ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಉಳಿಕೆ ಮೂಲ ವೃಂದದ (RPC) 560 ಭೂಮಾಪಕರು (Land Surveyor) ಹಾಗೂ 505 ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ ಲಿಖಿತ ಪರೀಕ್ಷೆಯ ಪ್ರವೇಶ ಪತ್ರವನ್ನು (Hall Ticket) ಬಿಡುಗಡೆ ಮಾಡಿದೆ. ಪರೀಕ್ಷೆಗೆ ಸಜ್ಜಾಗುತ್ತಿರುವ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್ಸೈಟ್ ಮೂಲಕ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಬಹುದು.
ಪರೀಕ್ಷಾ ದಿನಾಂಕ ಮತ್ತು ಅಭ್ಯರ್ಥಿಗಳ ವಿವರ:
- ಭೂಮಾಪಕರ ಹುದ್ದೆ (Land Surveyor): ಅಕ್ಟೋಬರ್ 2ರಂದು ಪರೀಕ್ಷೆ ನಡೆಯಲಿದ್ದು, ಒಟ್ಟು 92,701 ಮಂದಿ ಅರ್ಜಿ ಸಲ್ಲಿಸಿದ್ದಾರೆ.
- ಗ್ರಾಮ ಆಡಳಿತಾಧಿಕಾರಿ (VAO): ಅಕ್ಟೋಬರ್ 4ರಂದು ಪರೀಕ್ಷೆ ಜರುಗಲಿದ್ದು, ಭಾರಿ ಸಂಖ್ಯೆಯಲ್ಲಿ ಅಂದರೆ 4,11,656 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡು, ಅದರಲ್ಲಿ ನಮೂದಿಸಿರುವ ಪರೀಕ್ಷಾ ಕೇಂದ್ರದ ಮಾಹಿತಿ ಮತ್ತು ನಿಯಮಗಳನ್ನು ಗಮನಿಸಿ ಪರೀಕ್ಷೆಗೆ ಹಾಜರಾಗುವಂತೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಸೂಚಿಸಿದ್ದಾರೆ.
ಹಾಲ್ ಟಿಕೆಟ್ ಡೌನ್ಲೋಡ್ ಮಾಡುವುದು ಹೇಗೆ?
- ಕೆಇಎ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
- ಮುಖಪುಟದ ‘ನೇಮಕಾತಿ’ (Recruitment) ವಿಭಾಗದಲ್ಲಿ ಭೂಮಾಪಕ ಅಥವಾ ಆಡಳಿತಾಧಿಕಾರಿ (ಆರ್ಪಿಸಿ) ಪ್ರವೇಶ ಪತ್ರದ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಅರ್ಜಿ ಸಂಖ್ಯೆ (Application Number) ಮತ್ತು ಅಭ್ಯರ್ಥಿಯ ಹೆಸರನ್ನು (ಮೊದಲ ನಾಲ್ಕು ಅಕ್ಷರಗಳು) ನಮೂದಿಸಿ.
- ಪರದೆಯ ಮೇಲೆ ಕಾಣಿಸುವ ನಿಮ್ಮ ಹಾಲ್ ಟಿಕೆಟ್ ಅನ್ನು ಡೌನ್ಲೋಡ್ ಮಾಡಿಕೊಂಡು, ಪ್ರಿಂಟ್ ತೆಗೆದುಕೊಳ್ಳಿ.

ಕಲ್ಯಾಣ ಕರ್ನಾಟಕ ವೃಂದದ ಪರೀಕ್ಷೆ ಯಾವಾಗ?
ಸದ್ಯ ಆರ್ಪಿಸಿ (ಉಳಿಕೆ ಮೂಲ ವೃಂದ) ಹುದ್ದೆಗಳಿಗೆ ಮಾತ್ರ ಪ್ರವೇಶ ಪತ್ರ ಬಿಡುಗಡೆಯಾಗಿದೆ. ಕಲ್ಯಾಣ ಕರ್ನಾಟಕ (KK) ವೃಂದದ ಹುದ್ದೆಗಳ ಪರೀಕ್ಷಾ ವೇಳಾಪಟ್ಟಿ ಈ ಕೆಳಗಿನಂತಿದೆ:
- ಭೂಮಾಪಕರ ಹುದ್ದೆ: ಅಕ್ಟೋಬರ್ 24 ಮತ್ತು 25 ರಂದು.
- ಗ್ರಾಮ ಆಡಳಿತಾಧಿಕಾರಿ (VAO): ಅಕ್ಟೋಬರ್ 25 ರಂದು.
ಈ ಪರೀಕ್ಷೆಗಳ ಪ್ರವೇಶ ಪತ್ರವನ್ನು ಪರೀಕ್ಷಾ ದಿನಾಂಕಕ್ಕಿಂತ ಒಂದು ವಾರ ಮುಂಚಿತವಾಗಿ ಪ್ರಾಧಿಕಾರವು ತನ್ನ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಲಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40