2023-24 ರ ಭಾರತದ ದೇಶೀ ಕ್ರಿಕೆಟ್ ಸೀಸನ್ ದುಲೀಪ್ ಟ್ರೋಫಿ (Duleep Trophy)ಯೊಂದಿಗೆ ಜೂನ್ 28 ರಂದು ಪ್ರಾರಂಭವಾಗಲಿದೆ. ಇದರೊಂದಿಗೆ ಭಾರತ ದೇಶೀ ಕ್ರಿಕೆಟ್ಗೆ ಚಾಲನೆ ಸಿಗಲಿದೆ. ಆ ಬಳಿಕ ದೇವಧರ್ ಟ್ರೋಫಿ ಜುಲೈ 24 ರಿಂದ ಆಗಸ್ಟ್ 4 ರವರೆಗೆ ನಡೆಯಲಿದೆ. ಅಕ್ಟೋಬರ್ 1 ರಿಂದ 5 ರ ನಡುವೆ ಇರಾನಿ ಕಪ್ ನಡೆಯಲಿದೆ. ಟಿ20 ಟೂರ್ನಮೆಂಟ್ ಸೈಯದ್ ಮುಷ್ತಾಕ್ ಅಲಿ (Syed Mushtaq Ali) ಟ್ರೋಫಿ ಅಕ್ಟೋಬರ್ 16 ರಿಂದ 27 ರವರೆಗೆ ಮೊಹಾಲಿ, ಮುಂಬೈ, ರಾಂಚಿ, ಜೈಪುರ ಮತ್ತು ಡೆಹ್ರಾಡೂನ್‌ನಲ್ಲಿ ನಡೆಯಲಿದೆ. ನಾಕೌಟ್ ಪಂದ್ಯಗಳು ಮೊಹಾಲಿಯಲ್ಲಿ ಅಕ್ಟೋಬರ್ 31 ರಿಂದ ನವೆಂಬರ್ 6 ರವರೆಗೆ ನಡೆಯಲಿವೆ. ಆ ಬಳಿಕ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಲೀಗ್ ಪಂದ್ಯಗಳು ನವೆಂಬರ್ 23 ರಿಂದ ಡಿಸೆಂಬರ್ 5 ರವರೆಗೆ ನಡೆಯಲಿದ್ದು, ನಾಕೌಟ್ ಪಂದ್ಯಗಳು ಡಿಸೆಂಬರ್ 9 ರಿಂದ 16 ರವರೆಗೆ ನಡೆಯಲಿವೆ. ಆ ಬಳಿಕ ಭಾರತದ ಪ್ರಧಾನ ರೆಡ್-ಬಾಲ್ ದೇಶೀಯ ಪಂದ್ಯಾವಳಿಯಾದ ರಣಜಿ ಟ್ರೋಫಿಯನ್ನು (Ranji Trophy 2024) ಮುಂದಿನ ವರ್ಷ ಅಂದರೆ, 2024ರ ಜನವರಿ 5 ರಿಂದ ಮಾರ್ಚ್ 14 ರವರೆಗೆ ಆಡಲು ನಿರ್ಧರಿಸಲಾಗಿದೆ.
ರಣಜಿಯ ಹೊಸ ಸೀಸನ್ ಜನವರಿ 5 ರಂದು ಪ್ರಾರಂಭವಾಗಲಿದೆ. ಇದು 70 ದಿನಗಳ ಕಾಲ ನಡೆಯಲಿದ್ದು, ಪಂದ್ಯಾವಳಿ ಮಾರ್ಚ್ 14 ರಂದು ಮುಕ್ತಾಯಗೊಳ್ಳಲಿದೆ. ಲೀಗ್ ಹಂತದ ಪಂದ್ಯಗಳು ಫೆ.19 ರವರೆಗೆ ನಡೆಯಲಿವೆ. ಆ ಬಳಿಕ ಫೆಬ್ರವರಿ 23 ರಿಂದ ನಾಕೌಟ್ ಪಂದ್ಯಗಳು ಪ್ರಾರಂಭವಾಗಲಿವೆ. ಕಳೆದ ಆವೃತ್ತಿಯ ಸೆಮಿಫೈನಲಿಸ್ಟ್ಗಳಾದ ಕರ್ನಾಟಕ ಮತ್ತು ತಮಿಳುನಾಡು ಮುಂಬರುವ ರಣಜಿ ಸೀಸನ್ನಲ್ಲಿ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ಅಲ್ಲದೆ ಸೌರಾಷ್ಟ್ರ ಮತ್ತು ಮಹಾರಾಷ್ಟ್ರ ಕೂಡ ಇದೇ ಗುಂಪಿನಲ್ಲಿವೆ.
BCCI: ರಣಜಿ ಗೆದ್ದವರಿಗೆ 5 ಕೋಟಿ; ದೇಶೀಯ ಪಂದ್ಯಾವಳಿಗಳ ಬಹುಮಾನದ ಗಾತ್ರ ಹೆಚ್ಚಿಸಿದ ಬಿಸಿಸಿಐ..!
ಎಲ್ಲಾ ತಂಡಗಳನ್ನು ಐದು ಗುಂಪುಗಳಾಗಿ ವಿಂಗಡಿಸಲಾಗಿದೆ
- ಗುಂಪು ಎ: ಸೌರಾಷ್ಟ್ರ, ಜಾರ್ಖಂಡ್, ಮಹಾರಾಷ್ಟ್ರ, ವಿದರ್ಭ, ರಾಜಸ್ಥಾನ, ಹರಿಯಾಣ, ಮಣಿಪುರ.
- ಗುಂಪು ಬಿ: ಬಂಗಾಳ, ಆಂಧ್ರ, ಮುಂಬೈ, ಕೇರಳ, ಛತ್ತೀಸ್‌ಗಢ, ಉತ್ತರ ಪ್ರದೇಶ, ಅಸ್ಸಾಂ, ಬಿಹಾರ.
- ಗುಂಪು ಸಿ: ಕರ್ನಾಟಕ, ಪಂಜಾಬ್, ರೈಲ್ವೆ, ತಮಿಳುನಾಡು, ಗೋವಾ, ಗುಜರಾತ್, ತ್ರಿಪುರ, ಚಂಡೀಗಢ.
- ಗುಂಪು ಡಿ: ಮಧ್ಯಪ್ರದೇಶ, ಉತ್ತರಾಖಂಡ, ಹಿಮಾಚಲ, ಬರ್ದಾ, ದೆಹಲಿ, ಒಡಿಶಾ, ಪುದುಚೇರಿ, ಜಮ್ಮು ಮತ್ತು ಕಾಶ್ಮೀರ.
- ಪ್ಲೇಟ್ ಗುಂಪು: ನಾಗಾಲ್ಯಾಂಡ್, ಹೈದರಾಬಾದ್, ಮೇಘಾಲಯ, ಸಿಕ್ಕಿಂ, ಮಿಜೋರಾಂ, ಅರುಣಾಚಲ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