TNPL 2023: ಟಿಎನ್​ಪಿಎಲ್​ನಲ್ಲೂ ಅಬ್ಬರಿಸಿದ ಸಾಯಿ ಸುದರ್ಶನ್

TNPL 2023: ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಫೈನಲ್ ಪಂದ್ಯದಲ್ಲಿ CSK ವಿರುದ್ಧ 47 ಎಸೆತಗಳಲ್ಲಿ 96 ರನ್ ಬಾರಿಸಿ ಅಬ್ಬರಿಸಿದ್ದ ಗುಜರಾತ್ ಟೈಟಾನ್ಸ್ ತಂಡದ ಯುವ ದಾಂಡಿಗ ಸಾಯಿ ಸುದರ್ಶನ್ ತಮಿಳುನಾಡು ಪ್ರೀಮಿಯರ್​ ಲೀಗ್​ನಲ್ಲೂ ತಮ್ಮ ಭರ್ಜರಿ ಫಾರ್ಮ್​ ಮುಂದುವರೆಸಿದ್ದಾರೆ.ಜೂನ್ 12 ರಿಂದ ಪ್ರಾರಂಭವಾಗಿರುವ ತಮಿಳುನಾಡು ಪ್ರೀಮಿಯರ್ ಲೀಗ್ (TNPL 2023) ಮೊದಲ ಪಂದ್ಯದಲ್ಲಿ ಲೈಕಾ ಕೋವೈ ಕಿಂಗ್ಸ್ ಮತ್ತು ಐಡ್ರೀಮ್ ತಿರುಪ್ಪೂರ್ ತಮಿಳನ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ತಿರುಪ್ಪೂರ್ ತಂಡ ಬೌಲಿಂಗ್ ಆಯ್ದುಕೊಂಡಿತು.ಅದರಂತೆ ಮೊದಲು ಬ್ಯಾಟ್ ಮಾಡಿದ ಲೈಕಾ ಕೋವೈ ಕಿಂಗ್ಸ್ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಿಬ್ಬರೂ 14 ರನ್​ಗಳಿಸುವಷ್ಟರಲ್ಲಿ ವಿಕೆಟ್ ಒಪ್ಪಿಸಿದ್ದರು. ಈ ಹಂತದಲ್ಲಿ ಕಣಕ್ಕಿಳಿದ ಸಾಯಿ ಸುದರ್ಶನ್ ಅಕ್ಷರಶಃ ಅಬ್ಬರಿಸಿದರು.ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಸುದರ್ಶನ್ 4 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ನೊಂದಿಗೆ ಕೇವಲ 45 ಎಸೆತಗಳಲ್ಲಿ 86 ರನ್​ ಚಚ್ಚಿದರು. ಸಾಯಿಯ ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಲೈಕಾ ಕೋವೈ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 179 ರನ್​ ಪೇರಿಸಿತು.ಸಾಯಿಯ ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಲೈಕಾ ಕೋವೈ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 179 ರನ್​ ಪೇರಿಸಿತು.180 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಐಡ್ರೀಮ್ ತಿರುಪ್ಪೂರ್ ತಮಿಳನ್ಸ್ ತಂಡದ ಪರ ತುಷಾರ್ ರಹೇಜಾ 33 ರನ್​ ಬಾರಿಸಿ ಉತ್ತಮ ಆರಂಭ ಒದಗಿಸಿದ್ದರು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳು ವಿಫಲರಾಗುವ ಮೂಲಕ ತಿರುಪ್ಪೂರ್ ತಂಡವು 109 ರನ್​ಗಳಿಗೆ ಆಲೌಟ್ ಆದರು. ಇದರೊಂದಿಗೆ ಲೈಕಾ ಕೋವೈ ಕಿಂಗ್ಸ್ ತಂಡವು 70 ರನ್​ಗಳ ಭರ್ಜರಿ ಜಯ ಸಾಧಿಸಿತು.ಇನ್ನು ಲೈಕಾ ಪರ ನಾಯಕ ಶಾರೂಖ್ ಖಾನ್ 3 ವಿಕೆಟ್ ಪಡೆದರೆ, ಎಂ ಮೊಹಮ್ಮದ್ 2 ವಿಕೆಟ್ ಕಬಳಿಸಿದರು. ಹಾಗೆಯೇ ಗೌತಮ್, ಕಿರಣ್, ಮುಖೇಶ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.

source https://tv9kannada.com/photo-gallery/cricket-photos/tnpl-2023-sai-sudharsan-smashes-86-runs-off-45-balls-kannada-news-zp-600825.html

Leave a Reply

Your email address will not be published. Required fields are marked *