ʼಕಿತ್ತಳೆ ಬೀಜʼ ರಕ್ತದೊತ್ತಡ ಹೊಂದಿರುವವರಿಗೆ ಪ್ರಯೋಜನಕಾರಿ..! ಹೇಗೆ ಗೊತ್ತಾ..?

ವಿಟಮಿನ್‌ಗಳು, ಆ್ಯಂಟಿಆಕ್ಸಿಡೆಂಟ್ ಅಂಶಗಳು ಕಿತ್ತಳೆ ಹಣ್ಣಿನ ಬೀಜಗಳಲ್ಲಿ ಹೆಚ್ಚಾಗಿವೆ. ಇದು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ನೀವು ಕಿತ್ತಳೆ ರಸವನ್ನು ಕುಡಿಯುವಾಗ, ಅದರ ಬೀಜಗಳನ್ನು ಸಹ ಅದರಲ್ಲಿ ಬೆರೆಸಿ ಸೇವಿಸಿದರೆ ಬಹಳ ಒಳ್ಳೆಯದು.

Orange seeds health benefits : ಪ್ರತಿಯೊಬ್ಬರೂ ಕಿತ್ತಳೆ ರುಚಿಯನ್ನು ಇಷ್ಟಪಡುತ್ತಾರೆ ಮತ್ತು ಅದರ ಪ್ರಯೋಜನಗಳು ಎಲ್ಲರಿಗೂ ತಿಳಿದಿವೆ. ಇಂದು ನಾವು ಕಿತ್ತಳೆ ಬೀಜಗಳ ಮಹತ್ವದ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ. ಕಿತ್ತಳೆಯನ್ನು ಸೇವಿಸಿದ ನಂತರ, ಜನರು ಅದರ ಬೀಜಗಳನ್ನು ಎಸೆಯುತ್ತಾರೆ, ಆದರೆ ಇಂದು ನಾವು ಆ ಬೀಜಗಳ ಪ್ರಯೋಜನಗಳನ್ನು ಹೇಳುತ್ತೇವೆ, ಜನರು ಬೀಜಗಳನ್ನು ಎಸೆಯುವ ಮೊದಲು ಎರಡು ಬಾರಿ ಯೋಚಿಸಬೇಕು.

ಕೂದಲು ರಕ್ಷಣೆ : ಕಿತ್ತಳೆ ಬೀಜಗಳು ಕೂದಲಿಗೆ ಪ್ರಯೋಜನಕಾರಿ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ಕೂದಲಿನ ರಕ್ಷಣೆ ಮಾಡುತ್ತವೆ. ಕಿತ್ತಳೆ ಬೀಜಗಳ ಸಹಾಯದಿಂದ, ನೀವು ಅದರ ಎಣ್ಣೆಯನ್ನು ಸಹ ತಯಾರಿಸಬಹುದು. ಕೂದಲಿಗೆ ನೈಸರ್ಗಿಕ ಕಂಡಿಷನರ್ ನೀಡುತ್ತದೆ. ಅಲ್ಲದೆ, ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತವೆ, ಕೂದಲಿಗೆ ಸಾಕಷ್ಟು ಪೋಷಣೆಯನ್ನು ನೀಡುತ್ತದೆ.

ರಕ್ತದೊತ್ತಡ : ರಕ್ತದೊತ್ತಡ ಇರುವವರಿಗೆ ಈ ಬೀಜಗಳು ಹೆಚ್ಚು ಪ್ರಯೋಜನಕಾರಿ. ಕಿತ್ತಳೆ ಬೀಜವನ್ನು ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಕಿತ್ತಳೆಯಲ್ಲಿ ವಿಟಮಿನ್ ಬಿ6 ಸಮೃದ್ಧವಾಗಿದೆ ಮತ್ತು ಮೆಗ್ನೀಸಿಯಮ್ ಕೂಡ ಅಧಿಕವಾಗಿದ್ದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. 

ರೋಗ ನಿರೋಧಕ ಶಕ್ತಿ ಹೆಚ್ಚಳ : ಕಿತ್ತಳೆ ಬೀಜಗಳ ಸೇವನೆಯಿಂದ ರೋಗ ನಿರೋಧಕ ಶಕ್ತ ಹೆಚ್ಚಾಗುತ್ತದೆ. ಕಿತ್ತಳೆ ಬೀಜಗಳು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ತುಂಬಾ ಉಪಯುಕ್ತವಾಗಿವೆ. ದೇಹವು ಒಳಗಿನಿಂದ ಸಣ್ಣ ಮತ್ತು ದೊಡ್ಡ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ. ವಿಟಮಿನ್ ಸಿ ಒಳಗಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ ಹಾಗೂ ಕಿತ್ತಳೆ ಬೀಜಗಳ ಸೇವನೆಯಿಂದ ಜೀರ್ಣಕ್ರಿಯೆ ಹೆಚ್ಚಾಗುತ್ತದೆ. 

Source : https://zeenews.india.com/kannada/health/orange-seeds-health-benefits-and-side-effects-142836

Leave a Reply

Your email address will not be published. Required fields are marked *