Elaichi Health benefits : ಏಲಕ್ಕಿ ಅಡುಗೆಯ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುತ್ತದೆ ಹಾಗೂ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಏಲಕ್ಕಿ ಖಾದ್ಯದ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುವದಷ್ಟೇ ಅಲ್ಲ, ಆರೋಗ್ಯವೂ ಸುಧಾರಿಸುತ್ತದೆ. ಸಧ್ಯ ಈ ಚಿಕ್ಕ ಏಲಕ್ಕಿಯು 5 ಪ್ರಮುಖ ಆರೋಗ್ಯ ಪ್ರಯೋಜನಗಳನ್ನು ತಿಳಿಯೋಣ ಬನ್ನಿ.

Elaichi After meal benefits : ಭಾರತದ ಪ್ರತಿಯೊಂದು ಅಡುಗೆಮನೆಯಲ್ಲಿ ಪ್ರತಿದಿನ ಬಳಸಲಾಗುವ ಅನೇಕ ಮಸಾಲೆ ಪದಾರ್ಥಗಳಲ್ಲಿ ಏಲಕ್ಕಿ ಕೂಡ ಒಂದು. ಉದು ಆಹಾರದ ರುಚಿ ಹೆಚ್ಚಿಸುವುದರ ಜೊತೆ ಆರೋಗ್ಯವನ್ನು ಸುಧಾರಿಸುತ್ತವೆ. ಏಲಕ್ಕಿಯನ್ನು ಸೇರಿಸುವುದರಿಂದ ಖಾದ್ಯದ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುವಂತೆ, ಇದು ಆರೋಗ್ಯಕ್ಕೆ ತುಂಬಾ ಉತ್ತಮ ಏಲಕ್ಕಿಯನ್ನು ಹೆಚ್ಚಾಗಿ ಮೌತ್ ಫ್ರೆಶ್ನರ್ ಆಗಿ ಬಳಸಲಾಗುತ್ತದೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ : ಏಲಕ್ಕಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಊಟದ ನಂತರ ಏಲಕ್ಕಿ ತಿನ್ನುವುದರಿಂದ ಅಜೀರ್ಣ, ಗ್ಯಾಸ್, ಅಸಿಡಿಟಿಯಂತಹ ಸಮಸ್ಯೆಗಳು ಬರುವುದಿಲ್ಲ. ಏಲಕ್ಕಿ ತಿನ್ನುವುದರಿಂದ ಹೊಟ್ಟೆಯಲ್ಲಿರುವ ಕಿಣ್ವಗಳು ಕ್ರಿಯಾಶೀಲವಾಗುತ್ತವೆ ಮತ್ತು ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳುತ್ತವೆ.
ಬಾಯಿ ದುರ್ವಾಸನೆ ಹೋಗಲಾಡಿಸುತ್ತದೆ : ಏಲಕ್ಕಿಯನ್ನು ಜಗಿಯುವುದರಿಂದ ಬಾಯಿಯ ದುರ್ವಾಸನೆ ದೂರವಾಗುತ್ತದೆ. ಬಾಯಿಯ ದುರ್ವಾಸನೆಯ ಸಮಸ್ಯೆ ಇರುವವರು ಏಲಕ್ಕಿಯನ್ನು ಜಗಿಯಬೇಕು. ಏಕೆಂದರೆ ಇದು ಬಾಯಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ.
ಹೃದಯವನ್ನು ಆರೋಗ್ಯವಾಗಿರಿಸುತ್ತದೆ : ಏಲಕ್ಕಿಯನ್ನು ತಿನ್ನುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಇದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಕೆಲವು ಸಂಶೋಧನೆಗಳು ಬಹಿರಂಗಪಡಿಸಿವೆ. ಇದರಿಂದಾಗಿ ಹೃದಯವು ಆರೋಗ್ಯಕರವಾಗಿರುತ್ತದೆ.
ಮೂಡ್ ಫ್ರೆಶ್ ಮಾಡುತ್ತದೆ : ಏಲಕ್ಕಿ ತಿನ್ನುವುದರಿಂದ ಒತ್ತಡ ನಿವಾರಣೆಯಾಗುತ್ತದೆ. ಏಲಕ್ಕಿಯ ಸುವಾಸನೆಯು ಮಾನಸಿಕ ವಿಶ್ರಾಂತಿಯನ್ನು ನೀಡಿ, ಒತ್ತಡವನ್ನು ನಿವಾರಿಸುತ್ತದೆ. ಏಲಕ್ಕಿ ತಿನ್ನುವುದರಿಂದ ಮನಸ್ಥಿತಿ ಸುಧಾರಿಸುತ್ತದೆ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.
ಕೊಲೆಸ್ಟ್ರಾಲ್ ಕೂಡ ಕಡಿಮೆಯಾಗುತ್ತದೆ : ಏಲಕ್ಕಿ ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆಯಾಗುತ್ತದೆ. ಏಲಕ್ಕಿ ತಿನ್ನುವುದರಿಂದ ಅಸಿಡಿಟಿ, ಹೊಟ್ಟೆ ಉರಿ, ಗ್ಯಾಸ್ ನಂತಹ ಸಮಸ್ಯೆಗಳು ಬರುವುದಿಲ್ಲ. ನೀವು ಪ್ರತಿದಿನ ಒಂದು ಅಥವಾ ಎರಡು ಹಸಿ ಏಲಕ್ಕಿಯನ್ನು ಜಗಿಯುತ್ತಿದ್ದರೆ, ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕೂಡ ಕಡಿಮೆಯಾಗಲು ಪ್ರಾರಂಭಿಸುತ್ತದೆ.
Source : https://zeenews.india.com/kannada/health/eating-elaichi-after-meal-health-benefits-in-kannada-147393