
16ನೇ ಆವೃತ್ತಿಯ ಐಪಿಎಲ್ (IPL 2023) ಮುಗಿದು ಎರಡು ವಾರಗಳಿಗಿಂತ ಹೆಚ್ಚು ಸಮಯ ಕಳೆದಿದೆ. ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (chennai super kings) ಐದನೇ ಬಾರಿಗೆ ಪ್ರಶಸ್ತಿ ಗೆಲ್ಲುವುದರೊಂದಿಗೆ ಮಿಲಿಯನ್ ಡಾಲರ್ ಟೂರ್ನಿಗೆ ತೆರೆ ಬಿದ್ದಿತ್ತು. ಅಲ್ಲದೆ ಈ ಆವೃತ್ತಿ ಎಂಎಸ್ ಧೋನಿ (MS Dhoni) ಅವರ ಕೊನೆಯ ಆವೃತ್ತಿ ಎಂಬ ಮಾತು ಟೂರ್ನಿ ಆರಂಭಕ್ಕೂ ಮುನ್ನವೇ ಕೇಳಿಬರಲಾರಂಭಿಸಿತ್ತು. ಆದರೆ ಈ ಊಹಪೋಹಗಳಿಗೆ ಲೀಗ್ನ ಕೊನೆಯಲ್ಲಿ ಉತ್ತರಿಸಿದ್ದ ಧೋನಿ, ಅದರ ಬಗ್ಗೆ ಚಿಂತಿಸಲು ನನಗೆ ಇನ್ನೂ 7 ರಿಂದ 8 ತಿಂಗಳ ಕಾಲಾವಕಾಶವಿದೆ ಎಂದಿದ್ದರು. ಆ ಬಳಿಕ ಧೋನಿಯ ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ಸಿಎಸ್ಕೆ (CSK) ಸಿಇಒ ಕೂಡ ಧೋನಿ ತಂಡದಲ್ಲಿ ಆಡುವುದಾದರೆ ಅದಕ್ಕೆ ನಮ್ಮ ಸ್ವಾಗತಿವಿದೆ ಎಂದಿದ್ದರು. ಈ ಮೂಲಕ ಧೋನಿ ಸದ್ಯಕ್ಕೆ ನಿವೃತ್ತಿ ನೀಡುವುದಿಲ್ಲ, ಮುಂದಿನ ಆವೃತ್ತಿಯಲ್ಲೂ ಐಪಿಎಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದರು. ಆದರೆ ಇದೀಗ ಸಿಎಸ್ಕೆ ಫ್ರಾಂಚೈಸಿ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಧೋನಿಯ ಬಗ್ಗೆ ಭಾವನಾತ್ಮಕ ವಿಡಿಯೋ ಹಂಚಿಕೊಂಡಿದ್ದು, ಧೋನಿ ಐಪಿಎಲ್ಗೆ ನಿವೃತ್ತಿ ಹೇಳಿದರಾ ಎಂಬ ಅನುಮಾನ ಕಾಡಲಾರಂಭಿಸಿದೆ.
ಮೂರು ವರ್ಷಗಳ ಹಿಂದೆ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿದ್ಧ ಧೋನಿ ಐಪಿಎಲ್ನಲ್ಲಿ ವೈರಾಗ್ಯ ಭಾವದಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದರು. ಮೈದಾನದಲ್ಲಿ ಧೋನಿಯ ಆ ಉತ್ಸಾಹ ಕಳೆಗುಂದಲಾರಂಭಿಸಿತ್ತು. ಇದಕ್ಕೆ ಪೂರಕವಾಗಿ ಧೋನಿ ಕೂಡ ಕೊನೆಯ ಹಂತದಲ್ಲಿ ಬ್ಯಾಟಿಂಗ್ ಬರಲಾರಂಭಿಸಿದ್ದರು. ಹೀಗಾಗಿ ಧೋನಿಗೆ 2023ರ ಐಪಿಎಲ್ ಕೊನೆಯ ಐಪಿಎಲ್ ಆಗಿರಬಹುದು ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯವಾಗಿತ್ತು. ಆದರೆ ಅಂತಿಮವಾಗಿ ಧೋನಿ ಐಪಿಎಲ್ನ ಕೊನೆಯಲ್ಲಿ ಇದಕ್ಕೆಲ್ಲ ಉತ್ತರಿಸಿದ್ದರು.
