ಚಿತ್ರದುರ್ಗ: ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಸಂಗೀತ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ದಿನದ ವಿಶೇಷತೆಯ ಕುರಿತಾಗಿ ಸಂಗೀತದ ಇತಿಹಾಸ, ಬೆಳವಣಿಗೆ ಹಾಗೂ ಅದರ ಪ್ರಾಮುಖ್ಯತೆಯ ಬಗ್ಗೆ ವಿದ್ಯಾರ್ಥಿಗಳಾದ ದೀಕ್ಷಿತಾ ಎಂ, ಸುಪ್ರಿತಾ ಎಸ್ ಮತ್ತು ಫಲ್ಕಿನ್ ಅಖ್ತರ್ ಮಾಹಿತಿ ನೀಡಿದರು.
ಅಂತರಾಷ್ಟ್ರೀಯ ಸಂಗೀತ ದಿನಾಚರಣೆಯ ಅಂಗವಾಗಿ 8ನೇ ತರಗತಿಯ ವಿದ್ಯಾರ್ಥಿನಿ ಸಿರಿ ಗೌರಿ ಪಿ ಶೆಟ್ಟಿ ವೀಣಾ ವಾದನದ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪುಟ್ಟರಾಜ ಗವಾಯಿಯವರ ಛದ್ಮವೇಷದಾರಿ ಭವಿಷ್ “ ನೀಡು ಶಿವ ನೀಡದಿರು ಶಿವ” ಹಾಡನ್ನು ಹಾಡಿದರು. ಎಂ ಎಸ್ ಸುಬ್ಬಲಕ್ಷ್ಮಿ ಅವರ ಛದ್ಮವೇಷದಾರಿ “ದಾಸನ ಮಾಡಿಕೋ ಎನ್ನ ಸ್ವಾಮಿ ಸಾಸರ ನಾಮದ ವೆಂಕಟರಮಣ” ಎಂಬ ಹಾಡನ್ನು ತನಿಷಾ ರೆಡ್ಡಿ ಸುಶ್ರಾವ್ಯವಾಗಿ ಹಾಡಿದರು.
5ನೇ ತರಗತಿಯ ವಿದ್ಯಾರ್ಥಿಗಳು ಪರಿಸರಗೀತೆಯಾದ “ನಾವು ಮಕ್ಕಳು ಮುಂದಿನ ಪ್ರಜೆಗಳು, ನಮಗೊಂದಿಷ್ಟು ಉಳಿಸು” ಎಂಬ ಗೀತೆಯನ್ನು ಹಾಡಿದರು. 3ನೇ ತರಗತಿಯ ವಿದ್ಯಾರ್ಥಿಗಳು ಭಾವಗೀತೆಯಾದ “ಹೂವಿನ ದಳಗಳ ತುಂಬಾ, ಅಮ್ಮ ಯಾಕಿಷ್ಟೊಂದು ಧೂಳು” ಎಂಬ ಹಾಡನ್ನು ಭಾವಪೂರ್ಣವಾಗಿ ಹಾಡಿದರು.
ಕಾರ್ಯಕ್ರಮವನ್ನು 5ನೇ ತರಗತಿಯ ವಿದ್ಯಾರ್ಥಿಗಳಾದ ತನ್ಮಯಿ ಮತ್ತು ಶ್ರೀ ವರ್ಷ ನಿರೂಪಿಸಿದರು. ನಾಲ್ಕನೇ ತರಗತಿಯ ವಿದ್ಯಾರ್ಥಿಗಳು “ಫಲದಾಯಕ ನೀನೆ ವಿನಾಯಕ” ಎಂಬ ಭಕ್ತಿ ಗೀತೆಯನ್ನು ಹಾಡುವುದರ ಮೂಲಕ ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಕಾಡೆಮಿಕ್ ಅಡ್ಮಿನಿಸ್ಟ್ರೇಟರ್ ಡಾ|| ಸ್ವಾಮಿ ಕೆ ಎನ್, ಮುಖ್ಯೋಪಾದ್ಯಾಯರಾದ ಸಂಪತ್ ಕುಮಾರ್ ಸಿ ಡಿ, ಐ, ಸಿ. ಎಸ್. ಸಿ. ಪ್ರಿನ್ಸಿಪಾಲರಾದ ಬಸವರಾಜಯ್ಯ ಪಿ. ಸಂಸ್ಥೆಯ ನಿರ್ದೇಶಕರಾದ ಪೃಥ್ವೀಶ್ ಎಸ್ ಎಂ ಸಂಗೀತ ಶಿಕ್ಷಕಿ ಶ್ರೀ ಮತಿ ಜ್ಯೋತಿ ಗಿರೀಶ್ ಹಾಗೂ ಎಲ್ಲಾ ಶಿಕ್ಷಕ/ಶಿಕ್ಷಕರೇತರ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.