Good News: ಬಡ್ಡಿ ದರ ಹೆಚ್ಚಿಸಿದ ಕೇಂದ್ರ ಸರ್ಕಾರ, ಇನ್ಮುಂದೆ ಪಿಪಿಎಫ್ ಹಾಗೂ ಎಸ್ಎಸ್ವೈ ಗಳ ಮೇಲೆ ಇಷ್ಟು ಲಾಭ ಸಿಗಲಿದೆ

PPF-SSY-NSC Interest Rates: ಹಣಕಾಸು ಸಚಿವಾಲಯದ ಪರವಾಗಿ ಅಧಿಸೂಚನೆ ಹೊರಡಿಸುವ ಮೂಲಕ ಈ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಈ ಬಾರಿ ಸರ್ಕಾರವು ಆರ್‌ಡಿ ಬಡ್ಡಿದರಗಳನ್ನು ಶೇಕಡಾ 0.3 ರಷ್ಟು ಹೆಚ್ಚಿಸಿದೆ. ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿದರ ಏರಿಕೆಯ ನಡುವೆಯೇ ಸರ್ಕಾರ ಈ ಕ್ರಮ ಕೈಗೊಂಡಿದೆ.

Small Savings Interest Rates Increased: ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವವರ ಪಾಲಿಗೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ನೀವೂ ಕೂಡ ಉಳಿತಾಯ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಿದ್ದರೆ, ಇನ್ನು ಮುಂದೆ ನೀವು ಹೆಚ್ಚಿನ ಬಡ್ಡಿಯ ಲಾಭವನ್ನು ಪಡೆಯುತ್ತೀರಿ. ಹಣಕಾಸು ಸಚಿವಾಲಯದ ಪರವಾಗಿ ಅಧಿಸೂಚನೆ ಹೊರಡಿಸುವ ಮೂಲಕ ಈ ಕುರಿತು ಮಾಹಿತ್ಯನ್ನು ಹಂಚಿಕೊಳ್ಳಲಾಗಿದೆ. ಈ ಬಾರಿ ಸರ್ಕಾರವು ಆರ್‌ಡಿ ಬಡ್ಡಿದರಗಳನ್ನು ಶೇಕಡಾ 0.3 ರಷ್ಟು ಹೆಚ್ಚಿಸಿದೆ. ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿದರ ಏರಿಕೆಯ ಹಿನ್ನೆಲೆ ಸರ್ಕಾರ ಈ ಕ್ರಮ ಕೈಗೊಂಡಿದೆ.

ಪಿಪಿಎಫ್ ಬಗ್ಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ
ಹೂಡಿಕೆದಾರರಲ್ಲಿ ಸಾಕಷ್ಟು ಜನಪ್ರಿಯವಾಗಿರುವ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಮೇಲೆ ನೀಡಲಾಗುತ್ತಿದ್ದ  ಬಡ್ಡಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಮತ್ತು ಅದನ್ನು 7.1 ಪ್ರತಿಶತದಲ್ಲಿ ಉಳಿಸಿಕೊಳ್ಳಲಾಗಿದೆ.

ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ
ಹಣಕಾಸು ಸಚಿವಾಲಯದಿಂದ ಪಡೆದ ಮಾಹಿತಿಯ ಪ್ರಕಾರ, ಆರ್ಡಿ ಖಾತೆಗಳ ಮೇಲಿನ ಬಡ್ಡಿವನ್ನು ಶೇ.0.3ರಷ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ, ಆವರ್ತನ ಠೇವಣಿದಾರರು ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ 6.5 ಶೇಕಡಾ ಬಡ್ಡಿಯನ್ನು ಪಡೆಯಲಿದ್ದಾರೆ, ಇದುವರೆಗೆ ಆರ್ಡಿ ಖಾತೆಗಳಲ್ಲಿ ಶೇ.6.2 ರಷ್ಟು ಬಡ್ಡಿಯನ್ನು ನೀಡಲಾಗುತ್ತಿತ್ತು.

ಪೋಸ್ಟ್ ಆಫೀಸ್ ಎಫ್‌ಡಿಯಲ್ಲಿ ಎಷ್ಟು ಬಡ್ಡಿ ಲಭ್ಯವಿರುತ್ತದೆ?
ಬಡ್ಡಿದರಗಳ ಪರಿಶೀಲನೆಯ ನಂತರ, ಪೋಸ್ಟ್ ಆಫೀಸ್‌ಗಳಲ್ಲಿ ಒಂದು ವರ್ಷದ ಎಫ್‌ಡಿ ಮೇಲಿನ ಬಡ್ಡಿಯು ಶೇಕಡಾ 0.1 ಹೆಚ್ಚಳದೊಂದಿಗೆ ಶೇಕಡಾ 6.9 ಕ್ಕೆ ಹೆಚ್ಚಾಗಲಿದೆ. ಇದೇ ವೇಳೆ, ಎರಡು ವರ್ಷಗಳ ಎಫ್‌ಡಿ ಮೇಲಿನ ಬಡ್ಡಿಯು ಈಗ ಶೇಕಡಾ 7.0 ಆಗಿರುತ್ತದೆ, ಇದುವರೆಗೆ ಅದು ಶೇಕಡಾ 6.9 ರಷ್ಟಿತ್ತು. ಆದರೆ, ಮೂರು ವರ್ಷ ಮತ್ತು ಐದು ವರ್ಷಗಳ ಅವಧಿಯ ಠೇವಣಿಗಳ ಮೇಲಿನ ಬಡ್ಡಿಯನ್ನು ಕ್ರಮವಾಗಿ ಶೇ.7.0 ಮತ್ತು ಶೇ.7.5ರಲ್ಲಿ ಉಳಿಸಿಕೊಳ್ಳಲಾಗಿದೆ.

