RCB vs GT, IPL 2023: ಐಪಿಎಲ್​ನಲ್ಲಿಂದು ಎರಡು ರೋಚಕ ಪಂದ್ಯ: ಆರ್​ಸಿಬಿ-ಗುಜರಾತ್ ಮ್ಯಾಚ್ ಮೇಲೆ ಎಲ್ಲರ ಕಣ್ಣು

RCB vs GT, IPL 2023: ಐಪಿಎಲ್​ನಲ್ಲಿಂದು ಎರಡು ರೋಚಕ ಪಂದ್ಯ: ಆರ್​ಸಿಬಿ-ಗುಜರಾತ್ ಮ್ಯಾಚ್ ಮೇಲೆ ಎಲ್ಲರ ಕಣ್ಣು

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (IPL 2023) ಇಂದು ಎರಡು ರಣರೋಚಕ ಪಂದ್ಯ ನಡೆಯಲಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಮ್ಯಾಚ್​ನಲ್ಲಿ ರೋಹಿತ್ ಶರ್ಮಾ ಅವರ ಮುಂಬೈ ಇಂಡಿಯನ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ (MI vs SRH) ಮುಖಾಮುಖಿ ಆಗಲಿದೆ. ದ್ವಿತೀಯ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾರ್ದಿಕ್ ಪಾಂಡ್ಯ ಅವರ ಗುಜರಾತ್ ಟೈಟಾನ್ಸ್ (RCB vs GT) ಅನ್ನು ಎದುರಿಸಲಿದೆ. ಇಂದಿನ ಪಂದ್ಯದ ಮೂಲಕ ಐಪಿಎಲ್ 2023 ಲೀಗ್ ಮ್ಯಾಚ್​ಗಳಿಗೆ ತೆರೆಬೀಳಲಿದೆ.

ಮುಂಬೈ-ಹೈದರಾಬಾದ್:

ಮುಂಬೈ 13 ಪಂದ್ಯಗಳಲ್ಲಿ 14 ಅಂಕಗಳನ್ನು ಗಳಿಸಿದ್ದು ಮೈನಸ್​ ನೆಟ್ ರನ್​ರೇಟ್​ ಕಾರಣಕ್ಕೆ ಪಾಯಿಂಟ್ಸ್​ ಟೇಬಲ್​ನಲ್ಲಿ ಆರನೇ ಸ್ಥಾನ ಪಡೆದುಕೊಂಡಿದೆ. ಇಂದಿನ ಪಂದ್ಯದಲ್ಲಿ ಕೇವಲ ಗೆದ್ದರೆ ಪ್ಲೇಆಫ್​ಗೇರಲು ಸಾಧ್ಯವಾಗುವುದಿಲ್ಲ. ಗುಜರಾತ್​ ಹಾಗೂ ಆರ್​ಸಿಬಿ ತಂಡದ ಫಲಿತಾಂಶದ ಮುಂಬೈ ಭವಿಷ್ಯ ನಿರ್ಧಾರವಾಗಲಿದೆ. ಎಲ್ಲಾದರು ಇಂದು ಆರ್​ಸಿಬಿ ಗೆದ್ದರೆ ಮುಂಬೈ ಪ್ಲೇ ಆಫ್ ಕನಸು ನುಚ್ಚುನೂರಾಗಲಿದೆ.

