Lets Get married Movie: ಕ್ರಿಕೆಟ್ ದಿಗ್ಗಜ ಧೋನಿ ಈ ಬಾರಿ ಐಪಿಯಲ್ನಲ್ಲಿ ಕೊನೆಯ ಪಂದ್ಯ ಎಂದು ಹೆಚ್ಚಿನವರು ಬೇಸರ ವ್ಯಕ್ತ ಪಡಿಸಿದ್ದರು. ಆದರೆ ಇದೀಗ ತಮ್ಮನ್ನು ಪ್ರೀತಿಸುವ ಅಭಿಮಾನಿಗಳಿಗೆ ಸಿನಿಮಾದ ಮೂಲಕ ಗುಡ್ ನ್ಯೂಸ್ ನೀಡಲು ಸಜ್ಜಾಗಿದ್ದಾರೆ.

ಚೆನ್ನೈ:ಕ್ರಿಕೆಟ್ ದಿಗ್ಗಜ ಧೋನಿ ಈ ಬಾರಿ ಐಪಿಯಲ್ನಲ್ಲಿ ಕೊನೆಯ ಪಂದ್ಯ ಎಂದು ಹೆಚ್ಚಿನವರು ಬೇಸರ ವ್ಯಕ್ತ ಪಡಿಸಿದ್ದರು. ಆದರೆ ಇದೀಗ ತಮ್ಮನ್ನು ಪ್ರೀತಿಸುವ ಅಭಿಮಾನಿಗಳಿಗೆ ಸಿನಿಮಾದ ಮೂಲಕ ಗುಡ್ ನ್ಯೂಸ್ ನೀಡಲು ಸಜ್ಜಾಗಿದ್ದಾರೆ.
ಇನ್ನು ಮುಂದೆ ಐಪಿಯಲ್ ನಲ್ಲಿ ಆಡದೇ ಇದ್ದರೂ, ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾರೆ. ಈಗಾಗಲೇ ಧೋನಿ ಮೊದಲ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಧೋನಿ ನಿರ್ಮಾಣ ಸಿನಿಮಾದ ಸುದ್ದಿ ಹೊರ ಬೀಳುತ್ತಿದ್ದತಂತೆ ಅನೇಕರು ಹಲವರಲ್ಲಿ ಕೂತುಹಲ ಮೂಡಿಸಿದೆ. ಆ ಕೂತುಹಲಕ್ಕೆಲ್ಲಾ ತೆರೆ ಬಿದ್ದಿದೆ. ಧೋನಿಗೂ ತಮಿಳುನಾಡಿಗೂ ಉತ್ತಮ ನಂಟಿರುವುದು ಗೊತ್ತಿರುವ ವಿಷಯ.
ಈ ನಿಟ್ಟಿನಲ್ಲಿ ತಮಿಳುನಾಡಿನಲ್ಲಿ ಅವರಿಗೆ ದೊಡ್ಡ ಅಭಿಮಾನಿ ಹೊಂದಿರುವುದರಿಂದ ತಮ್ಮ ಮೊದಲ ಚಿತ್ರವನ್ನು ತಮಿಳಿನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಲೆಟ್ಸ್ ಗೆಟ್ ಮ್ಯಾರೀಡ್ʼ ಎಂಬ ಶೀರ್ಷಿಕೆ ಹೊಂದಿರುವ ಈ ಚಿತ್ರವು ಕಂಪ್ಲಿಟ್ ಫ್ಯಾಮಿಲಿ ಎಂಟರ್ಟೇನರ್ ವಿಷಯ ಆಧಾರಿತವಾಗಿದೆ.
ಸಾಕ್ಷಿ ಸಿಂಗ್ ಧೋನಿ ನಿರ್ಮಾಣದ ಈ ಚಿತ್ರವನ್ನು ರಮೇಶ್ ತಮಿಳ್ಮಣಿ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಸದ್ಯ ಕ್ರಿಕೆಟ್ನಿಂದ ನಿವೃತ್ತಿ ಪಡೆದ ಲೆಜೆಂಡ್, ಸಿನಿಮಾ ಮಾತ್ರವಲ್ಲದೇ ವೆಬ್ ಸೀರಿಸ್ಗಳನ್ನು ನಿರ್ಮಾಣದ ಯೋಜನೆಯು ಇದೆ ಅಂಥೆ.