Oh Captain, My Captain! 🥹#WhistlePodu #Yellove
@msdhoni pic.twitter.com/whJeUjWUVd
— Chennai Super Kings (@ChennaiIPL) June 13, 2023
ಆದರೆ ಇದೀಗ ಚೆನ್ನೈ ಸೂಪರ್ ಕಿಂಗ್ಸ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಧೋನಿಗೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳು ಹರಿದಾಡಲಾರಂಭಿಸಿವೆ. ಅದರಲ್ಲೂ ಇತ್ತೀಚೆಗೆ ಸಿಎಸ್ಕೆ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಧೋನಿಗೆ ಸಂಬಂಧಿಸಿದ 33 ಸೆಕೆಂಡ್ಗಳ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಇದು ಅಭಿಮಾನಿಗಳನ್ನು ಮತ್ತೆ ಭಾವುಕರನ್ನಾಗಿ ಮಾಡಿದೆ.
Thala is an emotion 🥹#WhistlePodu #Yellove
@msdhoni pic.twitter.com/ia08IGX5lN
— Chennai Super Kings (@ChennaiIPL) June 3, 2023
𝙒𝙚 𝙖𝙧𝙚 𝙩𝙝𝙚 𝘾𝙝𝙚𝙣𝙣𝙖𝙞 𝘽𝙤𝙮𝙨
𝙈𝙖𝙠𝙞𝙣𝙜 𝙖𝙡𝙡 𝙩𝙝𝙚 𝙣𝙤𝙞𝙨𝙚
𝙀𝙫𝙚𝙧𝙮𝙬𝙝𝙚𝙧𝙚 𝙬𝙚 𝙜𝙤!#CHAMPION5 #WhistlePodu #Yellove
pic.twitter.com/yw9sv30xLz
— Chennai Super Kings (@ChennaiIPL) May 29, 2023
Kicking off the week in style!
#WhistlePodu #Yellove
@msdhoni pic.twitter.com/Ch7nkD5Wet
— Chennai Super Kings (@ChennaiIPL) June 12, 2023
ನಿವೃತ್ತಿ ಬಗ್ಗೆ ಧೋನಿ ಹೇಳಿದ್ದೇನು?
ಮೇ 29 ರಂದು ನಡೆದ ರೋಚಕ ಫೈನಲ್ನಲ್ಲಿ ಗೆದ್ದ ನಂತರ ನಿವೃತ್ತಿ ಬಗ್ಗೆ ಮಾತನಾಡಿದ್ದ ಧೋನಿ, ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ, ನನಗೆ ನಿವೃತ್ತಿ ಘೋಷಿಸಲು ಇದು ನನಗೆ ಸರಿಯಾದ ಸಮಯ. ಆದರೆ, ಈ ವರ್ಷ ನಾನು ಎಲ್ಲೇ ಹೋಗಿದ್ದರು ನನ್ನ ಮೇಲೆ ಪ್ರೀತಿ ಮತ್ತು ವಾತ್ಸಲ್ಯ ತೋರಿಸಿದರು. ಎಲ್ಲರಿಗೂ ತುಂಬಾ ಧನ್ಯವಾದಗಳು ಎಂದು ಹೇಳುವುದು ಸುಲಭದ ವಿಷಯ, ಆದರೆ ಕಠಿಣ ವಿಷಯವೆಂದರೆ ಇನ್ನೂ 9 ತಿಂಗಳು ಕಷ್ಟಪಟ್ಟು ಮುಂದಿನ ಐಪಿಎಲ್ ಆಡುವುದು. ಇದು ನನ್ನ ದೇಹಕ್ಕೆ ಸುಲಭವಾಗುವುದಿಲ್ಲ. ಆದರೆ, ಅಭಿಮಾನಿಗಳಿಗೆ ನನ್ನಿಂದ ಉಡುಗೊರೆಯಾಗಲಿದೆ ಎಂದು ಹೇಳಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Views: 0


