IPL 2023: ಹೈದರಾಬಾದ್ ವಿರುದ್ಧ ಕಳೆದೆರಡು ಇನ್ನಿಂಗ್ಸ್​ಗಳಲ್ಲಿ ಕಿಂಗ್ ಕೊಹ್ಲಿ ಖಾತೆಯನ್ನೇ ತೆರೆದಿಲ್ಲ..!

ಐಪಿಎಲ್​ನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಮಹತ್ವದ ಪಂದ್ಯ ನಡೆಯಲಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಈ ಪಂದ್ಯಕ್ಕೆ ವೇದಿಕೆಯಾಗಲಿದೆ. ಈ ಪಂದ್ಯ ಆರ್‌ಸಿಬಿಗೆ ಪ್ಲೇಆಫ್‌ನಲ್ಲಿ ಅತ್ಯಂತ ಮಹತ್ವದ ಪಂದ್ಯವಾಗಿದೆ. ಹೀಗಾಗಿ ಈ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಎಲ್ಲಾ ಕೊಹ್ಲಿ ಅಭಿಮಾನಿಗಳು ಅದ್ಭುತ ಇನ್ನಿಂಗ್ಸ್ ನೋಡುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಅದಕ್ಕೂ ಮುನ್ನ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೊಹ್ಲಿ ದಾಖಲೆಗಳು ಹೇಗಿವೆ ಎಂಬುದನ್ನು ನೋಡೋಣ.ಹೈದರಾಬಾದ್ ವಿರುದ್ಧದ ಕೊನೆಯ ಎರಡು ಇನ್ನಿಂಗ್ಸ್‌ಗಳಲ್ಲಿ, ಕೊಹ್ಲಿ ಗೋಲ್ಡನ್ ಡಕ್‌ಗೆ (ಮೊದಲ ಎಸೆತದಲ್ಲಿ ಔಟ್) ಔಟಾಗಿದ್ದಾರೆ. ಇಲ್ಲಿಯವರೆಗೆ, ಹೈದರಾಬಾದ್ ವಿರುದ್ಧ ಕೊಹ್ಲಿ ಒಟ್ಟು 20 ಇನ್ನಿಂಗ್ಸ್‌ಗಳನ್ನು ಆಡಿದ್ದು ಅದರಲ್ಲಿ 136.8 ರ ಸ್ಟ್ರೈಕ್ ರೇಟ್‌ ಹಾಗೂ 31.6 ರ ಸರಾಸರಿಯಲ್ಲಿ 569 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 4 ಅರ್ಧ ಶತಕಗಳು ಸೇರಿವೆ. ಔಟಾಗದೆ 93 ರನ್ ಬಾರಿಸಿದ್ದು ಹೈದರಾಬಾದ್ ವಿರುದ್ಧ ಕೊಹ್ಲಿಯ ಗರಿಷ್ಠ ಸ್ಕೋರ್ ಆಗಿದೆ.ಆದರೆ ಇದೆಲ್ಲದರ ನಡುವೆ ಹೈದರಾಬಾದ್ ವಿರುದ್ಧ ಆಡಿದ 20 ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಮೂರು ಬಾರಿ ಖಾತೆ ತೆರೆಯದೆ 0 ರನ್‌ಗಳಿಗೆ ಪೆವಿಲಿಯನ್ ಸೇರಿಕೊಂಡಿದ್ದಾರೆ. ಹೀಗಾಗಿ ಇಂದಿನ ಮಹತ್ವದ ಪಂದ್ಯದಲ್ಲಿ ಕೊಹ್ಲಿ ಬ್ಯಾಟ್ ಅಬ್ಬರಿಸದಿದ್ದರೆ ಆರ್​ಸಿಬಿಗೆ ಭಾರಿ ಹಿನ್ನಡೆಯಾಗಲಿದೆ.ಇನ್ನು ಪ್ಲೇ ಆಫ್‌ಗೆ ಅರ್ಹತೆ ಪಡೆಯಲು ಆರ್‌ಸಿಬಿ ತನ್ನ ಕೊನೆಯ ಎರಡು ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಹೈದರಾಬಾದ್ ನಂತರ ಆರ್‌ಸಿಬಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಇದೆಲ್ಲದರ ನಡುವೆ ಆರ್​ಸಿಬಿ ಎರಡು ಪಂದ್ಯಗಳನ್ನು ಗೆದ್ದರೂ, ಇತರ ತಂಡಗಳ ಫಲಿತಾಂಶವನ್ನು ಅವಲಂಬಿಸಬೇಕಾಗಿದೆ. ಆದ್ದರಿಂದ ಈ ಸೀಸನ್​ನಲ್ಲಿ ಆರ್‌ಸಿಬಿ ಪ್ಲೇ ಆಫ್‌ಗೆ ಅರ್ಹತೆ ಪಡೆಯುತ್ತದೆಯೇ ಎಂಬುದು ಕುತೂಹಲಕಾರಿಯಾಗಿದೆ.

source https://tv9kannada.com/photo-gallery/cricket-photos/ipl-2023-virat-kohli-record-against-sun-risers-hyderabad-in-ipl-psr-581732.html

Leave a Reply

Your email address will not be published. Required fields are marked *