IPL 2023: ಕ್ರಿಕೆಟ್​ನ ಎಲ್ಲಾ ಮಾದರಿಯಲ್ಲಿ ಶತಕ ಸಿಡಿಸಿರುವ ಟೀಂ ಇಂಡಿಯಾ ಐವರು ಕ್ರಿಕೆಟಿಗರಿವರು

ಪ್ರಸ್ತುತ ನಡೆಯುತ್ತಿರುವ ಐಪಿಎಲ್​ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಚೊಚ್ಚಲ ಐಪಿಎಲ್ ಶತಕ ಸಿಡಿಸಿದ ಗುಜರಾತ್ ಟೈಟಾನ್ಸ್ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಐಪಿಎಲ್‌ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್​ನ ಎಲ್ಲಾ ಮಾದರಿಗಳಲ್ಲಿ ಶತಕ ಬಾರಿಸಿದ ಭಾರತೀಯ ಕ್ರಿಕೆಟಿಗರ ವಿಶೇಷ ಪಟ್ಟಿಗೆ ಗಿಲ್ ಸೇರಿಕೊಂಡಿದ್ದಾರೆ. ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲಿ ಶತಕ ಸಿಡಿಸಿದ ಐವರು ಭಾರತೀಯ ಬ್ಯಾಟರ್​ಗಳನ್ನು ನೋಡುವುದಾದರೆ..ಶುಭ್‌ಮನ್ ಗಿಲ್: ಐಪಿಎಲ್ 2023ರ 62ನೇ ಪಂದ್ಯದಲ್ಲಿ ಸೋಮವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಶುಭಮನ್ ಗಿಲ್ ಅದ್ಭುತ ಶತಕ ಬಾರಿಸಿದರು. 58 ಎಸೆತಗಳಲ್ಲಿ 101 ರನ್ ಬಾರಿಸಿದ ಶುಭಮನ್ ಗಿಲ್ ಟೆಸ್ಟ್‌ನಲ್ಲಿ ಎರಡು, ಏಕದಿನದಲ್ಲಿ ನಾಲ್ಕು ಮತ್ತು ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಒಂದು ಶತಕ ಬಾರಿಸಿದ್ದು, ಐಪಿಎಲ್​ ಶತಕ ಸೇರಿದಂತೆ ಎಲ್ಲಾ ಮಾದರಿಯಲ್ಲೂ ಶತಕ ಬಾರಿಸಿದ ಟೀಂ ಇಂಡಿಯಾ ಆಟಗಾರ ಎನಿಸಿಕೊಂಡಿದ್ದಾರೆ.ವಿರಾಟ್ ಕೊಹ್ಲಿ: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಇದುವರೆಗೆ ಟೆಸ್ಟ್‌ನಲ್ಲಿ 28, ಏಕದಿನದಲ್ಲಿ 46 ಮತ್ತು ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದು ಶತಕ ಬಾರಿಸಿದ್ದಾರೆ.  ಐಪಿಎಲ್‌ನಲ್ಲಿ ಕೊಹ್ಲಿ 5 ಶತಕ ಸಿಡಿಸಿದ್ದು ಐಪಿಎಲ್‌ನಲ್ಲಿ ಅತಿ ಹೆಚ್ಚು 7062 ರನ್ ಬಾರಿಸಿದ ದಾಖಲೆಯನ್ನು ಬರೆದಿದ್ದಾರೆ.ರೋಹಿತ್ ಶರ್ಮಾ: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟೆಸ್ಟ್‌ನಲ್ಲಿ 9 ಶತಕ, ಏಕದಿನದಲ್ಲಿ 30 ಮತ್ತು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ನಾಲ್ಕು ಶತಕ ಬಾರಿಸಿದ್ದಾರೆ.  ರೋಹಿತ್ ಶರ್ಮಾ ಐಪಿಎಲ್‌ನಲ್ಲಿಯೂ ಶತಕ ಸಿಡಿಸಿದ್ದು, ಐಪಿಎಲ್‌ನಲ್ಲಿ ಒಟ್ಟು 6136 ರನ್ ಕಲೆ ಹಾಕಿದ್ದಾರೆ.ಸುರೇಶ್ ರೈನಾ: ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಟೆಸ್ಟ್ ಮಾದರಿಯಲ್ಲಿ ಒಂದು ಶತಕ, ಏಕದಿನದಲ್ಲಿ ಐದು ಮತ್ತು ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಒಂದು ಶತಕ ಸಿಡಿಸಿದ್ದಾರೆ.  ಸುರೇಶ್ ರೈನಾ ಐಪಿಎಲ್‌ನಲ್ಲಿ ಶತಕ ಸಿಡಿಸಿದ್ದು ಐಪಿಎಲ್‌ನಲ್ಲಿ 5528 ರನ್ ಕಲೆಹಾಕಿದ್ದಾರೆ.ಕೆಎಲ್ ರಾಹುಲ್: ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಟೆಸ್ಟ್ ಮಾದರಿಯಲ್ಲಿ ಐದು ಶತಕ, ಏಕದಿನ ಮಾದರಿಯಲ್ಲಿ ಐದು ಶತಕ ಮತ್ತು ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಎರಡು ಶತಕ ಸಿಡಿಸಿದ್ದಾರೆ. ರಾಹುಲ್ ಐಪಿಎಲ್‌ನಲ್ಲಿ ಇದುವರೆಗೆ ನಾಲ್ಕು ಶತಕಗಳನ್ನು ಬಾರಿಸಿದ್ದು 4163 ರನ್ ಕಲೆಹಾಕಿದ್ದಾರೆ.

source https://tv9kannada.com/photo-gallery/cricket-photos/ipl-2023-list-of-indian-cricketers-who-have-scored-centuries-in-all-formats-of-cricket-psr-581685.html

Leave a Reply

Your email address will not be published. Required fields are marked *