IPL 2023: RCB ಪ್ಲೇಆಫ್ ಹಾದಿ ಮತ್ತಷ್ಟು ಕಠಿಣ..!

IPL 2023 MI vs RCB: ಐಪಿಎಲ್​ನ 54ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆರ್​ಸಿಬಿ ತಂಡ ಸೋಲನುಭವಿಸಿದೆ. ಈ ಸೋಲಿನೊಂದಿಗೆ ಆರ್​ಸಿಬಿ ತಂಡವು ತನ್ನ ಪ್ಲೇಆಫ್ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದೆ.ಏಕೆಂದರೆ ಆರ್​ಸಿಬಿ ವಿರುದ್ಧದ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡವು ಪಾಯಿಂಟ್ಸ್ ಟೇಬಲ್​ನಲ್ಲಿ 3ನೇ ಸ್ಥಾನಕ್ಕೇರಿದೆ. ಇತ್ತ ಸೋಲನುಭವಿಸಿರುವ ಆರ್​ಸಿಬಿ 7ನೇ ಸ್ಥಾನಕ್ಕೆ ಕುಸಿದು ಸಂಕಷ್ಟಕ್ಕೆ ಸಿಲುಕಿದೆ.ಅಂದರೆ ಆರ್​ಸಿಬಿಗೆ ಇನ್ನುಳಿದಿರುವುದು ಕೇವಲ 3 ಪಂದ್ಯಗಳು ಮಾತ್ರ. ಈ ಮೂರು ಪಂದ್ಯಗಳಲ್ಲಿ ಗೆದ್ದರೆ ಒಟ್ಟು ಪಾಯಿಂಟ್ಸ್ 16 ಆಗಲಿದೆ. ಈಗಾಗಲೇ 16 ಪಾಯಿಂಟ್ಸ್ ಗಳಿಸಿರುವ ಗುಜರಾತ್ ಟೈಟಾನ್ಸ್ ಮುಂದಿನ ಪಂದ್ಯ ಗೆದ್ದರೆ ಪ್ಲೇಆಫ್ ಖಚಿತಪಡಿಸಿಕೊಳ್ಳಲಿದೆ.ಹಾಗೆಯೇ ಸಿಎಸ್​ಕೆ ತಂಡವು ಮುಂದಿನ 3 ಪಂದ್ಯಗಳಲ್ಲಿ 2 ರಲ್ಲಿ ಜಯ ಸಾಧಿಸಿದರೆ 17 ಅಂಕ ಪಡೆಯಲಿದೆ. ಅದೇ ರೀತಿ ಲಕ್ನೋ ಸೂಪರ್ ಜೈಂಟ್ಸ್ ಮುಂದಿನ 3 ಮ್ಯಾಚ್​ಗಳಲ್ಲಿ ಜಯ ಸಾಧಿಸಿದರೆ 17 ಅಂಕಗಳಿಸಲಿದೆ. ಇದರ ಜೊತೆಗೆ ಮುಂಬೈ ಇಂಡಿಯನ್ಸ್ ಮುಂದಿನ 3 ಪಂದ್ಯ ಗೆದ್ದರೆ ಒಟ್ಟು 18 ಅಂಕ ಪಡೆಯಲಿದೆ. ಹೀಗಾದರೆ ಆರ್​ಸಿಬಿ ತಂಡ ಪ್ಲೇಆಫ್ ರೇಸ್​ನಿಂದ ನೇರವಾಗಿ ಹೊರಬೀಳಬಹುದು. ಅಂದರೆ ಆರ್​ಸಿಬಿ ಪ್ಲೇಆಫ್​ಗೇರಬೇಕಿದ್ದರೆ ಟಾಪ್-4 ನಲ್ಲಿ ಒಂದು ತಂಡ 16 ಅಂಕಗಳನ್ನು ಪಡೆಯಲೇಬೇಕು.ಉದಾಹರಣೆಗೆ ಅಂಕ ಪಟ್ಟಿಯಲ್ಲಿ 3ನೇ ಹಾಗೂ 4ನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಅಥವಾ ಲಕ್ನೋ ಸೂಪರ್ ಜೈಂಟ್ಸ್ 16 ಅಂಕ ಪಡೆದರೆ, ಆರ್​ಸಿಬಿ ಮುಂದಿನ 3 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ ನೆಟ್ ರನ್​ ರೇಟ್​ ಮೂಲಕ ಪ್ಲೇಆಫ್​ಗೇರಬಹುದು.ಆದರೆ ಇತ್ತ 4ನೇ ಸ್ಥಾನಕ್ಕಾಗಿ 10 ಪಾಯಿಂಟ್ಸ್ ಕಲೆಹಾಕಿರುವ ರಾಜಸ್ಥಾನ್ ರಾಯಲ್ಸ್ , ಕೆಕೆಆರ್, ಪಂಜಾಬ್ ಕಿಂಗ್ಸ್​ ಭರ್ಜರಿ ಪೈಪೋಟಿ ಇದೆ. ಹೀಗಾಗಿಯೇ ಆರ್​ಸಿಬಿ ಪ್ಲೇಆಫ್ ಪ್ರವೇಶಿಸಲು ಮುಂದಿನ 3 ಪಂದ್ಯಗಳನ್ನು ಗೆದ್ದರೆ ಮಾತ್ರ ಸಾಲುವುದಿಲ್ಲ. ಬದಲಾಗಿ ಭರ್ಜರಿ ಜಯ ಸಾಧಿಸಿ ನೆಟ್​ ರನ್​ ರೇಟ್ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ.

source https://tv9kannada.com/photo-gallery/cricket-photos/ipl-2023-rcb-playoffs-chances-kannada-news-zp-574314.html

Leave a Reply

Your email address will not be published. Required fields are marked *