ಲಾಟರಿಯ ಜಾಕ್ ಪಾಟ್ ಹಣ ಗೆದ್ದ ಮೆಕ್ಯಾನಿಕ್ ದಾರಿ ಮಧ್ಯೆ ಮದ್ಯದಂಗಡಿಯಲ್ಲಿ ಈ ಟಿಕೆಟ್ ಅನ್ನು ಮರೆತಿದ್ದಾರೆ. ಈ ಟಿಕೆಟ್‌ನ ಫಲಿತಾಂಶ ಹೊರಬಂದಾಗ ಮೆಕ್ಯಾನಿಕ್ ಖರೀದಿಸಿದ ಟಿಕೆಟ್ ಗೆ 25 ಕೋಟಿ ರೂಪಾಯಿ ಜಾಕ್ ಪಾಟ್ ಬಂದಿರುವುದು ಗೊತ್ತಾಗಿದೆ.

Ticket Jackpot Money : ಲಾಟರಿ ಟಿಕೆಟ್ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಅದೆಷ್ಟೋ ಜನ ಕ್ಷಣಾರ್ಧದಲ್ಲಿ ಲಕ್ಷಾಧಿಪತಿಗಳಾಗುತ್ತಾರೆ. ಆದರೆ, ಅಮೆರಿಕದಲ್ಲಿ ಲಾಟರಿ ಟಿಕೆಟ್ ಗೆ ಸಂಬಂಧಿಸಿದಂತೆ ರೋಚಕ ಘಟನೆ ನಡೆದಿದೆ. ಇಲ್ಲಿ ಕಾರ್ ಮೆಕ್ಯಾನಿಕ್ ಒಬ್ಬರಿಗೆ 25 ಕೋಟಿ ಲಾಟರಿ ಬಂದಿದೆ. ಈ ಲಾಟರಿ ದೊಡ್ಡ ರಾದ್ದಾಂತವನ್ನೇ ಉಂಟು ಮಾಡಿದೆ.
ಲಾಟರಿಯ ಜಾಕ್ ಪಾಟ್ ಹಣ ಗೆದ್ದ ಮೆಕ್ಯಾನಿಕ್ ಹೆಸರು ಪಾಲ್ ಲಿಟಲ್. ಅವರು ಯುಎಸ್ಎ ಮ್ಯಾಸಚೂಸೆಟ್ಸ್ ನಿವಾಸಿ ಎಂದು ಮಾಧ್ಯಮ ವರದಿಗಳಲ್ಲಿ ತಿಳಿಸಲಾಗಿದೆ. ಪಾಲ್ ಲಿಟಲ್ ಜನವರಿಯಲ್ಲಿ ಲಾಟರಿ ಟಿಕೆಟ್ ಖರೀದಿಸಿದ್ದರು. ಆದರೆ ಟಿಕೆಟ್ ಖರೀದಿಸಿ ಮನೆಗೆ ಹಿಂತಿರುಗುತ್ತಿದ್ದ ಅವರು ದಾರಿ ಮಧ್ಯೆ ಮದ್ಯದಂಗಡಿಯಲ್ಲಿ ಈ ಟಿಕೆಟ್ ಅನ್ನು ಮರೆತಿದ್ದಾರೆ. ತಾನು ಶರಾಬು ಅಂಗಡಿಯಲ್ಲಿ ಟಿಕೆಟ್ ಬಿಟ್ಟು ಬಂದಿರುವ ವಿಚಾರ ಕೂಡಾ ಅವರಿಗೆ ನೆನಪಿರಲಿಲ್ಲ. ಈ ವ್ಯಕ್ತಿ ಬಿಟ್ಟು ಬಂದಿರುವ ಟಿಕೆಟ್ ಮದ್ಯದಂಗಡಿಯಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರಿಗೆ ಸಿಕ್ಕಿತ್ತು.
ಇತ್ತೀಚೆಗಷ್ಟೇ ಈ ಟಿಕೆಟ್‌ನ ಫಲಿತಾಂಶ ಹೊರಬಂದಾಗ ಮೆಕ್ಯಾನಿಕ್ ಖರೀದಿಸಿದ ಟಿಕೆಟ್ ಗೆ 25 ಕೋಟಿ ರೂಪಾಯಿ ಜಾಕ್ ಪಾಟ್ ಬಂದಿರುವುದು ಗೊತ್ತಾಗಿದೆ. ಮೆಕ್ಯಾನಿಕ್ ಪಾಲ್ ಲಿಟಲ್ ಹೆಸರು ಅನೌನ್ಸ್ ಕೂಡಾ ಆಗಿತ್ತು. ಆದರೆ ಇವರ ಕೈಯ್ಯಲ್ಲಿ ಟಿಕೆಟ್ ಇರಲಿಲ್ಲ. ಟಿಕೆಟ್ ಗಾಗಿ ಹುಡುಕಾಟ ನಡೆಸಿದರೂ ಸಿಗಲಿಲ್ಲ. ಹೀಗೆ ಟಿಕೆಟ್ ಹುಡುಕುತ್ತಿದ್ದಾಗ ತಾನು ಶರಾಬು ಅಂಗಡಿಯಲ್ಲಿಯೇ ಟಿಕೆಟ್ ಬಿಟ್ಟು ಬಂದಿರುವುದು ಪಾಲ್ ಲಿಟಲ್ ಅವರಿಗೆ ನೆನಪಾಗಿದೆ. ಶರಾಬು ಅಂಗಡಿಯಲ್ಲಿ ವಿಚಾರಣೆ ನಡೆಸಿದಾಗ ಅಲ್ಲಿದ್ದ ಮಹಿಳೆ ತನಗೆ ಯಾವ ಟಿಕೆಟ್ ಕೂಡಾ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ಸ್ವಾರಸ್ಯಕರ ಸಂಗತಿ ಎಂದರೆ ಮಹಿಳೆಯೇ ಲಾಟರಿ ಕಚೇರಿಗೆ ಆಗಮಿಸಿ 25 ಕೋಟಿ ರೂ. ಗೆದ್ದ ಲಾಟರಿ ಟಿಕೆಟ್ ಅನ್ನು ತೋರಿಸಿದ್ದಾಳೆ. ಆದರೆ ಅಲ್ಲಿದ್ದವರಿಗೆ ಮಹಿಳೆಯ ಮೇಲೆ ಅನುಮಾನ ಮೂಡಿದ್ದು, ತನಿಖೆ ನಡೆಸಿದ್ದಾರೆ. ಈ ವೇಳೆ ಎಲ್ಲಾ ವಿಚಾರ ಬೆಳಕಿಗೆ ಬಂದಿದೆ. ಅಂತಿಮವಾಗಿ ಟಿಕೆಟ್ ಖರೀದಿಸಿದ ಪಾಲ್ ಲಿಟಲ್ ಅನ್ನು ಪತ್ತೆ ಹಚ್ಚಿ ಲಾಟರಿ ಹಣವನ್ನು ಹಸ್ತಾಂತರಿಸಲಾಯಿತು. ಅಲ್ಲದೆ ಟಿಕೆಟ್ ಬಚ್ಚಿಟ್ಟಿದ್ದ ಮಹಿಳೆಯ ಮೇಲೆ ವಂಚನೆ ಆರೋಪ ಹೊರಿಸಿ ಜೈಲಿಗೆ ಹಾಕಲಾಗಿದೆ.
Source : https://zeenews.india.com/kannada/world/man-lost-his-jackpot-winning-lottery-ticket-at-bar-143451