IPL 2023: ಮೇಯರ್ಸ್​ ಸಿಡಿಲಬ್ಬರ; ಸಿಡಿದ 54 ರನ್​ಗಳಲ್ಲಿ 52 ರನ್ ಬೌಂಡರಿಗಳಿಂದಲೇ ಬಂದವು

ಮೊಹಾಲಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ 38ನೇ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸ್ಫೋಟಕ ಆರಂಭಿಕ ಆಟಗಾರ ಮತ್ತೊಮ್ಮೆ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಈ ಐಪಿಎಲ್​​ನಲ್ಲಿ ತಮ್ಮ ನಾಲ್ಕನೇ ಅರ್ಧಶತಕ ಸಿಡಿಸಿದ್ದಾರೆ.ತಮ್ಮ ಇನ್ನಿಂಗ್ಸ್​ನಲ್ಲಿ ಒಟ್ಟು 24 ಎಸೆತಗಳನ್ನು ಎದುರಿಸಿದ ಮೇಯರ್ಸ್​ 7 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 54 ರನ್ ಚಚ್ಚಿದರು.ಅದರಲ್ಲೂ ಮೇಯರ್ಸ್​ ಅವರ ಈ ಅರ್ಧಶತಕ ಕೇವಲ 11 ಎಸೆತಗಳಲ್ಲಿ ಅಂದರೆ ಬೌಂಡರಿಗಳಿಂದಲೇ ಬಂದಿತು. ಅಂತಿಮವಾಗಿ ರಬಾಡ ಎಸೆದ ಪವರ್​ ಪ್ಲೇ ಓವರ್​ನಲ್ಲಿ ಮೇಯರ್ಸ್​ ವಿಕೆಟ್ ಒಪ್ಪಿಸಿದರು.ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುತ್ತಿರುವ ಮೇಯರ್ಸ್, ಈ ಸೀಸನ್​​ನಲ್ಲಿ ನಾಲ್ಕನೇ ಬಾರಿಗೆ ಅರ್ಧಶತಕ ಪೂರೈಸಿದರು. ಅದರಲ್ಲೂ ಸತತ ಎರಡು ಅರ್ಧಶತಕ ಬಾರಿಸಿ ಸೀಸನ್ ಆರಂಭಿಸಿದ್ದರು. ಮೇಯರ್ಸ್ ಇದುವರೆಗೆ 8 ಇನ್ನಿಂಗ್ಸ್‌ಗಳನ್ನಾಡಿದ್ದು, 160ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್​ ಬೀಸಿ 297 ರನ್ ಬಾರಿಸಿದ್ದಾರೆ. ಅವರು ಇದುವರೆಗೆ 26 ಬೌಂಡರಿ ಹಾಗೂ 20 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

source https://tv9kannada.com/photo-gallery/cricket-photos/ipl-2023-kyle-mayers-hits-half-century-in-just-20-balls-against-punjab-kings-psr-au14-565859.html

Leave a Reply

Your email address will not be published. Required fields are marked *