Crores Culb Films : ಕಳೆದ ಶುಕ್ರವಾರ ಓಂ ರಾವುತ್ ನಿರ್ದೇಶನದ ತೆಲುಗು ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಸಿನಿಮಾ ಆದಿಪುರುಷ್ ತೆರೆಕಂಡಿದೆ. ಈ ಚಿತ್ರ ಓದುಗರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.

No.1 Collection Movie : ಸಾಕಷ್ಟು ಟೀಕೆಗಳು ಹಾಗೂ ಮೆಚ್ಚುಗೆಯನ್ನು ಕಂಡ ಆದಿಪುರುಷ್ ಸಖತ್ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆಗಳು ವ್ಯಕ್ತವಾಗಿರುವುದೇ ಇದರ ಗಳಿಗೆ ಮೇಲೆ ತುಸು ಪರಿಣಾಮ ಬೀರಿದ್ದು. ಆದರೂ ಈ ಆದಿಪುರುಷ್ ಚಿತ್ರ ಸಮಾಧಾನಕರ ಕಲೆಕ್ಷನ್ ಮಾಡಿದೆ. ಹೌದು ಈ ಆದಿಪುರುಷ್ ಸಿನಿಮಾ ಮೊದಲ ದಿನ ವಿಶ್ವ ಬಾಕ್ಸಾಫೀಸ್‌ನಲ್ಲಿ 140 ಕೋಟಿ ಗಳಿಸಿದ್ದು, ಎರಡನೇ ದಿನ 100 ಕೋಟಿ ಕಲೆಕ್ಷನ್ ಮಾಡಿದೆ.
ಹೀಗೆ ಆದಿಪುರುಷ್ ಸಿನಿಮಾ ಟೀಕೆ ಹಾಗೂ ಮಿಶ್ರಪ್ರತಿಕ್ರಿಯೆಗಳ ನಡುವೆಯೂ ಎರಡುದಿನಗಳಲ್ಲಿ 240 ಕೋಟಿ ರೂ ಕಲೆಕ್ಷನ್ ಮಾಡಿದೆ. ಈ ಮೂಲಕ ದಾಖಲೆಯನ್ನು ಬರೆದಿದೆ. ಹೌದು ಪ್ರಭಾಸ್ ನಟನೆಯ ಬಾಹುಬಲಿ ದ ಬೆಗಿನಿಂಗ್, ಸಾಹೋ ಹಾಗೂ ಆದಿಪುರುಷ್ ಚಿತ್ರಗಳು 200 ಕೋಟಿಗಿಂತ ಹೆಚ್ಚು ಕಲೆಕ್ಷನ್ ಮಾಡಿವೆ.ಹೀಗೆ ಅತಿ ಹೆಚ್ಚು ಬಾರಿ 200 ಕೋಟಿ ಕಲೆಕ್ಷನ್ ಮಾಡಿರುವ ಸಿನಿಮಾ ಪಟ್ಟಿಗಳ ಲಿಸ್ಟ್‌ನಲ್ಲಿ ಪ್ರಭಾಸ್ ಮೂರನೇ ಸ್ಥಾನದಲ್ಲಿದ್ದಾರೆ.
ಇನ್ನೂ ಈ 200 ಕೋಟಿ ಗಳಿಕೆ ಮಾಡಿ ಕ್ಲಬ್ ಸೇರಿದ ಸಿನಿಮಾಗಳ ಹಾಗೂ ನಟರ ಸಣ್ಣ ಮಾಹಿತಿ ಇಲ್ಲಿದೆ ನೋಡಿ..
ಧಳಪತಿ ವಿಜಯ್ : ಮೆರ್ಸೆಲ್, ಸರ್ಕಾರ್, ಬಿಗಿಲ್, ವಾರಿಸು, ಮಾಸ್ಟರ್
ರಜನಿಕಾಂತ್ : 2.0, ಕಬಾಲಿ, ಪೆಟ್ಟಾ ಎಂದಿರನ್
ಪ್ರಭಾಸ್ : ಬಾಹುಬಲಿ ದಿ ಬಿಗಿನಿಂಗ್, ಬಾಹುಬಲಿ ದಿ ಕನ್ಕ್ಲೂಷನ್, ಸಾಹೋ ಮತ್ತು ಆದಿಪುರುಷ್
ರಾಮ್ ಚರನ್ : ಆರ್ ಆರ್ ಆರ್, ರಂಗಸ್ಥಲಂ
ಅಲ್ಲು ಅರ್ಜುನ್ : ಅಲಾ ವೈಕುಂಠಪುರಂಲೋ ಹಾಗೂ ಪುಷ್ಪ ದ ರೈಸ್
ಚಿರಂಜೀವಿ : ಸೈರಾ, ವಾಲ್ತೇರು ವೀರಯ್ಯ
ಅಜಿತ್ : ತುನಿವು, ವಿಶ್ವಾಸಂ
ಯಶ್ : ಕೆ.ಜಿ.ಎಫ್. 1&2
ಜೂನಿಯರ್ ಎನ್‌ಟಿಆರ್ : ಆರ್ ಆರ್ ಆರ್
ರಿಷಬ್ ಶೆಟ್ಟಿ : ಕಾಂತಾರ
ಮೇಲೆ ನೀಡಿರುವ ಮಾಹಿತಿಯಂತೆ ತಮಿಳು ನಟ ಧಳಪತಿ ವಿಜಯ್ ನಟನೆಯ 6 ಸಿನಿಮಾಗಳು 200 ಕೋಟಿ ಕ್ಲಬ್ ಸೇರಿದ್ದು, ಅತಿ ಹೆಚ್ಚು 200 ಕೋಟಿ ಕ್ಲಬ್ ಸಿನಿಮಾಗಳನ್ನು ನೀಡಿದ ಸೌತ್ ನಟ ಎನಿಸಿಕೊಂಡಿದ್ದಾರೆ. ರಜನಿಕಾಂತ್ ಅವರು 2 ನೇ ಸ್ಥಾನದಲ್ಲಿದ್ದಾರೆ. ಕನ್ನಡದ ಪರವಾಗಿ ಯಶ್ ಹಾಗೂ ರಿಷಬ್ ಶೆಟ್ಟಿ ಅವರು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.