Abdul Samad: ನೋ ಬಾಲ್ ಡ್ರಾಮ: ಅಬ್ದುಲ್ ಸಮದ್ ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸಿ ಪಂದ್ಯ ಗೆಲ್ಲಿಸಿದ ವಿಡಿಯೋ ನೋಡಿ

Abdul Samad: ನೋ ಬಾಲ್ ಡ್ರಾಮ: ಅಬ್ದುಲ್ ಸಮದ್ ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸಿ ಪಂದ್ಯ ಗೆಲ್ಲಿಸಿದ ವಿಡಿಯೋ ನೋಡಿ
Sundeep Sharma and Abdul Samad

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಅನೇಕ ರೋಚಕ ಕಾದಾಟಕ್ಕೆ ಸಾಕ್ಷಿಯಾಗಿದೆ. ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿದ ಪಂದ್ಯಗಳು ಈ ಬಾರಿ ಹೆಚ್ಚಿವೆ. ಈ ಸಾಲಿಗೆ ಮತ್ತೊಂದು ಸೇರ್ಪಡೆ ರಾಜಸ್ಥಾನ್ ರಾಯಲ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ (RR vs SRH) ನಡುವಣ ಪಂದ್ಯ. ಭಾನುವಾರ ಜೈಪುರದ ಸವಾಯ್ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಹೈದರಾಬಾದ್ 4 ವಿಕೆಟ್​ಗಳ ಗೆಲುವು ಸಾಧಿಸಿತು. ಕೊನೆಯ ಎಸೆದ ವರೆಗೂ ನಡೆದ ಕಾದಾಟದಲ್ಲಿ ಎಸ್​ಆರ್​ಹೆಚ್ ಮೇಲುಗೈ ಸಾಧಿಸಿತು. ಹೀರೋ ಆಗಿದ್ದ ಸಂದೀಶ್ ಶರ್ಮಾ (Sundeep Sharma) ಒಂದು ನಿಮಿಷದ ಒಳಗೆ ಜೀರೋ ಆದರೆ, ಅಬ್ದುಲ್ ಸಮದ್ (Abdul Samad) ಸ್ಫೋಟಕ ಸಿಕ್ಸ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು.

ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ 20 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿತು. ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್​ಗೆ ಅನ್ಮೋಲ್​ಪ್ರೀತ್ ಸಿಂಗ್ (33) ಮತ್ತು ಅಭಿಷೇಕ್ ಶರ್ಮಾ (55) ಸ್ಫೋಟಕ ಆರಂಭ ಒದಗಿಸಿದರು. ನಂತರ ಬಂದ ರಾಹುಲ್ ತ್ರಿಪಾಠಿ ಕೂಡ ಕೇವಲ 29 ಎಸೆತಗಳಲ್ಲಿ 2 ಫೋರ್, 3 ಸಿಕ್ಸರ್ ಸಿಡಿಸಿ 47 ರನ್ ಸಿಡಿಸಿದರು. ಹೆನ್ರಿಚ್ ಕ್ಲಾಸೆನ್ 12 ಎಸೆತಗಳಲ್ಲಿ 26 ರನ್ ಗಳಿಸಿದರೆ ನಾಯಕ ಆ್ಯಡಂ ಮಾರ್ಕ್ರಮ್ (6) ವೈಫಲ್ಯ ಅನುಭವಿಸಿದರು. ಈ ಸಂದರ್ಭ ತಂಡ ಸೋಲಿನ ಸುಳಿಗೆ ಸಿಲುಕಿತ್ತು.

IPL 2023: ವಿರಾಟ್ ಕೊಹ್ಲಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಖ್ಯಾತ ಕ್ರಿಕೆಟಿಗನ ಪುತ್ರರು

