ಈ ಚುನಾವಣೆಯಲ್ಲಿ ಗೆಲ್ಲುವುದೇ ನಾನು : ಜಿ. ರಘು ಆಚಾರ್

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817

ಚಿತ್ರದುರ್ಗ,(ಮೇ.11) :  ಚುನಾವಣೆಯಲ್ಲಿ ಸೋಲು, ಗೆಲುವು ಸಾಮಾನ್ಯ, ಈ ಚುನಾವಣೆಯಲ್ಲಿ ನಾನು ಗೆದ್ದರು, ಸೋತರು ಸಹಾ ಚಿತ್ರದುರ್ಗದ ಜನತೆಗೆ ನಾನು ನನ್ನ ಪ್ರಣಾಳಿಕೆಯಲ್ಲಿ ನೀಡಿದಂತಹ ವಾಗ್ದಾನವನ್ನು ಈಡೇರಿಸಲು ನಾನು ಬದ್ದನಾಗಿದ್ದೇನೆ ಎಂದು 2023ರ ಚಿತ್ರದುರ್ಗ ವಿಧಾನಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ರಘುಆಚಾರ್ ತಿಳಿಸಿದ್ದಾರೆ.

ನಗರದಲ್ಲಿಂದು ಅವರ ನಿವಾಸದಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಓಡಿ ಹೋಗೋ ಮಗನಲ್ಲ, ನನ್ನ ಕ್ಷೇತ್ರದಲ್ಲಿ 30 ಸಾವಿರ ಮಕ್ಕಳು ಸಿಬಿಎಸ್‍ಸಿ ಶಾಲೆಯಲ್ಲಿ ಓದುವಂತೆ ಮಾಡುತ್ತೇನೆ. ಚುನಾವಣೆ ಸಮಯದಲ್ಲಿ ಮತದಾರರಿಗೆ ಪ್ರಣಾಳಿಕೆಯಲ್ಲಿ ಹೇಳಿದಂತೆ ಮಾಡುತ್ತೇನೆ.

ಸರ್ಕಾರದ ಹಣ ನೀಡಲಿ ನೀಡದಿರಲಿ ನಾನು ಅದನ್ನು ಜಾರಿ ಮಾಡುತ್ತೇನೆ. ಈ ದಿನದಿಂದ ನನ್ನ ಕುಟುಂಬಕ್ಕಾಗಲಿ, ನನ್ನ ಅಭೀಮಾನಿಗಳಿಗಾಗಲಿ, ಸ್ನೇಹಿತರಾಗಲಿ ತೊಂದರೆಯನ್ನು ನೀಡಿದರೆ ನಾನು ಸಹಾ ಆಟವನ್ನು ಆವರಿಗೆ ಆಡಿಸುತ್ತೇನೆ. ಆಹಿಂದ ಎಂದು ತೊಂದರೆಯನ್ನು ನೀಡುತ್ತಿದ್ದಾರೆ ಇದರ ಬಗ್ಗೆ ಮುಂದಿನ ದಿನದಲ್ಲಿ ಸರಿಯಾದ ರೀತಿಯಲ್ಲಿ ಮಾಡುತ್ತೇನೆ ಎಂದರು.

ಐಟಿಯವರ ಬಂದಿದ್ದು ನಿಜ ನೋಟಿಸ್ ನೀಡಿದ್ದು ನಿಜ, ಸುಮ್ಮನೇ ಸಮಯವನ್ನು ಹಾಳು ಮಾಡಿದ್ದಾರೆ. ಸಣ್ಣ ಜಾತಿಯವನೆಂದು ಈ ರೀತಿ ಕಿರುಳುಳವನ್ನು ನೀಡಲಾಗುತ್ತಿದೆ. ನಾನು ಅಹಿಂದನೇ ಸಿದ್ದಗಂಗಾ ಶ್ರೀಗಳ ಮಠದಲ್ಲಿಯೇ ನಾನು ಬೆಳದಿದ್ದು ಅಲ್ಲಿಯ ಗುಣಗಳು ನನಗೂ ಬಂದಿದೆ.

ನಾನು ಯಾರಿಗೂ ಸಹಾ ತೊಂದರೆಯನ್ನು ನೀಡಿದವನ್ನಲ್ಲ, ಎಂದ ಅವರು 17 ವರ್ಷದ ವಯಸ್ಸಿನ ಹುಡುಗ ಇಸ್ಪೇಟ್ ಆಡಲು ಪ್ರಾರಂಭ ಮಾಡಿದರೆ ಮುಂದಿನ ದಿನದಲ್ಲಿ ಮನೆಯನ್ನು ಹಾಳು ಮಾಡುತ್ತೇನೆ ಯಾವುದೇ ಕಾರಣದಿಂದಲೂ ಸಹಾ ಮೇ. 16ರ ನಂತರ ಚಿತ್ರದುರ್ಗದಲ್ಲಿ ಕ್ಲಬ್ ಇಸ್ಪೀಟ್ ಆಡಲು ಬಿಡುವುದಿಲ್ಲ, ರೌಡಿಜಂ ಮಾಡಲು ಬಿಡುವುದಿಲ್ಲ ನನ್ನ ಹಣೆಬರಹವನ್ನು ಬರೆದವರು ಚಿತ್ರದುರ್ಗದ ಜನ. ನಾನು ಇಲ್ಲೇ ಇರುತ್ತೇನೆ ಓಡಿ ಹೋಗುವ ಮಗ ನಾನಲ್ಲ ಈ ಚುನಾವಣೆಯಲ್ಲಿ ಗೆಲ್ಲುವುದೇ ನಾನು ಎಂದು ಆತ್ಮ ವಿಶ್ವಾಸದಿಂದ ರಘು ಆಚಾರ್ ನುಡಿದರು.

ನನಗೆ ಯಾವುದೇ ಭಯ ಇಲ್ಲ ನನ್ನ ಹಣವನ್ನು ನಾನು ಖರ್ಚು ಮಾಡುತ್ತೇನೆ, ಐಟಿಯವರು ನೋಟಿಸ್ ನೀಡಿದರೆ ಅದಕ್ಕೆ ತಕ್ಕ ಉತ್ತರವನ್ನು ನಮ್ಮ ವಕೀಲರು ನೀಡುತ್ತಾರೆ. ನಾನು ಯಾವುದೇ ರೀತಿಯ ದಂಧೆಯನ್ನು ಮಾಡಿಲ್ಲ, ನನ್ನ ಸ್ವಂತ ಹಣದಿಂದ ಬದುಕನ್ನು ನಡೆಸುತ್ತಿದ್ದೇನೆ, ಐಟಿಯವರ ಪ್ರಶ್ನೆಗೆ ತಕ್ಕ ಉತ್ತರವನ್ನು ನೀಡಲಾಗುವುದು ಪ್ರಣಾಳಿಕೆಯನ್ನು ಹೇಳಿದಂತೆ ಮಾಡುತ್ತೇನೆ ಆಸ್ಪತ್ರೆಯನ್ನು ಸಹಾ ಕಟ್ಟಿಸುತ್ತೇನೆ. ಇದರ ಬಗ್ಗೆ ಯಾವುದೇ ಆನುಮಾನ ಬೇಡ ಎಂದು ಹೇಳಿದರು.

The post ಈ ಚುನಾವಣೆಯಲ್ಲಿ ಗೆಲ್ಲುವುದೇ ನಾನು : ಜಿ. ರಘು ಆಚಾರ್ first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/IcntkK4
via IFTTT

Leave a Reply

Your email address will not be published. Required fields are marked *