IPL 2023: RCB ತಂಡದಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ: ಹೀಗಿರಲಿದೆ ಪ್ಲೇಯಿಂಗ್ ಇಲೆವೆನ್

ಮುಂಬೈ ತಂಡ ಬ್ಯಾಟಿಂಗ್​ನಲ್ಲಿ ಸಾಕಷ್ಟು ಬಲಿಷ್ಠವಾಗಿದೆ. ಎಷ್ಟೇ ದೊಡ್ಡ ಮೊತ್ತದ ಟಾರ್ಗೆಟ್ ಇದ್ದರೂ ಸುಲಭವಾಗಿ ಗೆಲುವು ಸಾಧಿಸುತ್ತಿದೆ. ನಾಯಕ ರೋಹಿತ್ ಶರ್ಮಾ ಅವರ ಸತತ ಕಳಪೆ ಪ್ರದರ್ಶನ ತಂಡಕ್ಕೆ ದೊಡ್ಡ ಚಿಂತೆ. ಈ ಟೂರ್ನಿಯಲ್ಲಿ ಹಿಟ್​ಮ್ಯಾನ್ ಕಡೆಯಿಂದ ಉತ್ತಮ ಆಟ ಬಂದಿಲ್ಲ. ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ತಿಲಕ್ ವರ್ಮಾ, ಟಿಮ್ ಡೇವಿಡ್, ನೆಹಾಲ್ ವಧೀರ ಭರ್ಜರಿ ಫಾರ್ಮ್​ನಲ್ಲಿದ್ದು ರನ್ ಕಲೆಹಾಕುತ್ತಿದ್ದಾರೆ. ಜೇಸನ್ ಬೆಹ್ರೆಂಡಾರ್ಫ್, ಗ್ರೀನ್, ಕ್ರಿಸ್ ಜೋರ್ಡನ್, ಆಕಾಶ್ ಮಧ್ವಾಲ್ ಇನ್ನಷ್ಟು ಮಾರಕವಾಗಬೇಕಿದೆ. ಪಿಯೂಷ್ ಚಾವ್ಲಾ ಮಾತ್ರ ಮುಂಬೈ ಬೌಲಿಂಗ್​ನಲ್ಲಿ ಎದುರಾಳಿಗೆ ಕಂಠಕವಾಗಿ ಪರಿಣಮಿಸಿದ್ದಾರೆ.

ಸನ್​ರೈಸರ್ಸ್ ಹೈದರಾಬಾದ್ ತಂಡ ಪಾಯಿಂಟ್ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದ್ದು ಟೂರ್ನಿಯಿಂದ ಹೊರಬಿದ್ದಿದೆ. ತಂಡದಿಂದ ಸಂಘಟಿತ ಪ್ರದರ್ಶನ ಬರುತ್ತಿಲ್ಲ. ಅಭಿಷೇಕ್ ಶರ್ಮಾ, ಅನ್ಮೋಲ್​ಪ್ರೀತ್ ಸಿಂಗ್, ರಾಹುಲ್ ತ್ರಿಪಾಠಿ, ನಾಯಕ ಮರ್ಕ್ರಮ್, ಹೆನ್ರಿಚ್ ಕ್ಲಾಸೆನ್, ಗ್ಲೆನ್ ಪಿಲಿಪ್ಸ್ ಕೆಲ ಪಂದ್ಯ ಆಡಿದರೆ ಉಳಿದ ಪಂದ್ಯದಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದರು. ಬೌಲಿಂಗ್​ನಲ್ಲಿ ಹೈದರಬಾದ್ ಪರ ಭುವನೇಶ್ವರ್ ಕುಮಾರ್ ಬಿಟ್ಟರೆ ಮತ್ಯಾರು ಮಾರಕವಾಗಿ ಗೋಚರಿಸುತ್ತಿಲ್ಲ. ಮಾರ್ಕೊ ಜಾನ್ಸೆನ್, ವಾಷಿಂಗ್ಟನ್ ಸುಂದರ್, ಟಿ. ನಟರಾಜನ್ ಲಯಕಂಡುಕೊಳ್ಳಬೇಕಿದೆ. ಮಯಾಂಕ್ ಮಾರ್ಕಂಡೆ ಸ್ಪಿನ್ ಕೆಲಬಾರಿಯಷ್ಟೆ ಕೆಲಸ ಮಾಡಿದೆ.

