Coconut Health Benefits: ಭಾರತೀಯರ ಪ್ರತಿ ಮನೆಗಳಲ್ಲೂ ಅಡುಗೆಗೆ ಬಳಸುವ ವಸ್ತು ತೆಂಗಿನಕಾಯಿ. ಹೆಚ್ಚಿನವರು ಇದನ್ನು ರುಚಿಯ ದೃಷ್ಠಿಯಿಂದ ಬಳಸುವವವರೇ ಹೆಚ್ಚು. ಅಡುಗೆ ಬಳಕೆ ಮಾತ್ರವಲ್ಲ ಉತ್ತಮ ಆರೋಗ್ಯ ಗುಣ ಹೊಂದಿದೆ.

Health Tipes: ‘ತೆಂಗು ಮತ್ತೆ ಇಂಗು ಇದ್ದರೆ ಮಂಗ ಸಹ ಚೆನ್ನಾಗಿ ಅಡುಗೆ ಮಾಡಬಲ್ಲದು ಎಂಬ ಗಾದೆಯೇ ಇದೆ. ಭಾರತೀಯರ ಪ್ರತಿ ಮನೆಗಳಲ್ಲೂ ಅಡುಗೆಗೆ ಬಳಸುವ ವಸ್ತು ಆಗಿದೆ. ಖಾರದ ಜೊತೆಯಲ್ಲಿ ಕಾಯಿ ರುಬ್ಬುವುದರಿಂದ ಅಡುಗೆ ರುಚಿ ಹೆಚ್ಚುತ್ತದೆ.
ಹೆಚ್ಚಿನವರು ಇದನ್ನು ರುಚಿಯ ದೃಷ್ಠಿಯಿಂದ ಬಳಸುವವವರೇ ಹೆಚ್ಚು. ಅದರ ಬಳಕೆಯಿಂದ ಯಾವೆಲ್ಲಾ ಉಪಯೋಗವಿದೆ ಎಂಬುವುದನ್ನು ಒಬ್ಬೊರು ಯೋಚಿಸುವುದಿಲ್ಲ. ತೆಂಗಿನಕಾಯಿನ್ನು ಮಾತ್ರ ಸೇವಿಸಬಹುದಾಗಿದೆ. ಹಾಲಿನ ಅಂಶ ಹೊಂದಿರುವ ಈ ಕಾಯಿ ಬಹಳ ರುಚಿಕರವಾಗಿರುತ್ತದೆ.
ಇದರಲ್ಲಿರುವ ಪೋಷಕಾಂಶಗಳು
ಜೀವಸತ್ವಗಳಾದ ಸಿ, ಇ, ಬಿ, ಬಿ3, ಬಿ5, ಕಬ್ಬಿಣ, ಸೆಲೇನಿಯಂ, ಸೋಡಿಯಂ, ಕ್ಯಾಲ್ಸಿಯಂ, ಮ್ಯಾಗ್ನೇಶಿಯಂ ಹಾಗೂ ರಂಜಕ,ಫಾಸ್ಪರಸ್, ಹಾಗೂ ಇದು ಆಂಟಿಫಂಗಲ್, ಆಂಟಿಬ್ಯಾಕ್ಟೀರಿಯಲ್ಗುಣಗಳನ್ನು ಹೊಂದಿದೆ.
ತೆಂಗಿನಕಾಯಿಯಲ್ಲಿರುವ ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್ ಗುಣವು, ಉತ್ಕರ್ಷಣ ನಿರೋಧಕಗಳ ಹೆಚ್ಚಳಕ್ಕೆ ಉತ್ತಮ ಆಧಾರವಾಗಿದೆ. ಹಾಗೆಯೇ ಆಲ್ಕಲೈನ್ ಎಣ್ಣೆಯೂ ಅಧಿಕ ಪ್ರಮಾಣದಲ್ಲಿ ಹೊಂದಿದೆ.
ನಿದ್ರಾಹೀನತೆ ಸಮಸ್ಯೆಯಿಂದ ಬಳುತ್ತಿದ್ದರೇ, ಅಂಥವರು ಮಲಗುವ ಮುನ್ನ ತೆಂಗಿನಕಾಯಿ ಸೇವಿಸಿ ಮಲಗುವುದರಿಂದ ಉತ್ತಮ ನಿದ್ರೆಗೆ ಕಾರಣವಾಗುತ್ತದೆ.
ತೆಂಗಿನಕಾಯಿಯಲ್ಲಿ ಕ್ಯಾಲ್ಸಿಯಂ, ಕಬ್ಬಿಣಾಂಶ, ಫಾಸ್ಪರಸ್ ಮತ್ತು ಖನಿಜಾಂಶ ,ನಾರಿನಾಂಶವು ಮಲಬದ್ಧತೆ ಸಮಸ್ಯೆ ನಿವಾರಿಸುವಲ್ಲಿ ಸಹಾಕರಿಸುತ್ತದೆ.