ್ತಾ?

ಇಂದು ಕ್ರಿಕೆಟ್ ಲೋಕದ ರಾಜ ಎಂದೇ ಕರೆಸಿಕೊಳ್ಳುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಜನ್ಮದಿನ. ವಿಶ್ವ ಕ್ರಿಕೆಟ್​ನಲ್ಲಿ ನೂರಾರು ದಾಖಲೆ ಸೃಷ್ಟಿಸಿರುವ ಸಚಿನ್, ಆದಾಯದ ವಿಚಾರದಲ್ಲೂ ಮುಂದಿದ್ದಾರೆ. ಸದ್ಯ ಕ್ರಿಕೆಟ್​ ಪ್ರಂಪಚಕ್ಕೆ ವಿದಾಯ ಹೇಳಿ ವರ್ಷಗಳೇ ಕಳೆದಿದ್ದರೂ ಸಚಿನ್ ಅವರ ಖಜಾನೆಯ ಗಾತ್ರ ಮಾತ್ರ ಹೆಚ್ಚುತ್ತಲೆ ಇದೆ.ತಮ್ಮ 50 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸಚಿನ್ ತೆಂಡೂಲ್ಕರ್​ಗೆ ದುಬಾರಿ ಕಾರುಗಳೆಂದರೆ ಬಲು ಅಚ್ಚುಮೆಚ್ಚು. ತಮ್ಮ ಗ್ಯಾರೇಜ್​ನಲ್ಲಿ ಬಹು ಐಷಾರಾಮಿ ವಾಹನಗಳನ್ನು ಹೊಂದಿರುವ ಸಚಿನ್ ಅವರ ಬಳಿ ಎಷ್ಟು ಆಸ್ತಿ ಇದೆ ಎಂಬುದನ್ನು ತಿಳಿದರೆ ನೀವೇ ಶಾಕ್ ಆಗ್ತೀರ..!ಭಾರತ ಕ್ರಿಕೆಟ್​ನ ಚಕ್ರವರ್ತಿ ಸಚಿನ್ ತೆಂಡೂಲ್ಕರ್ ಅವರ ಬಳಿ ಕೋಟಿಗಟ್ಟಲೆ ಸಂಪತ್ತು ಇದೆ. 16ನೇ ವಯಸ್ಸಿನಲ್ಲಿ ಕ್ರಿಕೆಟ್ ಜಗತ್ತಿಗೆ ಕಾಲಿಟ್ಟ ಅವರು ಇಂದು ಸುಮಾರು 1350 ಕೋಟಿ ಆಸ್ತಿ ಹೊಂದಿದ್ದಾರೆ.ಮುಂಬೈನ ಬಾಂದ್ರಾದಲ್ಲಿ ಸಚಿನ್ ಐಷಾರಾಮಿ ಬಂಗಲೆ ಖರೀದಿಸಿದ್ದಾರೆ. 2007 ರಲ್ಲಿ ಖರೀದಿಸಿದ ಈ ಬಂಗಲೆ ಮೌಲ್ಯ ಆಗಲೇ ಸುಮಾರು 39 ಕೋಟಿ ಇತ್ತು. ಸದ್ಯ ಅವರ ಬಂಗಲೆಯ ಬೆಲೆ ಸುಮಾರು 100 ಕೋಟಿ ರೂಪಾಯಿ.  ಇದಲ್ಲದೆ, ಸಚಿನ್ ಕೇರಳದಲ್ಲಿ ಸುಮಾರು 78 ಕೋಟಿ ಮೌಲ್ಯದ ಮತ್ತೊಂದು ಅದ್ದೂರಿ ಬಂಗಲೆಯನ್ನು ಹೊಂದಿದ್ದಾರೆ.ಸಚಿನ್ ಬಳಿ ಬಂಗಲೆಯಲ್ಲದೆ, ಹಲವು ಐಷಾರಾಮಿ ವಾಹನಗಳ ಇವೆ. ಸಚಿನ್ ಸದ್ಯ 20 ಕೋಟಿ ಬೆಲೆಯ ಕಾರನ್ನು ಹೆಚ್ಚಾಗಿ ಬಳಸುತ್ತಾರೆ. ಸಚಿನ್ ಅವರ ಐಷಾರಾಮಿ ವಾಹನಗಳಲ್ಲಿ ಫೆರಾರಿ 360 ಮಾಡೆನ್, ಬಿಎಂಡಬ್ಲ್ಯೂ ಐ8, ಬಿಎಂಡಬ್ಲ್ಯೂ 7 ಸಿರೀಸ್, 750Li M ಸ್ಪೋರ್ಟ್, ನಿಸ್ಸಾನ್ GT-R, ಆಡಿ ಕ್ಯೂ7, ಬಿಎಂಡಬ್ಲ್ಯೂ ಎಂ6 ಗ್ರ್ಯಾನ್ ಕೂಪೆ ಮತ್ತು ಬಿಎಂಡಬ್ಲ್ಯೂ ಎಂ5 30 ಜಹ್ರೆ ಸೇರಿವೆ.

source https://tv9kannada.com/photo-gallery/cricket-photos/sachin-tendulkar-birthday-know-about-his-net-worth-home-and-luxury-lifestyle-psr-au14-562757.html

Views: 0

Leave a Reply

Your email address will not be published. Required fields are marked *