Skip to content
  • Thursday, October 1, 2026
  • ABOUT US
  • CONTACT US
  • Privacy Policy
  • Disclaimer
  • Terms and Conditions
  • Editorial Policy
  • Corrections Policy
  • Fact Check Policy

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • Horoscope
  • Home
  • Sports
  • IPL 2023: ಹೀಗಾದ್ರೆ RCB ಪ್ಲೇಆಫ್ ಪ್ರವೇಶಿಸುವುದು ಖಚಿತ
Sports

IPL 2023: ಹೀಗಾದ್ರೆ RCB ಪ್ಲೇಆಫ್ ಪ್ರವೇಶಿಸುವುದು ಖಚಿತ

May 10, 2023
samagrasuddi

IPL 2023 RCB playoffs: ಐಪಿಎಲ್ ಸೀಸನ್ 16 ರಲ್ಲಿ 11 ಪಂದ್ಯಗಳನ್ನಾಡಿರುವ ಆರ್​ಸಿಬಿ ತಂಡವು ಕೇವಲ 5 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ. ಇದರೊಂದಿಗೆ ಆರ್​ಸಿಬಿ ತಂಡದ ಪ್ಲೇಆಫ್ ಹಾದಿಯು ಮತ್ತಷ್ಟು ಕಠಿಣವಾಗಿದೆ.ಏಕೆಂದರೆ ಇನ್ನು ಆರ್​ಸಿಬಿಗೆ ಉಳಿದಿರುವುದು ಕೇವಲ 3 ಪಂದ್ಯಗಳು ಮಾತ್ರ. ಈ ಪಂದ್ಯಗಳಲ್ಲಿ ಜಯ ಸಾಧಿಸಿದರೂ ಪ್ಲೇಆಫ್ ಪ್ರವೇಶವನ್ನು ಖಚಿತಪಡಿಸಿಕೊಳ್ಳಲಾಗುವುದಿಲ್ಲ. ಬದಲಾಗಿ ಪ್ರಸ್ತುತ ಅಂಕಪಟ್ಟಿಯಲ್ಲಿ  ಮೂರನೇ ಹಾಗೂ ನಾಲ್ಕನೇ ಸ್ಥಾನದಲ್ಲಿರುವ ತಂಡಗಳ ಮುಂದಿನ ಪಂದ್ಯಗಳ ಫಲಿತಾಂಶಗಳನ್ನು ಎದುರು ನೋಡಬೇಕಾಗುತ್ತದೆ.ಪ್ರಸ್ತುತ ಪಾಯಿಂಟ್ಸ್ ಟೇಬಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಮೂರನೇ ಸ್ಥಾನದಲ್ಲಿದೆ. ಮುಂಬೈಗೆ ಇನ್ನುಳಿದಿರುವುದು 3 ಪಂದ್ಯಗಳು. ಈ ಮೂರು ಪಂದ್ಯಗಳಲ್ಲಿ ಮುಂಬೈ ವಿರುದ್ಧ ಗುಜರಾತ್ ಟೈಟಾನ್ಸ್ ಹಾಗೂ ಎಸ್​ಆರ್​ಹೆಚ್​ ತಂಡಗಳು ಗೆಲ್ಲಬೇಕು. ಇದರಿಂದ 3ನೇ ಸ್ಥಾನದಿಂದ 14 ಪಾಯಿಂಟ್ಸ್​ನೊಂದಿಗೆ ಮುಂಬೈ ಇಂಡಿಯನ್ಸ್ ಕುಸಿತಕ್ಕೊಳಗಾಗಲಿದೆ.ಹಾಗೆಯೇ ನಾಲ್ಕನೇ ಸ್ಥಾನದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲ್ಲಬೇಕು. ಅಂದರೆ ಲಕ್ನೋ ಸೂಪರ್ ಜೈಂಟ್ಸ್ ಮುಂದಿನ 3 ಪಂದ್ಯಗಳಲ್ಲಿ 1 ರಲ್ಲಿ ಸೋತರೂ ಆರ್​ಸಿಬಿಗೆ ಪಾಯಿಂಟ್ಸ್​ ಟೇಬಲ್​ನಲ್ಲಿ ಮೇಲೇರುವ ಅವಕಾಶ ಇರಲಿದೆ.ಏಕೆಂದರೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ರಸ್ತುತ ಪಾಯಿಂಟ್ಸ್​ 11. ಇನ್ನು ಮೂರು ಪಂದ್ಯಗಳಲ್ಲಿ 2 ಜಯ ಸಾಧಿಸಿದರೂ ಅದು 15 ಅಂಕ ಆಗಲಿದೆ. ಇದರಿಂದ 16 ಪಾಯಿಂಟ್ಸ್ ಕಲೆಹಾಕುವ ಆರ್​ಸಿಬಿಗೆ ಅಂಕಪಟ್ಟಿಯಲ್ಲಿ ಮೇಲೇರಬಹುದು.ಇನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ತಂಡವು ಜಯ ಸಾಧಿಸಿದರೆ, ಸಂಜು ಸ್ಯಾಮ್ಸನ್ ಪಡೆ ಪ್ಲೇಆಫ್ ರೇಸ್​ನಿಂದ ಹೊರಬೀಳಲಿದೆ. ಏಕೆಂದರೆ 11 ಪಂದ್ಯವಾಡಿರುವ ಆರ್​ಆರ್​ ಇದುವರೆಗೆ ಕಲೆಹಾಕಿರುವುದು 10 ಪಾಯಿಂಟ್ಸ್ ಮಾತ್ರ. ಇನ್ನುಳಿದ 3 ಪಂದ್ಯಗಳಲ್ಲಿ ಆರ್​ಸಿಬಿ ವಿರುದ್ಧ ಸೋತರೆ ಅದು ಫಾಫ್ ಡುಪ್ಲೆಸಿಸ್ ಪಡೆಗೆ ಪ್ಲಸ್ ಪಾಯಿಂಟ್ ಆಗಲಿದೆ.ಏಕೆಂದರೆ ಮುಂದಿನ ಪಂದ್ಯದಲ್ಲಿ ಕೆಕೆಆರ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಒಂದು ತಂಡ ಪ್ಲೇಆಫ್ ರೇಸ್​ನಿಂದ ಹೊರಬೀಳುವ ಸಾಧ್ಯತೆಯಿದೆ. ಇಲ್ಲಿ ಕೆಕೆಆರ್ ವಿರುದ್ದ ರಾಜಸ್ಥಾನ್ ರಾಯಲ್ಸ್ ಗೆಲ್ಲಬೇಕು. ಹಾಗೆಯೇ ಆರ್​ಸಿಬಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿದರೆ, ಅತ್ತ ಕೆಕೆಆರ್ ಹಾಗೂ ರಾಜಸ್ಥಾನ್ ರಾಯಲ್ಸ್ ಉಳಿದ 2 ಪಂದ್ಯಗಳನ್ನು ಗೆದ್ದರೂ 14 ಪಾಯಿಂಟ್ಸ್​ಗಳಿಸಲಷ್ಟೇ ಸಾಧ್ಯವಾಗಲಿದೆ.ಇತ್ತ ಮುಂದಿನ 3 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ ಪಾಯಿಂಟ್ಸ್ ಟೇಬಲ್​ನಲ್ಲಿ 16 ಅಂಕಗಳನ್ನು ಪಡೆದರೆ ಆರ್​ಸಿಬಿ ತಂಡವು ಪ್ಲೇಆಫ್​ ಪ್ರವೇಶಿಸಲು ಅವಕಾಶ ದೊರೆಯಲಿದೆ. ಅದಕ್ಕೂ ಮುನ್ನ ಅಂಕ ಪಟ್ಟಿಯಲ್ಲಿ 3ನೇ ಅಥವಾ 4ನೇ ಸ್ಥಾನ ಪಡೆಯುವ ತಂಡಗಳು 16 ಅಥವಾ ಅದಕ್ಕಿಂತ ಅಂಕಗಳನ್ನು ಪಡೆದಿರಬೇಕು.ಇಲ್ಲಿ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆಯುವ ತಂಡವು 16 ಅಂಕ ಪಡೆದಿದ್ದರೆ ಆರ್​ಸಿಬಿ ತಂಡಕ್ಕೆ ಉತ್ತಮ ಅವಕಾಶ ದೊರೆಯಲಿದೆ. ಏಕೆಂದರೆ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಆರ್​ಸಿಬಿ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಆಡಲಿದೆ. ಈ ವೇಳೆ ನೆಟ್​ ರನ್​ ರೇಟ್ ಲೆಕ್ಕಚಾರದೊಂದಿಗೆ ಜಯ ಸಾಧಿಸಿ ಪ್ಲೇಆಫ್ ಪ್ರವೇಶಿಸುವ ಅವಕಾಶ ದೊರೆಯಲಿದೆ.ಒಟ್ಟಿನಲ್ಲಿ ಈ ಮೇಲೆ ತಿಳಿಸಲಾದ ಲೆಕ್ಕಚಾರದಂತೆ ನಡೆದರೆ ಈ ಬಾರಿ ಆರ್​ಸಿಬಿ ಪ್ಲೇಆಫ್ ಪ್ರವೇಶಿಸುವುದು ಖಚಿತ ಎಂದೇ ಹೇಳಬಹುದು.

