ಮೊಸರಿನಲ್ಲಿ ಈ ಒಂದು ಸಂಗತಿಯನ್ನು ಬೆರೆಸಿ ತಿನ್ನಿ, ಚಮತ್ಕಾರ ನೋಡಿ!

Health Care Tips: ಬೆಲ್ಲ ಮತ್ತು ಮೊಸರು ಎರಡೂ ಪೋಷಕಾಂಶಗಳ ಆಗರವಾಗಿವೆ. ಇವೆರಡು ಜಂಟಿಯಾಗಿ ಆರೋಗ್ಯಕ್ಕೆ ಹಲವು ಲಾಭಗಳನ್ನು ನೀಡುತ್ತದೆ. ಬೆಲ್ಲದ ಗುಣಧರ್ಮ ಬಿಸಿಯಾಗಿರುತ್ತದೆ

Health Care Tips: ಬೆಲ್ಲ ಮತ್ತು ಮೊಸರು ಎರಡೂ ಪೋಷಕಾಂಶಗಳ ಆಗರವಾಗಿವೆ. ಇವೆರಡು ಜಂಟಿಯಾಗಿ ಆರೋಗ್ಯಕ್ಕೆ ಹಲವು ಲಾಭಗಳನ್ನು ನೀಡುತ್ತದೆ. ಬೆಲ್ಲದ ಗುಣಧರ್ಮ ಬಿಸಿಯಾಗಿರುತ್ತದೆ. ಆದರೆ ಮೊಸರಿನ ಗುಣಧರ್ಮ ತಂಪಾಗಿರುತ್ತದೆ. ಇವೆರಡನ್ನು ಒಟ್ಟಿಗೆ ತಿನ್ನುವುದು ತುಂಬಾ ಪ್ರಯೋಜನಕಾರಿಯಾಗಿದೆ. ಮೊಸರು ಮತ್ತು ಬೆಲ್ಲವನ್ನು ಒಟ್ಟಿಗೆ ತಿನ್ನುವುದು ಅನೇಕ ರೋಗಗಳ ಅಪಾಯವನ್ನು ತಗ್ಗಿಸುತ್ತದೆ. ಆಶ್ಚರ್ಯಕರ ಸಂಗತಿ ಎಂದರೆ, ಬೆಲ್ಲ ಮತ್ತು ಮೊಸರು ಚಳಿಗಾಲ ಮತ್ತು ಬೇಸಿಗೆಯಲ್ಲಿ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತವೆ. ಬೆಲ್ಲ ಮತ್ತು ಮೊಸರನ್ನು ಒಟ್ಟಿಗೆ ತಿನ್ನುವುದರಿಂದ ಆಗುವ ಲಾಭಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, 

1. ಬೆಲ್ಲ ಮತ್ತು ಮೊಸರನ್ನು ಒಟ್ಟಿಗೆ ತಿನ್ನುವುದರಿಂದ ರಕ್ತಹೀನತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಬೆಲ್ಲದಲ್ಲಿ ಸಾಕಷ್ಟು ಕಬ್ಬಿಣದ ಅಂಶವಿದೆ. ಇದು ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಇದನ್ನು ತಿನ್ನುವುದರಿಂದ ದೇಹದಲ್ಲಿ ರಕ್ತದ ಕೊರತೆಯಾಗುವುದಿಲ್ಲ.

2. ಬೆಲ್ಲದಲ್ಲಿ ಪೊಟ್ಯಾಸಿಯಮ್ ಮತ್ತು ಸೋಡಿಯಂ ಉತ್ತಮ ಪ್ರಮಾಣದಲ್ಲಿರುತ್ತದೆ, ಇವು ರಕ್ತದೊತ್ತಡವನ್ನು ನಿಯಂತರಿಸಲು ಸಹಾಯ ಮಾಡುತ್ತವೆ. ಬೆಲ್ಲ ಮತ್ತು ಮೊಸರು ತಿಂದರೆ ಅಧಿಕ ರಕ್ತದೊತ್ತಡ ಸಮಸ್ಯೆ ಉಂಟಾಗುವುದಿಲ್ಲ.

3. ಬೆಲ್ಲ ಮತ್ತು ಮೊಸರನ್ನು ಒಟ್ಟಿಗೆ ತಿನ್ನುವುದು ಹೊಟ್ಟೆಯ ಸ್ನಾಯುಗಳ ಸೆಳೆತವನ್ನು ಕೊನೆಗೊಳಿಸುತ್ತದೆ. ಇವುಗಳನ್ನು ತಿನ್ನುವುದರಿಂದ ಪಿರಿಯಡ್ಸ್ ಸಮಯದಲ್ಲಿ ಉಂಟಾಗುವ ಹೊಟ್ಟೆ ನೋವು ದೂರವಾಗುತ್ತದೆ. ಬೆಲ್ಲ ಮತ್ತು ಮೊಸರು ಅವಧಿಗಳನ್ನು ಕ್ರಮಬದ್ಧಗೊಳಿಸಲು ಸಹಾಯ ಮಾಡುತ್ತದೆ.

4. ಬೆಲ್ಲ ಮತ್ತು ಮೊಸರು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತವೆ. ಬೆಲ್ಲ ಮತ್ತು ಮೊಸರನ್ನು ಒಟ್ಟಿಗೆ ತಿನ್ನುವುದರಿಂದ ಶೀತ ಮತ್ತು ಜ್ವರದ ಸಮಸ್ಯೆ ದೂರವಾಗುತ್ತವೆ. ನೆಗಡಿ ಮತ್ತು ಕೆಮ್ಮಿನ ಸಮಸ್ಯೆ ಇದ್ದಾಗ, ಇವೆರಡನ್ನೂ ತಿನ್ನುವುದು ಪ್ರಯೋಜನಕಾರಿಯಾಗಿದೆ.

5. ಮೊಸರು ಮತ್ತು ಬೆಲ್ಲವು ಹೊಟ್ಟೆ ನೋವನ್ನು ನಿವಾರಿಸಲು ಕೆಲಸ ಮಾಡುತ್ತವೆ. ಬೆಲ್ಲದಲ್ಲಿರುವ ಪೊಟ್ಯಾಸಿಯಮ್ ಸ್ನಾಯು ಸೆಳೆತವನ್ನು ಸಹಾಯ ಮಾಡುತ್ತವೆ. ಇವೆರಡನ್ನು ಒಟ್ಟಿಗೆ ತಿನ್ನುವುದರಿಂದ ಜೀರ್ಣಕ್ರಿಯೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ. 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

Source : https://zeenews.india.com/kannada/health/eat-this-one-thing-along-with-jaggery-and-see-miracle-147796

Leave a Reply

Your email address will not be published. Required fields are marked *