ಯೋಗವು ನಮ್ಮನ್ನು ನಾವು ಒಳಗಿನಿಂದ ನೋಡುವ ಕನ್ನಡಿಯಾಗಿದೆ.

ಯೋಗ ಎಂಬ ಪದವು ಸಂಸ್ಕೃತದ ‘ಯುಜ್'(Yuj) ಎಂಬ ಪದದಿಂದ ಬಂದಿದೆ. ಯುಜ್ (Yuj)ಎಂದರೆ ಆತ್ಮ ಮತ್ತು ಪರಮಾತ್ಮ ಒಗ್ಗೂಡುವುದು (Union of individual soul with universal soul) ಎಂದು ಅರ್ಥ.

ಪೌರಾಣಿಕ ಸಾಂಪ್ರದಾಯದ ಪ್ರಕಾರ ಶಿವನನ್ನು ಯೋಗದ ಸ್ಥಾಪಕ ಎಂದು ಹೇಳಲಾಗುತ್ತದೆ. ಆದ್ದರಿಂದ ಶಿವನನ್ನು’ ಆದಿ ಯೋಗಿ ‘ಎಂದು ಕರೆಯಲಾಯಿತು. ನಂತರ ಯೋಗ ವಿಜ್ಞಾನವನ್ನು ಪ್ರಪಂಚದಾದ್ಯಂತ ಪ್ರಾಚೀನ ಋಷಿಗಳು ನಿಧಾನವಾಗಿ ಅಭಿವೃದ್ಧಿ ಪಡಿಸಿದರು. ಕೆಲವು ಸಂಪ್ರದಾಯಗಳು ಯೋಗವು ಪುರಾತನ ಋಷಿಗಳಿಗೆ ದೈವಿಕ ಕೊಡುಗೆಯಾಗಿದೆ ಎಂದು ನಂಬುತ್ತಾರೆ. ಇದರಿಂದಾಗಿ ಮಾನವ ಕುಲವು ದೈವಿಕ ಸ್ವಭಾವವನ್ನು ಅರಿತುಕೊಳ್ಳುವ ಅವಕಾಶವನ್ನು ಹೊಂದಿರುತ್ತದೆ.

ನಂತರ ಮಹರ್ಷಿ ಪತಂಜಲಿಯ ರಾಜಯೋಗ ಅಥವಾ ಅಷ್ಟಾಂಗ ಯೋಗದ ಕುರಿತಾದ ಯೋಗ ಸೂತ್ರಗಳು,ಯೋಗದ ಮೊದಲ ನಿರ್ಣಾಯಕ, ಏಕೀಕೃತ ಮತ್ತು ಸಮಗ್ರ ವ್ಯವಸ್ಥೆಯನ್ನು ಕ್ರೋಡಿಕರಿಸಿದವು.

ಯೋಗ ಎಂದರೆ ಕೇವಲ ಆಸನಗಳಲ್ಲ :

ಯೋಗದಲ್ಲಿ ವಿವಿಧ ಪ್ರಕಾರಗಳಿವೆ : ಕರ್ಮ ಯೋಗ,ಭಕ್ತಿ ಯೋಗ, ಜ್ಞಾನ ಯೋಗ, ಮಂತ್ರ ಯೋಗ, ಹಾಗೂ ಅಷ್ಟಾಂಗ ಯೋಗ.

 ಯೋಗವು ದೇಹದ ನಾಲ್ಕು ಬಯಲುಗಳ ಮೇಲೆ ತನ್ನ ಪರಿಣಾಮವನ್ನು ಬೀರುತ್ತದೆ, ಅವು: ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ. ಆದ್ದರಿಂದ ಯೋಗದ ದಿನನಿತ್ಯದ ಅಭ್ಯಾಸವು ಮನುಷ್ಯನನ್ನು ಸಂಪೂರ್ಣವಾಗಿ ಆರೋಗ್ಯವಾಗಿರಿಸುತ್ತದೆ.