ಪಿಪಿಎಫ್ ಮತ್ತು ಉಳಿತಾಯ ಖಾತೆಯ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ
ಇದರೊಂದಿಗೆ, ಪಿಪಿಎಫ್ (ಪಿಪಿಎಫ್ ಖಾತೆ) ನಲ್ಲಿನ ಠೇವಣಿಗಳ ಮೇಲಿನ ಬಡ್ಡಿಯನ್ನು ಶೇಕಡಾ 7.1 ರಷ್ಟು ಮತ್ತು ಉಳಿತಾಯ ಖಾತೆಗಳಲ್ಲಿನ ಠೇವಣಿಗಳ ಮೇಲಿನ ಬಡ್ಡಿಯನ್ನು ಶೇಕಡಾ 4.0 ಕ್ಕೆ ಕಾಯ್ದುಕೊಳ್ಳಲಾಗಿದೆ. ಇವುಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಎನ್‌ಎಸ್‌ಸಿಯ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದ ಮೇಲಿನ ಬಡ್ಡಿಯನ್ನು ಜುಲೈ 1 ರಿಂದ ಸೆಪ್ಟೆಂಬರ್ 30, 2023 ರವರೆಗೆ 7.7 ಪ್ರತಿಶತದಲ್ಲಿ ಉಳಿಸಿಕೊಳ್ಳಲಾಗಿದೆ.

SSY ಮತ್ತು SCSS ನಲ್ಲಿ ಎಷ್ಟು ಬಡ್ಡಿಯನ್ನು ಸ್ವೀಕರಿಸಲಾಗುತ್ತದೆ?
ಹೆಣ್ಣು ಮಕ್ಕಳ ಉಳಿತಾಯ ಯೋಜನೆಯಾದ ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರವು ಶೇ. 8.0 ರಷ್ಟಿದ್ದು ಅದು ಕೂಡ ಬದಲಾಗಿಲ್ಲ. ಹಿರಿಯ ನಾಗರಿಕರ ಉಳಿತಾಯ ಯೋಜನೆ ಮತ್ತು ಕಿಸಾನ್ ವಿಕಾಸ್ ಪತ್ರದ ಮೇಲಿನ ಬಡ್ಡಿ ಕ್ರಮವಾಗಿ ಶೇ.8.2 ಮತ್ತು ಶೇ.7.5 ಆಗಿರಲಿದೆ.

ಮಾಸಿಕ ಆದಾಯ ಯೋಜನೆಯಲ್ಲಿ ಎಷ್ಟು
ಈ ಹಿಂದೆ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಹಾಗೂ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿಯನ್ನು ಹೆಚ್ಚಿಸಲಾಗಿತ್ತು. ಸಣ್ಣ ಉಳಿತಾಯ ಯೋಜನೆಯ ಮೇಲಿನ ಬಡ್ಡಿ ದರಗಳನ್ನು ತ್ರೈಮಾಸಿಕ ಆಧಾರದ ಮೇಲೆ ಪರಿಶೀಲಿಸಲಾಗುತ್ತದೆ. ಮಾಸಿಕ ಆದಾಯ ಯೋಜನೆಯ ಬಡ್ಡಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಮತ್ತು ಮೊದಲಿನಂತೆಯೇ ಅಲ್ಲಿ 7.4 ಶೇಕಡಾ ಸಿಗಲಿದೆ.

ಆರ್‌ಬಿಐ ಬಡ್ಡಿ ದರದಲ್ಲಿ ಬದಲಾವಣೆ ಮಾಡಿಲ್ಲ
ಹಣದುಬ್ಬರವನ್ನು ನಿಯಂತ್ರಣಕ್ಕೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ವರ್ಷ ಮೇ ತಿಂಗಳಿನಿಂದ ತನ್ನ ನೀತಿಯಲ್ಲಿ ರೆಪೋ ದರವನ್ನು ಶೇ.2.5 ರಿಂದ ಶೇ.6.5 ರಷ್ಟು ಹೆಚ್ಚಿಸಿರುವುದು ಗಮನಾರ್ಹ. ಇದರಿಂದಾಗಿ ಠೇವಣಿ ಮೇಲಿನ ಬಡ್ಡಿ ದರವೂ ಏರಿಕೆಯಾಗಿದೆ. ಕಳೆದ ಎರಡು ಹಣಕಾಸು ನೀತಿ ಪರಾಮರ್ಶೆಗಳಲ್ಲಿ ಕೇಂದ್ರ ಬ್ಯಾಂಕ್ ನೀತಿ ದರವನ್ನು ಹೆಚ್ಚಿಸಿಲ್ಲ.

Source : https://zeenews.india.com/kannada/business/good-news-government-increased-interest-rates-on-small-saving-schemes-142880

Leave a Reply

Your email address will not be published. Required fields are marked *