Shubman Gill: ಬಣ್ಣದ ಲೋಕಕ್ಕೆ ಕಾಲಿಟ್ಟ ಟೀಮ್​​ ಇಂಡಿಯಾ ಕ್ರಿಕೆಟಿಗ ಶುಭ್​ಮನ್ ಗಿಲ್

ಬಾಲಿವುಡ್ ಮತ್ತು ಕ್ರಿಕೆಟ್ ಅಂಗಳಕ್ಕೆ ಹಿಂದಿನಿಂದಲೂ ಭಾರೀ ನಂಟು. ಕ್ರಿಕೆಟಿಗರ ಜೊತೆ ಬಾಲಿವುಡ್​​ ನಟಿಯರು ಡೇಟಿಂಗ್, ಲವ್ ಅಫೇರ್. ಜೊತೆಗೆ ಕ್ರಿಕೆಟಿಗರು ಬಾಲಿವುಡ್​​ನಲ್ಲಿಯೂ ಎಂಟ್ರಿಕೊಡುವುದುಂಟು.  ಇದೀಗಾ ಟೀಮ್​​ ಇಂಡಿಯಾದ ಯುವ ಆಟಗಾರ ಶುಭ್​ಮನ್ ಗಿಲ್​ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಅನಿಮೇಟೆಡ್ ಸಿನಿಮಾ ಸ್ಪೈಡರ್ ಮ್ಯಾನ್​​ಗೆ ಶುಭ್​ಮನ್ ಗಿಲ್​ ಧ್ವನಿಯಾಗಲಿದ್ದಾರೆ. ಕ್ರಿಕೆಟ್​​​ ಹೊರತಾಗಿ ಇದೀಗಾ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆಅಕ್ರಾಸ್ ದಿ ಸ್ಪೈಡರ್-ವರ್ಸ್‌ನಲ್ಲಿ ಭಾರತೀಯ ಸ್ಪೈಡರ್‌ಮ್ಯಾನ್‌ನ ಚಿತ್ರಕ್ಕೆ ಡಬ್ಬಿಂಗ್ ಮಾಡಿದ ಅನುಭವವನ್ನು ಶುಬ್‌ಮನ್ ಗಿಲ್ ಸ್ವತಹ ತಮ್ಮ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕ್ರಿಕೆಟ್​​ ಲೋಕದಲ್ಲಿ ತನ್ನದೇ ಆದ ಹವಾ ಸೃಷ್ಟಿಸಿದ್ದ ಯುವ ಆಟಗಾರ ಶುಭ್​ಮನ್ ಗಿಲ್. ಇದೀಗಾ ಬಣ್ಣದ ಲೋಕಕ್ಕೆ ಕಾಲಿಟ್ಟಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಸ್ಪೈಡರ್ ಮ್ಯಾನ್ ಚಿತ್ರದ ಹಿಂದಿ ಮತ್ತು ಪಂಜಾಬಿ ಆವೃತ್ತಿಗಳಲ್ಲಿ ಮುಖ್ಯ ನಾಯಕನಿಗೆ ಶುಭಮನ್ ಗಿಲ್​ ಧ್ವನಿ ನೀಡಿದ್ದಾರೆ. ಈ ಅನಿಮೇಟೆಡ್ ಚಿತ್ರದ ಟ್ರೇಲರ್​​ ಜೂನ್ 2 ರಂದು ಬಿಡುಗಡೆಯಾಗಲಿದೆ ಎಂದು ಸೋನಿ ಪಿಕ್ಚರ್ಸ್ನ ಅಧಿಕೃತ ಪೇಜ್​ನಲ್ಲಿ ಹಂಚಿಕೊಳ್ಳಲಾಗಿದೆಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಶುಭಮನ್ ಗಿಲ್ ರಶ್ಮಿಕಾ ಮಂದಣ್ಣ ಮೇಲೆ ಕ್ರಶ್​​ ಇರುವುದಾಗಿ ಹೇಳಿಕೊಂಡಿರುವುದು ಭಾರೀ ಸುದ್ದಿಯಾಗಿತ್ತು.

source https://tv9kannada.com/photo-gallery/team-india-cricketer-shubman-gill-will-lend-his-voice-to-indian-spider-man-aks-573160.html

Leave a Reply

Your email address will not be published. Required fields are marked *