ಆದರೆ, ತಂಡದ ಗೆಲುವಿನ ಆಸೆ ಚಿಗುರಿಸಿದ್ದು ಗ್ಲೆನ್ ಪಿಲಿಪ್ಸ್. ಕೇವಲ 7 ಎಸೆತಗಳಲ್ಲಿ 1 ಫೋರ್, 3 ಸಿಕ್ಸರ್ ಬಾರಿಸಿ 25 ರನ್ ಗಳಿಸಿ ಪಂದ್ಯವನ್ನು ಎಸ್​ಆರ್​ಹೆಚ್ ಕಡೆ ತಿರುಗಿಸಿ ನಿರ್ಗಮಿಸಿದರು. ಆದರೆ, ಕೊನೆಯ ಓವರ್​ನಲ್ಲಿ ಹೈದರಾಬಾದ್​ಗೆ ಗೆಲ್ಲಲು 17 ರನ್​ಗಳ ಅವಶ್ಯಕತೆಯಿತ್ತು. ಕ್ರೀಸ್​ನಲ್ಲಿ ಅಬ್ದುಲ್ ಸಮದ್ ಮತ್ತು ಮಾರ್ಕೊ ಜಾನ್ಸೆನ್ ಇದ್ದರೆ ಸಂದೀಪ್ ಶರ್ಮಾ ಬೌಲರ್ ಆಗಿದ್ದರು. ಮೊದಲ ಎಸೆತದಲ್ಲಿ ಸಮದ್ 2 ರನ್ ಗಳಿಸಿದರೆ, ದ್ವಿತೀಯ ಎಸೆತದಲ್ಲಿ ಲಾಂಗ್ ಆನ್​ ಮೂಲಕ ಸಿಕ್ಸ್ ಸಿಡಿಸಿದರು. ಮೂರನೇ ಎಸೆತದಲ್ಲಿ 2 ಹಾಗೂ ನಾಲ್ಕನೇ ಮತ್ತು ಐದನೇ ಎಸೆತದಲ್ಲಿ 1 ರನ್ ಬಂದವು. ಹೀಗಾಗಿ ಕೊನೆಯ ಎಸೆತದಲ್ಲಿ ಎಸ್​ಆರ್​ಹೆಚ್​ಗೆ ಗೆಲ್ಲಲು 5 ರನ್​ಗಳು ಬೇಕಾದವು.

6ನೇ ಎಸೆತದ ಸಂದೀಪ್ ಬೌಲಿಂಗ್​ನಲ್ಲಿ ಸಿಕ್ಸ್ ಸಿಡಿಸಲು ಹೋಗಿ ಸಮದ್ ಔಟಾದರು. ಆರ್​ಆರ್​ ಆಟಗಾರರು ಗೆಲುವನ್ನು ಸಂಭ್ರಮಿಸುತ್ತಿದ್ದರು. ಆದರೆ, ಕ್ಷಣಾರ್ಧದಲ್ಲಿ ಪಂದ್ಯದ ಗತಿ ಬದಲಾಯಿತು. ಯಾಕೆಂದರೆ ಸಂದೀಪ್ ಹಾಕಿದ ಕೊನೆಯ ಎಸೆತ ನೋ ಬಾಲ್ ಆಗಿತ್ತು. ಚೆಂಡು ಎಸೆಯುವಾಗ ಸಂದೀಪ್ ಅವರ ಕಾಲು ಗೆರೆದಾಟಿ ಮುಂದೆಬಂದಿತ್ತು. ಹೀಗಾಗಿ ಸಮದ್​ಗೆ ಆಡಲು ಮತ್ತೊಂದು ಎಸೆತ ಸಿಕ್ಕಿತು. ಸಿಕ್ಕ ಅವಕಾಶವನ್ನು ಅದ್ಭುತವಾಗಿ ಉಪಯೋಗಿಸಿಕೊಂಡ ಅಬ್ದುಲ್ ಫ್ರೀ ಹಿಟ್​ನಲ್ಲಿ ಸಿಕ್ಸ್ ಸಿಡಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಇಲ್ಲಿದೆ ನೋಡಿ ವಿಡಿಯೋ.

 

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ರಾಜಸ್ಥಾನಕ್ಕೆ ಯಶಸ್ವಿ ಜೈಸ್ವಾಲ್ (35) ಮತ್ತು ಜೋಸ್ ಬಟ್ಲರ್ ಬಿರುಸಿನ ಆರಂಭ ಒದಗಿಸಿದರು. ಬಳಿಕ ಸಂಜು ಸ್ಯಾಮ್ಸನ್ ಹಾಗೂ ಬಟ್ಲರ್ ಹೈದರಾಬಾದ್ ಬೌಲರ್​ಗಳ ಬೆಂಡೆತ್ತು ಅರ್ಧಶತಕ ಸಿಡಿಸಿದರು. ಜೋಸ್ 59 ಎಸೆತಗಳಲ್ಲಿ 10 ಫೋರ್, 4 ಸಿಕ್ಸರ್​ನೊಂದಿಗೆ 95 ರನ್ ಚಚ್ಚಿದರೆ, ಸ್ಯಾಮ್ಸನ್ 38 ಎಸೆತಗಳಲ್ಲಿ 4 ಫೋರ್, 5 ಸಿಕ್ಸ್​ನೊಂದಿಗೆ ಅಜೇಯ 66 ರನ್ ಕಲೆಹಾಕಿದರು. ಪರಿಣಾಮ ಆರ್​ಆರ್​ 20 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/sundeep-sharma-no-ball-drama-in-rr-vs-srh-ipl-2023-match-watch-abdul-samads-last-ball-six-video-vb-572694.html

Leave a Reply

Your email address will not be published. Required fields are marked *