ಈ ಋತುವಿನಲ್ಲಿ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಇದರಿಂದಾಗಿ ದೇಹವು ತ್ವರಿತವಾಗಿ ರೋಗಗಳಿಗೆ ಗುರಿಯಾಗುತ್ತದೆ. ಅನೇಕ ರೋಗಗಳು ಮತ್ತು ಸೋಂಕುಗಳ ಅಪಾಯವೂ ಮಳೆಗಾಲದಲ್ಲಿ ಹೆಚ್ಚಾಗುತ್ತದೆ.

ಬೆಂಗಳೂರು : ಮಳೆಗಾಲ ಆರಂಭವಾಗಿದೆ. ಮಳೆ ಬಂದರೆ ಬೇಸಿಗೆಯಿಂದ ಪರಿಹಾರ ಸಿಗುತ್ತದೆ. ನೀರಿನ ಹಾಹಾಕಾರ ಕಡಿಮೆಯಾಗುತ್ತದೆ ಎನ್ನುವುದೇನೋ ನಿಜ. ಆದರೆ, ಮಳೆಯೊಂದಿಗೆ ಕೆಲವು ಸಮಸ್ಯೆಗಳು ಕೂಡಾ ಹುಟ್ಟಿಕೊಳ್ಳುತ್ತವೆ. ಅವು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಈ ಋತುವಿನಲ್ಲಿ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಇದರಿಂದಾಗಿ ದೇಹವು ತ್ವರಿತವಾಗಿ ರೋಗಗಳಿಗೆ ಗುರಿಯಾಗುತ್ತದೆ. ಅನೇಕ ರೋಗಗಳು ಮತ್ತು ಸೋಂಕುಗಳ ಅಪಾಯವೂ ಮಳೆಗಾಲದಲ್ಲಿ ಹೆಚ್ಚಾಗುತ್ತದೆ.
ಈ ಕಾರಣಕ್ಕಾಗಿಯೇ ತಜ್ಞರು ಕೂಡಾ ಈ ಋತುವಿನಲ್ಲಿ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಲು ಸಲಹೆ ನೀಡುತ್ತಾರೆ. ಏಕೆಂದರೆ ಕೆಲವು ಆಹಾರ ಪದಾರ್ಥಗಳನ್ನು ಈ ಋತುವಿನಲ್ಲಿ ಸೇವಿಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಋತುವಿನಲ್ಲಿ, ವಿಶೇಷವಾಗಿ ಕೆಲವು ತರಕಾರಿಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಹಾಗಿದ್ದರೆ ಮಳೆಗಾಲದಲ್ಲಿ ಯಾವ ತರಕಾರಿಗಳಿಂದ ದೂರವಿರಬೇಕು ನೋಡೋಣ.
ಹಸಿರು ಎಲೆಗಳ ತರಕಾರಿಗಳು :
ಹಸಿರು ಎಲೆ ತರಕಾರಿಗಳ ಎಲೆಗಳಲ್ಲಿ ಮಳೆಗಾಲದಲ್ಲಿ ತೇವಾಂಶ ಮತ್ತು ಕೊಳಕು ಅಡಗಿರುತ್ತದೆ. ಈ ಕಾರಣದಿಂದಾಗಿ, ಬ್ಯಾಕ್ಟೀರಿಯಾಗಳು ಅವುಗಳೊಳಗೆ ಬೆಳೆಯಲು ಆರಂಭಿಸುತ್ತದೆ. ಅದು ಬರಿಗಣ್ಣಿಗೆ ಗೋಚರಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಈ ಋತುವಿನಲ್ಲಿ ಪಾಲಕ್, ಎಲೆಕೋಸು ಮುಂತಾದ ತರಕಾರಿಗಳನ್ನು ಸೇವಿಸದಿರುವುದು ಉತ್ತಮ.
ಬದನೆ ಕಾಯಿ :
ಈ ಋತುವಿನಲ್ಲಿ ಬದನೆಯಲ್ಲಿ ಕೀಟಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಮಳೆಗಾಲದಲ್ಲಿ ಬದನೆ ಕಾಯಿ ಸೇವಿಸದೆ ಇರುವುದು ಉತ್ತಮ. ಬದನೆಕಾಯಿಯ ನೇರಳೆ ಬಣ್ಣವು ಬಲ್ಬ್ ಆಲ್ಕಲಾಯ್ಡ್ಸ್ ಎಂಬ ರಾಸಾಯನಿಕಗಳ ಕಾರಣದಿಂದಾಗಿರುತ್ತದೆ. ಆಲ್ಕಲಾಯ್ಡ್‌ಗಳು ಅಲರ್ಜಿ ರಿಯಾಕ್ಷನ್, ಚರ್ಮದ ತುರಿಕೆ, ವಾಕರಿಕೆ ಮತ್ತು ಚರ್ಮದ ದದ್ದುಗಳನ್ನು ಉಂಟುಮಾಡುತ್ತವೆ.
ದೊಣ್ಣೆ ಮೆಣಸಿನ ಕಾಯಿ ಅಥವಾ ಶಿಮ್ಲಾ ಮಿರ್ಚ್ :
ದೊಣ್ಣೆ ಮೆಣಸಿನ ಕಾಯಿ ಅಥವಾ ಶಿಮ್ಲಾ ಮಿರ್ಚ್ ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ಮಳೆಗಾಲದಲ್ಲಿ ಇದರ ಬಳಕೆಯಿಂದ ತೊಂದರೆ ಉಂಟಾಗುತ್ತದೆ. ಆರೋಗ್ಯವನ್ನು ಕೆಡಿಸುವ ಬ್ಯಾಕ್ಟೀರಿಯಾಗಳು ಮತ್ತು ಕೀಟಗಳು ಈ ತರಕಾರಿಯಲ್ಲಿ ಮಳೆಗಾಲದಲ್ಲಿ ಹುಟ್ಟಿಕೊಳ್ಳುತ್ತವೆ. ಅದರ ಬೀಜಗಳಲ್ಲಿ ಅಡಗಿರುವ ಕೀಟಗಳು ಕಣ್ಣಿಗೆ ಸುಲಭವಾಗಿ ಕಾಣಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಶಿಮ್ಲಾ ಮಿರ್ಚ್ ಅನ್ನು ಸೇವಿಸಬಾರದು.
ಹೂಕೋಸು :
ಹೂಕೋಸಿನ ವಿನ್ಯಾಸದಿಂದಾಗಿ, ಅದರಲ್ಲಿ ಹೆಚ್ಚಿನ ತೇವಾಂಶವಿರುತ್ತದೆ. ಅದರ ಹೂವುಗಳ ನಡುವೆ ಅನೇಕ ಕೀಟಗಳು ಹುಟ್ಟಿಕೊಳ್ಳುತ್ತವೆ. ಇದು ನಿಮ್ಮ ಆರೋಗ್ಯವನ್ನು ಹಾಳುಮಾಡುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
Source : https://zeenews.india.com/kannada/health/should-avoid-these-vegetables-in-mansoon-helath-tips-143671