ನಕಲಿ‌ ಬಂಗಾರ ನೀಡಿ ವಂಚನೆ : ಚಿಕ್ಕಜಾಜೂರು ಪೊಲೀಸರ ಕಾರ್ಯಾಚರಣೆ : ಆರೋಪಿ ಬಂಧನ, ನಗದು ವಶ

 

ಚಿತ್ರದುರ್ಗ, (ಏ.25) : ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ಗ್ರಾಮದ ರವಿ ಎಂಬಾತನಿಗೆ ಅಸಲಿ ಚಿನ್ನದ ನಾಣ್ಯಗಳು ಎಂದು ನಂಬಿಸಿ, 250 ಗ್ರಾಂ ನಷ್ಟು ನಕಲಿ ಚಿನ್ನದ ನಾಣ್ಯಗಳನ್ನು ಕೊಟ್ಟು, ವಂಚಿಸಿದ ಆರೋಪಿಯನ್ನು ಚಿಕ್ಕಜಾಜೂರು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನ ಎಸ್ ಬಿ ಆರ್ ಕಾಲೋನಿಯ ರಾಮಪ್ಪ ಬಂಧಿತ ಆರೋಪಿಯಾಗಿದ್ದು, ಆತನಿಂದ 6,40,000/- ರೂ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಏಪ್ರಿಲ್ 11 ರಂದು ರವಿಯವರು ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಬೇಧಿಸಿರುವ ಚಿಕ್ಕಜಾಜೂರು ಠಾಣೆಯ ಪೊಲೀಸರು ಆರೋಪಿ ರಾಮಪ್ಪನನ್ನು ಬಂಧಿಸಿದ್ದಾರೆ.

ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಪರಶುರಾಮ ಕೆ, ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಸ್ವಾಮಿ ಮತ್ತು ಚಿತ್ರದುರ್ಗ ಉಪವಿಭಾಗದ ಡಿವೈಎಸ್‍ಪಿ ಅನಿಲ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ಹೊಳಲ್ಕೆರೆ ಸಿಪಿಐ ರವರಾದ ದೀಪಕ್ ರವರ ನೇತೃತ್ವದಲ್ಲಿ ಚಿಕ್ಕಜಾಜೂರು ಪೊಲೀಸ್ ಠಾಣೆ ಪಿಎಸ್‍ಐ ತಿಪ್ಪೇಸ್ವಾಮಿ ಟಿ.ಎನ್. ಹಾಗೂ ಸಚಿನ್ ಪಟೇಲ್ ಮತ್ತು ಸಿಬ್ಬಂದಿ
ರುದ್ರೇಶ್, ರಾಘವೇಂದ್ರ, ಕಿರಣ, ಕುಮಾರಸ್ವಾಮಿ, ಕಿರಣ್ ಕುಮಾರ್, ಗಿರೀಶ್, ಮಲ್ಲೇಶ, ಅನಿಲ್ ಕುಮಾರ, ಮಂಜಯ್ಯ ರವರನ್ನೊಳಗೊಂಡ ತಂಡ ಆರೋ ಪತ್ತೆ ಕಾರ್ಯಾಚರಣೆ ನಡೆಸಿತ್ತು.

ಚಿಕ್ಕಜಾಜೂರು ಪೊಲೀಸರ ಈ ಕಾರ್ಯವನ್ನು ಚಿತ್ರದುರ್ಗ ಪೊಲೀಸ್ ಅಧೀಕ್ಷಕರಾದ ಪರಶುರಾಮ ಕೆ, ಐ.ಪಿ.ಎಸ್, ರವರು ‌ಶ್ಲಾಘಿಸಿರುತ್ತಾರೆ.

The post ನಕಲಿ‌ ಬಂಗಾರ ನೀಡಿ ವಂಚನೆ : ಚಿಕ್ಕಜಾಜೂರು ಪೊಲೀಸರ ಕಾರ್ಯಾಚರಣೆ : ಆರೋಪಿ ಬಂಧನ, ನಗದು ವಶ first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/DCnZQT7
via IFTTT

Views: 0

Leave a Reply

Your email address will not be published. Required fields are marked *