ಯೋಗಾಸನ ಮತ್ತು ದೇಹದ- ಮನಸ್ಸಿನ ಸಂಪರ್ಕ :

ಮನಸ್ಸು ಮತ್ತು ದೇಹವು ಪ್ರತ್ಯೇಕ ಘಟಕಗಳಲ್ಲ, ಆದರೂ ಯೋಚಿಸುವ ಮತ್ತು ವರ್ತಿಸುವ ಪ್ರವೃತ್ತಿ ಇದೆ. ಮನಸ್ಸಿನ ಸ್ಥೂಲ ರೂಪವು ದೇಹ ಮತ್ತು ದೇಹದ ಸೂಕ್ಷ್ಮ ರೂಪವೂ ಮನಸ್ಸು. ಆಸನ, ಪ್ರಾಣಾಯಾಮ, ಬಂಧ, ಮುದ್ರೆ, ಷಟ್ಕರ್ಮ ಮತ್ತು ಧ್ಯಾನದ ಅಭ್ಯಾಸವು ಎರಡರನ್ನೂ  ಸಂಯೋಜಿಸುತ್ತದೆ ಮತ್ತು ಸಮನ್ವಯಗೊಳಿಸುತ್ತದೆ. ದೇಹ ಮತ್ತು ಮನಸ್ಸು ಎರಡು ಉದ್ವಿಗ್ನತೆ(tension) ಅಥವಾ ಗಂಟುಗಳನ್ನು(knots) ಹೊಂದಿರುತ್ತದೆ. ಪ್ರತಿ ಮಾನಸಿಕ ಗಂಟು(mental knot)ಅನುಗುಣವಾದ ದೈಹಿಕ, ಸ್ನಾಯುವಿನ ಗಂಟು(physical and muscular knot) ಮತ್ತು ಪ್ರತಿಯಾಗಿ. ಈ ಗಂಟುಗಳನ್ನು ಬಿಡುಗಡೆ ಮಾಡುವುದು ಆಸನಗಳ ಗುರಿಯಾಗಿದೆ. ಆಸನಗಳು ದೈಹಿಕ ಮಟ್ಟದಲ್ಲಿ ವ್ಯವಹರಿಸುವ ಮೂಲಕ ಮಾನಸಿಕ ಉದ್ವೇಗಗಳನ್ನು ಬಿಡುಗಡೆ ಮಾಡುತ್ತವೆ.

ಯೋಗವು ದೈಹಿಕ ಮತ್ತು ಮಾನಸಿಕ ಪ್ರಕಾರದ ಶಿಸ್ತು ಮತ್ತು ಅಭ್ಯಾಸಗಳ ಸಮೂಹ. ಇಂದಿನ ಜಂಜಾಟಭರಿತ ಜೀವನದಲ್ಲಿ ದೇಹ ಮತ್ತು ಮನಸ್ಸಿನ ನಡುವೆ ಸಮತೋಲನ ಸಾಧಿಸುವುದು ಪುಟ್ಟ ಮಗುವಿನಿಂದ- ವೃದ್ಧರವರೆಗೂ ಅವಶ್ಯವಾಗಿರುವ ಜ್ಞಾನ. ಶಿಸ್ತಿನ ಜೀವನಕ್ರಮಕ್ಕಿಂತ ಯೋಗ ಜೀವನ ನಡೆಸೋಣ. ಪ್ರತಿನಿತ್ಯ ಯೋಗಾಭ್ಯಾಸ ಮಾಡುತ್ತಾ ಸ್ವಸ್ಥ ಜೀವನ ನಮ್ಮದಾಗಿಸೋಣ.

ಭಗವತ್ಗೀತೆಯ ಸಾಲುಗಳು : ಈಗಿನ ವ್ಯಕ್ತಿತ್ವಕ್ಕಿಂತ ಮಾನವನನ್ನು ಉತ್ತಮವಾದ, ಪರಿಪೂರ್ಣ, ಆದರ್ಶದ ಮಟ್ಟಕ್ಕೆ ಅನುಗೊಳಿಸುವಂತೆ  ಮಾಡುವ ಪ್ರಜ್ಞಾಪೂರ್ವಕ ಪ್ರಯತ್ನವೇ ‘ಯೋಗ’.

ಯಶಸ್ವಿನಿ ಕೆ.ಬಿ

 ಬಿ.ಎನ್.ವೈ.ಎಸ್ ವಿದ್ಯಾರ್ಥಿನಿ

ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಬೋಧಕ ಆಸ್ಪತ್ರೆ, ಮೈಸೂರು.

Leave a Reply

Your email address will not be published. Required fields are marked *