RCB Playing XI vs DC: ಅನುಜ್ ರಾವತ್ ಹೊರಕ್ಕೆ: ಆರ್​ಸಿಬಿ ಪರ ಇಂದು ಈ ಹೊಸ ಬ್ಯಾಟರ್ ಕಣಕ್ಕೆ

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿಂದು ಎರಡು ಮಹತ್ವದ ಪಂದ್ಯಗಳು ನಡೆಯಲಿದೆ. ಮೊದಲ ಮ್ಯಾಚ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿ ಆಗಲಿದೆ. ನಂತರ ನಡೆಯಲಿರುವ ದ್ವಿತೀಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.ಆರ್​ಸಿಬಿ ಪಾಯಿಂಟ್ ಟೇಬಲ್​ನಲ್ಲಿ ಐದನೇ ಸ್ಥಾನದಲ್ಲಿದೆ. ಆಡಿರುವ ಒಂಬತ್ತು ಪಂದ್ಯಗಳಲ್ಲಿ ಐದು ಗೆಲುವು, ನಾಲ್ಕು ಸೋಲು ಕಂಡು 10 ಅಂಕ ಸಂಪಾದಿಸಿದೆ. -0.030 ರನ್​ರೇಟ್ ಹೊಂದಿದೆ. ಹೀಗಾಗಿ ಇಂದಿನ ಪಂದ್ಯ ಬೆಂಗಳೂರಿಗೆ ಮಹತ್ವದ್ದಾಗಿದೆ.ಆರ್​ಸಿಬಿ ಪರ ಬ್ಯಾಟಿಂಗ್​ನಲ್ಲಿ ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್ ಬಿಟ್ಟರೆ ಉಳಿದವರು ಯಾರೂ ಅಬ್ಬರಿಸುತ್ತಿಲ್ಲ. ದಿನೇಶ್ ಕಾರ್ತಿಕ್ ಈ ಸೀಸನ್​ ಮಂಕಾಗಿದ್ದಾರೆ.ಅನುಜ್ ರಾವತ್, ಸುಯೇಶ್ ಪ್ರಭುದೇಸಾಯಿ, ಮಹಿಪಾಲ್ ಲುಮ್ರೂರ್, ಶಹ್ಬಾಜ್ ಅಹ್ಮದ್ ನೆರವಾಗುತ್ತಿಲ್ಲ. ಹೀಗಾಗಿ ಇಂದು ಹೊಸ ಬ್ಯಾಟರ್ ಕಣಕ್ಕಿಳಿಯುವ ಸಾಧ್ಯತೆ ಇದೆ.ಡೇವಿಡ್ ವಿಲ್ಲಿ ಬದಲಿಗೆ ಆರ್​ಸಿಬಿ ತಂಡ ಸೇರಿರುವ ಕೇದಾರ್ ಜಾಧವ್​ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳುವುದು ದಟ್ಟವಾಗಿದೆ. ಅನುಜ್ ರಾವತ್ ಬದಲಿಗೆ ಆಯ್ಕೆ ಆಗಬಹುದು. 38 ವರ್ಷದ ಕೇದಾರ್ ಜಾಧವ್ ಅಭ್ಯಾಸದ ವೇಳೆ ಫೋರ್, ಸಿಕ್ಸರ್ ಸಿಡಿಸಿ ತಾನಿನ್ನೂ ಫಿಟ್ ಆಗಿದ್ದೇನೆ, ನನ್ನಲ್ಲೂ ಕ್ರಿಕೆಟ್ ಆಡುವ ಶಕ್ತಿಯಿದೆ ಎಂದು ತೋರಿಸಿದ್ದಾರೆ.ಕೇದರ್ ಜಾಧವ್ ಆರ್​ಸಿಬಿ ತಂಡದಲ್ಲಿ ಮಧ್ಯಮ ಕ್ರಮಾಂಕದ ಬಲ ತುಂಬಲಿದ್ದಾರೆ. ಸದ್ಯ ಬೆಂಗಳೂರು ತಂಡದಲ್ಲಿ ಫಾಪ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಬಿಟ್ಟರೆ ಇತರೆ ಯಾವ ಬ್ಯಾಟರ್​ ಕೂಡ ಅಬ್ಬರಿಸುತ್ತಿಲ್ಲ. ಹೀಗಾಗಿ ಜಾಧವ್ 4 ಅಥವಾ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.ಇನ್ನು ರಾಯಲ್ ಚಾಲೆಂಜರ್ಸ್ ಬೌಲಿಂಗ್ ವಿಭಾಗ ಬಲಿಷ್ಠ ಆಗಿರುವುದು ಸಂತಸದ ಸಂಗತಿ. ಜೋಶ್ ಹೇಜ್ಲೆವುಡ್ ಹಾಗೂ ಮೊಹಮ್ಮದ್ ಸಿರಾಜ್ ಪರಿಣಾಮಕಾರಿ ಆಗಿ ಗೋಚರಿಸಿದ್ದಾರೆ. ಹಸರಂಗ, ಕರ್ಣ್ ಶರ್ಮಾ ಇರುವ ಸ್ಪಿನ್ ವಿಭಾಗ ಕೂಡ ಬಲಿಷ್ಠವಾಗಿದೆ.ಆರ್​ಸಿಬಿ-ಡೆಲ್ಲಿ ಮುಖಾಮುಖಿ ನೋಡಿದರೆ ಐಪಿಎಲ್ ವೇದಿಕೆಯಲ್ಲಿ ಉಭಯ ತಂಡಗಳು 30 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್‌ಸಿಬಿ 19 ಬಾರಿ ಗೆದ್ದಿದ್ದರೆ, ಡೆಲ್ಲಿ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 1 ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ.

source https://tv9kannada.com/photo-gallery/cricket-photos/rcb-playing-xi-kedar-jadhav-may-feature-in-the-playing-xi-for-todays-match-against-delhi-capitals-vb-571217.html

Leave a Reply

Your email address will not be published. Required fields are marked *