RCB vs KKR Live Score IPL 2023: ಕೆಕೆಆರ್ 150 ರನ್ ಪೂರ್ಣ; ಆರ್​ಸಿಬಿಗೆ ಬೇಕು ವಿಕೆಟ್

RCB vs KKR Live Score IPL 2023: ಕೆಕೆಆರ್ 150 ರನ್ ಪೂರ್ಣ; ಆರ್​ಸಿಬಿಗೆ ಬೇಕು ವಿಕೆಟ್
RCB vs KKR Live Score Royal Challengers Bangalore vs Kolkata Knight Riders IPL 2023 match scorecard online in Kannada

ಐಪಿಎಲ್​​ನ (IPL 2023) 36ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಕೋಲ್ಕತ್ತಾ ನೈಟ್ ರೈಡರ್ಸ್( Kolkata Knight Riders vs Royal Challengers Bangalore) ತಂಡವನ್ನು ಎದುರಿಸುತ್ತಿದೆ. ಎರಡು ತಂಡಗಳು ಈ ಸೀಸನ್​ನಲ್ಲಿ ಎರಡನೇ ಬಾರಿಗೆ ಇಂದು ಬೆಂಗಳೂರಿನ ಎಂ. ಚಿನ್ನಸ್ವಾಮಿಯಲ್ಲಿ ಕ್ರೀಡಾಂಗಣದಲ್ಲಿ (M. Chinnaswamy Stadium in Bengaluru) ಮುಖಾಮುಖಿಯಾಗಿವೆ. ಸದ್ಯ ಆರ್​ಸಿಬಿ ತಂಡವನ್ನು ಮುನ್ನಡೆಸುತ್ತಿರುವ ಕಿಂಗ್ ಕೊಹ್ಲಿ ಸತತ ಎರಡು ಪಂದ್ಯಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. ಮತ್ತೊಂದೆಡೆ, ಕೆಕೆಆರ್ ಸಿಎಸ್‌ಕೆ ಎದುರು 49 ರನ್‌ಗಳಿಂದ ಹೀನಾಯವಾಗಿ ಸೋತಿತ್ತು. ಇಲ್ಲಿಯವರೆಗೆ ಎರಡೂ ತಂಡಗಳು ಐಪಿಎಲ್​ನಲ್ಲಿ ತಲಾ 7 ಪಂದ್ಯಗಳನ್ನಾಡಿದ್ದು, ಇದರಲ್ಲಿ ಆರ್​ಸಿಬಿ 4 ರಲ್ಲಿ ಗೆದ್ದು 3 ರಲ್ಲಿ ಸೋಲನುಭವಿಸಿದೆ. ಇತ್ತ ಕೆಕೆಆರ್ 2 ರಲ್ಲಿ ಗೆದ್ದು 5 ರಲ್ಲಿ ಸೋಲನುಭವಿಸಿದೆ. 2ರಲ್ಲಿ ಒಂದು ಗೆಲುವು ಆರ್​ಸಿಬಿ ವಿರುದ್ಧವೇ ಬಂದಿದ್ದು ಎಂಬುದು ಇಲ್ಲಿ ವಿಶೇಷ.

source https://tv9kannada.com/sports/cricket-news/rcb-vs-kkr-live-score-royal-challengers-bangalore-vs-kolkata-knight-riders-ipl-2023-match-scorecard-online-in-kannada-psr-au14-2-au14-564320.html

Views: 0

Leave a Reply

Your email address will not be published. Required fields are marked *