Skip to content
  • Saturday, July 5, 2025
  • About us
  • Contact us
ಸಮಗ್ರ ಸುದ್ದಿ

ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • Horoscope
  • Home
  • Sports
  • Shubman Gill: ಶತಕದ ಸರದಾರ ಶುಭ್​ಮನ್ ಗಿಲ್ ಪಂದ್ಯ ಮುಗಿದ ಬಳಿಕ ಆಡಿದ ಮಾತುಗಳೇನು ಗೊತ್ತೇ?
Sports

Shubman Gill: ಶತಕದ ಸರದಾರ ಶುಭ್​ಮನ್ ಗಿಲ್ ಪಂದ್ಯ ಮುಗಿದ ಬಳಿಕ ಆಡಿದ ಮಾತುಗಳೇನು ಗೊತ್ತೇ?

May 27, 2023
samagrasuddi

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಗುಜರಾತ್ ಟೈಟಾನ್ಸ್ ತಂಡ ಫೈನಲ್​ಗೆ ಪ್ರವೇಶ ಪಡೆದಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ ಜಿಟಿ 62 ರನ್​ಗಳಿಂದ ಜಯ ಸಾಧಿಸಿತು.ಸತತ ಎರಡನೇ ಬಾರಿ ಐಪಿಎಲ್ ಫೈನಲ್ ತಲುಪಿರುವ ಗುಜರಾತ್ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಜಿಟಿ ಗೆಲ್ಲಲು ಪ್ರಮುಖ ಕಾರಣ ಶುಭ್​ಮನ್ ಗಿಲ್ ಶತಕ ಮತ್ತು ಬೌಲಿಂಗ್ ಪ್ರದರ್ಶನ.ಗಿಲ್ ಕೇವಲ 60 ಎಸೆತಗಳಲ್ಲಿ 7 ಫೋರ್, 10 ಸಿಕ್ಸರ್​ನಿಂದ ದಾಖಲೆಯ 129 ರನ್ ಚಚ್ಚಿದರೆ, ಬೌಲಿಂಗ್​ನಲ್ಲಿ ಮೋಹಿತ್ ಶರ್ಮಾ 2.2 ಓವರ್​ನಲ್ಲಿ 10 ರನ್ ನೀಡಿ 5 ವಿಕೆಟ್ ಕಿತ್ತು ಮಿಂಚಿದರು.ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಶತಕವೀರ ಶುಭ್​ಮನ್ ಗಿಲ್, ಐಪಿಎಲ್​ನಲ್ಲಿ ಇದು ನನ್ನ ಶ್ರೇಷ್ಠ ಇನ್ನಿಂಗ್ಸ್ ಎಂದು ಹೇಳಿದ್ದಾರೆ.ನಾನು ಬಾಲ್ ಟು ಬಾಲ್, ಓವರ್ ಟು ಓವರ್ ಆಡುತ್ತಾ ಸಾಗಿದೆ. ಆ ಒಂದು ಓವರ್​ನಲ್ಲಿ ಮೂರು ಸಿಕ್ಸ್ ಸಿಡಿಸಿದ್ದು ನನಗೆ ಒಳ್ಳೆಯ ಟಚ್ ಸಿಕ್ಕಿತು. ಆಗ ನನಗೆ ಅನಿಸಿತು ಇಂದು ನನ್ನ ದಿನವೆಂದು. ಅಲ್ಲದೆ ಈ ಪಿಚ್​ನಲ್ಲಿ ಚೆಂಡು ಬ್ಯಾಟ್​ಗೆ ಚೆನ್ನಾಗಿ ಬರುತ್ತಿದ್ದರಿಂದ ಸುಲಭವಾಯಿತು ಎಂಬುದು ಶುಭ್​ಮನ್ ಗಿಲ್ ಮಾತು.ಈ ಪಂದ್ಯದಲ್ಲಿ ಆಡಬೇಕಿರುವುದು ಮುಖ್ಯವಾಗಿತ್ತು. ನಾನು ಉತ್ತಮವಾದ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿ ಐಪಿಎಲ್​ನಲ್ಲಿ ಕಣಕ್ಕಿಳಿದೆ. ಕೊನೆಯ ಸೀಸನ್​ ಕೂಡ ನನಗೆ ಅತ್ಯುತ್ತಮವಾಗಿತ್ತು. ನಾನು ಬ್ಯಾಟ್ ಮಾಡಲು ಶುರು ಮಾಡಿದಾಗ ಇಲ್ಲಿ ಒಳ್ಳೆಯ ಸ್ಕೋರ್ ಮಾಡಬಹುದು ಎಂಬ ನಂಬಿಕೆ ಬಂತು ಎಂದು ಗಿಲ್ ಹೇಳಿದ್ದಾರೆ.ಕಳೆದ ವೆಸ್ಟ್ ಇಂಡೀಸ್ ಸರಣಿಯಿಂದ ನನ್ನಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಇಂಜುರಿ ಆಗಿದ್ದೆ, ಆದರೂ ನಾನು ನನ್ನ ಕೆಲಸವನ್ನು ಬಿಡಲಿಲ್ಲ. ಟಿ20 ವಿಶ್ವಕಪ್ ಬಳಿಕ ನಡೆದ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ನಾನು ನನ್ನಲ್ಲಿ ಕೆಲ ಬದಲಾವಣೆ ಮಾಡಿದೆ. ಕೆಲವು ಹೊಡೆತಗಳಲ್ಲಿ ಸಾಕಷ್ಟು ಕೆಲಸ ಮಾಡಿದೆ - ಶುಭ್​ಮನ್ ಗಿಲ್.ಒಂದು ಬಾರಿ ಮೈದಾನಕ್ಕೆ ಇಳಿದರೆ ಯಾವುದೇ ನಿರೀಕ್ಷೆ ಇರದೆ ಸಂಪೂರ್ಣವಾಗಿ ತಂಡಕ್ಕೆ ಕೊಡುಗೆ ನೀಡುವ ಬಗ್ಗೆ ಯೋಚಿಸುತ್ತೇನೆ. ನನಗನಿಸುವ ಪ್ರಕಾರ ಐಪಿಎಲ್​ನಲ್ಲಿ ಇದು ನನ್ನ ಅತ್ಯುತ್ತಮ ಇನ್ನಿಂಗ್ಸ್ ಆಗಿದೆ ಎಂದು ಶುಭ್​ಮನ್ ಗಿಲ್ ಹೇಳಿದ್ದಾರೆ.