ಆರ್​ಸಿಬಿ-ಜಿಟಿ:

ಆರ್​ಸಿಬಿ ಹಿಂದಿನ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ಗೆದ್ದು ಬೀಗಿತ್ತು. ವಿರಾಟ್ ಕೊಹ್ಲಿ ಶತಕ ಸಿಡಿಸಿ ಮಿಂಚಿದ್ದರು. ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಮಹಿಪಾಲ್ ಲುಮ್ರೂರ್, ದಿನೇಶ್ ಕಾರ್ತಿಕ್, ಅನುಜ್ ರಾವತ್ ಕಡೆಯಿಂದ ಇನ್ನಷ್ಟು ರನ್ ಬರಬೇಕು. ಕೇದರ್ ಜಾಧವ್ ಒಂದು ಬಾರಿ ಮಾತ್ರ ಕಣಕ್ಕಿಳಿದಿದ್ದರು. ಬೌಲಿಂಗ್​ನಲ್ಲಿ ಆರ್​ಸಿಬಿ ಲಯ ಕಂಡುಕೊಂಡಿದೆ. ಮೊಹಮ್ಮದ್ ಸಿರಾಜ್ ಮತ್ತು ವೇಯ್ನ್ ಪಾರ್ನೆಲ್ ತಂತ್ರದೊಂದಿಗೆ ಬೌಲಿಂಗ್ ಮಾಡುತ್ತಿದ್ದಾರೆ. ಮಿಚೆಲ್ ಬ್ರೆಸ್​ವೆಲ್ ಕೂಡ ಉತ್ತಮ ಬೌಲಿಂಗ್ ಮಾಡುತ್ತಿದ್ದಾರೆ. ಹನಿಂದು ಹಸರಂಗ ಪ್ಲೇಯಿಂಗ್ ಇಲೆವೆನ್​ಗೆ ಕಮ್​ಬ್ಯಾಕ್ ಮಾಡ್ತಾರ ನೋಡಬೇಕು. ಕರ್ಣ್ ಶರ್ಮಾ ಮಾರಕವಾಗಿದ್ದಾರೆ.

ಜಿಟಿ ತಂಡ ಆಡಿರುವ 13 ಪಂದ್ಯಗಳಲ್ಲಿ 9 ಗೆಲುವು 4 ಸೋಲು ಕಂಡು 18 ಅಂಕ ಪಡೆದುಕೊಂಡು ಕ್ವಾಲಿಫೈಯರ್ ಆಗಿದೆ. ಹಾರ್ದಿಕ್ ಪಡೆ ಬ್ಯಾಟಿಂಗ್- ಬೌಲಿಂಗ್ ಎರಡೂ ವಿಭಾಗಗಳಲ್ಲಿ ಬಲಿಷ್ಠವಾಗಿದೆ. ವೃದ್ದಿಮಾನ್ ಸಾಹ ಹಾಗೂ ಶುಭ್​ಮನ್ ಗಿಲ್ ಸ್ಫೋಟಕ ಆರಂಭ ಒದಗಿಸಿದ್ದಾರೆ. ಡೇವಿಡ್ ಮಿಲ್ಲರ್, ವಿಜಯ್ ಶಂಕರ್ ಹಾಗೂ ರಾಹುಲ್ ತೇವಾಟಿಯ ಫಿನಿಶರ್​ಗಳಾಗಿದ್ದಾರೆ. ರಶೀದ್ ಖಾನ್ ಆಲ್ರೌಂಡರ್ ಆಗಿ ಕಾಣಿಸಿಕೊಂಡಿದ್ದಾರೆ. ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಜೋಶ್ವಾ ಲಿಟಲ್ ಹಾಗೂ ನೂರ್ ಅಹ್ಮದ್ ಮಾರಕವಾಗಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ipl-2023-last-double-header-first-match-will-be-played-between-mi-and-srh-second-match-rcb-vs-gt-kannada-news-vb-583456.html

Leave a Reply

Your email address will not be published. Required fields are marked *