source https://tv9kannada.com/photo-gallery/cricket-photos/ipl-2023-how-can-rcb-qualify-for-playoffs-kannada-news-zp-574938.html

Tags: samagrasuddi, ಸಮಗ್ರ ಸುದ್ದಿ

Post navigation

Karnataka Exit Poll 2023 :  ಈ ಬಾರಿಯೂ  ಫಲಿತಾಂಶ ಅತಂತ್ರ ! ಯಾವ ಸಮೀಕ್ಷೆ, ಯಾರಿಗೆ ಎಷ್ಟು ಸ್ಥಾನ ? ಇಲ್ಲಿದೆ ಮಾಹಿತಿ…!
ವಿಧಾನಸಭಾ ಚುನಾವಣೆ: ಚಿತ್ರದುರ್ಗ ಜಿಲ್ಲೆಯಲ್ಲಿ ಮುಗಿದ ಮತದಾನ : ಯಾವ ಕ್ಷೇತ್ರದಲ್ಲಿ ಎಷ್ಟು ಶೇಕಡಾವಾರು ಮತದಾನವಾಗಿದೆ ? ಇಲ್ಲಿದೆ ಸಂಪೂರ್ಣ ಮಾಹಿತಿ..!

Leave a Reply Cancel reply

Your email address will not be published. Required fields are marked *


You may Missed

Spiritual

Daily Bhagavad Gita – ಅಧ್ಯಾಯ 9 (ರಾಜವಿದ್ಯಾ ರಾಜಗುಹ್ಯ ಯೋಗ) | ಶ್ಲೋಕ 13 | ದಿನ 261

October 1, 2026
samagrasuddi
Spiritual

Daily Bhagavad Gita – ಅಧ್ಯಾಯ 9 (ರಾಜವಿದ್ಯಾ ರಾಜಗುಹ್ಯ ಯೋಗ) | ಶ್ಲೋಕ 12 | ದಿನ 260

September 30, 2026
samagrasuddi
Spiritual

Daily Bhagavad Gita – ಅಧ್ಯಾಯ 9 (ರಾಜವಿದ್ಯಾ ರಾಜಗುಹ್ಯ ಯೋಗ) | ಶ್ಲೋಕ 11 | ದಿನ 259

September 29, 2026
samagrasuddi
Spiritual

Daily Bhagavad Gita – ಅಧ್ಯಾಯ 9 (ರಾಜವಿದ್ಯಾ ರಾಜಗುಹ್ಯ ಯೋಗ) | ಶ್ಲೋಕ 10 | ದಿನ 258

September 28, 2026
samagrasuddi

Samagra Suddi - ಕನ್ನಡ ಡಿಜಿಟಲ್ ಸುದ್ದಿ ವೇದಿಕೆ: ನಿಮ್ಮ ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ವೇದಿಕೆ. ಸ್ಥಳೀಯ ಸುದ್ದಿ, ಉದ್ಯೋಗ, ಶಿಕ್ಷಣ, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ಕೃಷಿ, ಆರೋಗ್ಯ, ಮನರಂಜನೆ ಹಾಗೂ ಉಪಯುಕ್ತ ಮಾಹಿತಿಯನ್ನು ಸರಳ ಕನ್ನಡದಲ್ಲಿ ನಿಮಗೆ ತಲುಪಿಸುತ್ತೇವೆ.

ನಿಖರ ಮಾಹಿತಿ | ತ್ವರಿತ ಸುದ್ದಿ | ಜನಪರ ವಿಷಯಗಳು

ಸುದ್ದಿ, ಜಾಹೀರಾತು, ಸಲಹೆ ಹಾಗೂ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ.

📧 Email: samagrasuddi18.com
📱 Phone/WhatsApp: +91 8310612496
🌐 Website: samagrasuddi.co.in

Copyright © 2026
Privacy Policy
Theme by: Theme Horse
Proudly Powered by: WordPress