source https://tv9kannada.com/photo-gallery/cricket-photos/shubman-gill-in-post-match-presentation-after-gt-vs-mi-qualifier-2-he-said-this-is-the-my-best-innings-in-ipl-vb-587848.html

Tags: Cricket, IPL, IPL 2023, samagrasuddi, Sports news, T-20, TATA IPL 2023, ಸಮಗ್ರ ಸುದ್ದಿ

Post navigation

IPL 2023: 6,6,6; 5 ರನ್ ನೀಡಿ 5 ವಿಕೆಟ್ ಉರುಳಿಸಿದ್ದ ಬೌಲರ್​ ಸದ್ದಡಗಿಸಿದ ಗಿಲ್..!
Shubman Gill: ಶುಭ್​ಮನ್ ಗಿಲ್ ಶತಕ ಸಿಡಿಸಿದಾಗ ರೋಹಿತ್ ಶರ್ಮಾ ಹಾಗೂ ಜಯ್ ಶಾ ಕೊಟ್ಟ ರಿಯಾಕ್ಷನ್ ನೋಡಿ

Leave a Reply Cancel reply

Your email address will not be published. Required fields are marked *

Recent Comments

  1. Kaveri Sonkamble on SBI ನೇಮಕಾತಿ; ಸರ್ಕಲ್​ ಬೇಸ್ಡ್​​ ಆಫೀಸರ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನMay 31, 2025

    Kaveri Sonkamble

  2. Vani m on SBI Recruitment 2025: SBI ಬ್ಯಾಂಕಿನಲ್ಲಿ 2964 ಹುದ್ದೆಗಳಿಗೆ ನೇಮಕಾತಿ; ಪದವೀಧರರು ಕೂಡಲೇ ಅರ್ಜಿ ಸಲ್ಲಿಸಿMay 13, 2025

    I am complete b. Com in experience of work

  3. Sushma Basayya Hiremath on ಅಗ್ನಿವೀರ್​ ನೇಮಕಾತಿ: ರಾಜ್ಯದ 14 ಜಿಲ್ಲೆಗಳ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.April 9, 2025

    Sushma Basayya Hiremath

  4. samagrasuddi on ಮೈಸೂರು| ಶಾರದ ವಿಲಾಸ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ವಿಶ್ವ ಜಲ ದಿನ ಕಾರ್ಯಕ್ರಮ.March 24, 2025

    Tq

  5. Darshan K M on ಮೈಸೂರು| ಶಾರದ ವಿಲಾಸ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ವಿಶ್ವ ಜಲ ದಿನ ಕಾರ್ಯಕ್ರಮ.March 24, 2025

    Meaning full program..✨❤️

CITIES

Cities

🏫 ಕರ್ನಾಟಕದ 4,134 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿಗಳಿಗೆ ಅವಕಾಶ

July 4, 2025
samagrasuddi

📅 ದಿನಾಂಕ: 4 ಜುಲೈ 2025✍️ ಸಮಗ್ರ ಸುದ್ದಿ ವಿಶೇಷ ✅ ಮಹತ್ವದ ನಿರ್ಧಾರ: ಕರ್ನಾಟಕ ಸರ್ಕಾರವು 2025–26ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ 4,134 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿಗಳನ್ನು ಪ್ರಾರಂಭಿಸಲು ಸಿದ್ಧತೆ ಮಾಡಿಕೊಂಡಿದೆ. ವಿದ್ಯಾರ್ಥಿಗಳಿಗೆ ಇಂದಿನ ಸ್ಪರ್ಧಾತ್ಮಕ…

