ಜಲವಿವಾದಕ್ಕೆ ಜಂಟಿ ಪರಿಹಾರ: ಅಮಿತ್ ಶಾ ಸಲಹೆ

ತಿರುವನಂತಪುರ: ನೀರು ಹಂಚಿಕೆ ವಿವಾದ ಇತ್ಯರ್ಥ ಪಡಿಸಿಕೊಳ್ಳಲು ದಕ್ಷಿಣದ ರಾಜ್ಯಗಳು ಜಂಟಿಯಾಗಿ ಪರಿಹಾರ ಕಂಡುಕೊಳ್ಳಲು ಹೊಸ ಮಾರ್ಗ ಅನ್ವೇಷಿಸಬೇಕು ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಕರೆ ನೀಡಿದ್ದಾರೆ. ಕೇರಳದ ತಿರುವನಂತಪುರದ ಕೋಲವಂನಲ್ಲಿ ಆಯೋಜಿಸಿದ್ದ 30ನೇ ದಕ್ಷಿಣ ವಲಯ ‘ಕೌನ್ಸಿಲ್ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ “ಕೇಂದ್ರ ಹಾಗೂ ರಾಜ್ಯಗಳ ನಡುವಿನ ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು. ಅಂತ ರಾಜ್ಯ ವಿವಾದಗಳನ್ನು ಕೂಡ ಪ್ರಾದೇಶಿಕ ಸಹಕಾರ ಬೆಸೆಯುವ ಪರಸ್ಪರ ಒಪ್ಪಂದದ ಮೂಲಕವೇ ಇತ್ಯರ್ಥ ಪಡಿಸಿಕೊಳ್ಳಬೇಕು.” ಎಂದು ಸಲಹೆ ಮಾಡಿದರು. 7500 ಕಿಲೋಮೀಟರ್ ಉದ್ದವಿರುವ ದೇಶದ ಕರಾವಳಿ ಭಾಗದಲ್ಲಿ 4,800 ಕಿ ಮೀ ದಕ್ಷಿಣ ವಲಯದಲ್ಲಿದೆ. ಸುಮಾರು 12 ಬಂದರುಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ.1763 ಮೀನುಗಾರಿಕಾ ಗ್ರಾಮಗಳನ್ನು ಹೊಂದಿರುವ ದಕ್ಷಿಣ ವಲಯ ಸಾಗರ ಉತ್ಪನ್ನಗಳ ವ್ಯಾಪಾರ ಮತ್ತು ರಫ್ತು ಹೆಚ್ಚು ಮಾಡುವ ಬಹುದೊಡ್ಡ ಸಾಮರ್ಥ್ಯ ಹೊಂದಿವೆ ಎಂದು ಅಮಿತ್ ಶಾ ಹೇಳಿದರು.

Leave a Reply

Your email address will not be published. Required fields are marked *