Cities

ಕರ್ನಾಟಕದ ಪ್ರಮುಖ ಐತಿಹಾಸಿಕ ತಾಣಗಳು

July 4, 2025
samagrasuddi
Cities

ದಾವಣಗೆರೆ ಜಿಲ್ಲೆಯ ಮಾರುತಿ ಹೆಚ್ ಗೆ 2025ರ ಇಂಟರ್ ನ್ಯಾಷನಲ್ ಐಕಾನ್ ಪ್ರಶಸ್ತಿ ಪ್ರದಾನ.

July 4, 2025
samagrasuddi
Cities

“ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯ ಮುನ್ಸೂಚನೆ – ರೈತರಿಗೆ ಮುನ್ನೆಚ್ಚರಿಕೆ ಅಗತ್ಯ!”

July 4, 2025
samagrasuddi
Cities Health

ಚಿಂತೆ ಬೇಡ, ಹೃದಯ ಸೇಫ್! — ಹಾಸನ ಜಿಲ್ಲೆಯಲ್ಲಿನ ಹೃದಯಾಘಾತ ಪ್ರಕರಣಗಳಿಗೆ ತಡೆಗಟ್ಟಲು ಸರ್ಕಾರದಿಂದ ಕ್ರಮ

July 2, 2025
samagrasuddi

You may Missed

Health

ತಿಂಗಳುಗಟ್ಟಲೆ ಕ್ಯಾರೆಟ್ ತಾಜಾವಾಗಿರಲು ಈ ಸಲಹೆಯನ್ನು ಅನುಸರಿಸಿ! “carrot”

July 5, 2025
samagrasuddi
Health

“ಕರ್ನಾಟಕದಲ್ಲಿ COVID-19 ಪ್ರಕರಣಗಳಲ್ಲಿ ಮತ್ತೆ ಹೆಚ್ಚಳ – ಆರೋಗ್ಯ ಇಲಾಖೆ ಎಚ್ಚರಿಕೆ”

July 4, 2025
samagrasuddi
Health

🌿 ತುಳಸಿಯ ಸೌಂದರ್ಯ ಮತ್ತು ಆರೋಗ್ಯ ಮಹತ್ವ

July 4, 2025
samagrasuddi
Health

ಪ್ರತಿನಿತ್ಯ ಈ 3 ಹಣ್ಣುಗಳ ಸೇವನೆಯಿಂದ ಮುಖದ ಸೊಕ್ಕು ಮಾಯ, ಚರ್ಮದ ಹೊಳಪು ಪಳ ಪಳ! | “Facial Wrinkles”

July 3, 2025
samagrasuddi
July 2025
M T W T F S S
 123456
78910111213
14151617181920
21222324252627
28293031  
« Jun    
  • ನೀರಜ್ ಚೋಪ್ರಾ ಪ್ರಧಾನದ ಆಕರ್ಷಣೆ: ಬೆಂಗ್ಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಂದು ಎನ್ ಸಿ ಕ್ಲಾಸಿಕ್ ಸ್ಪರ್ಧೆ
  • 📝 ಎಸ್‌ಎಸ್‌ಎಲ್‌ಸಿ ಬ್ಲೂಪ್ರಿಂಟ್‌ನಲ್ಲಿ ಎಲ್ಲಾ ಮಾದರಿ ಅಂಕಗಳ ಪ್ರಶ್ನೆ
  • “WCL 2025”: ಯುವರಾಜ್ ಸಿಂಗ್ ನಾಯಕತ್ವದಲ್ಲಿ ಟೀಂ ಇಂಡಿಯಾ ಕಣಕ್ಕೆ; ಮೊದಲ ಎದುರಾಳಿ ಪಾಕಿಸ್ತಾನ.
  • ಭಾರತ – ಇಂಗ್ಲೆಂಡ್ 2ನೇ ಟೆಸ್ಟ್‌: ಆಕಾಶ್‌ – ಸಿರಾಜ್‌ ದಾಳಿಗೆ ಕುಸಿದ ಆಂಗ್ಲರು – ಇಬ್ಬರೂ ವೇಗಿಗಳು ಕಬಳಿಸಿದ ವಿಕೆಟ್ ಎಷ್ಟು?
  • ತಿಂಗಳುಗಟ್ಟಲೆ ಕ್ಯಾರೆಟ್ ತಾಜಾವಾಗಿರಲು ಈ ಸಲಹೆಯನ್ನು ಅನುಸರಿಸಿ! “carrot”
Copyright © 2025 ಸಮಗ್ರ ಸುದ್ದಿ
Contact us
Theme by: Theme Horse
Proudly Powered by: WordPress