
ಸಂಬಂಧದ ವಿಚಾರಕ್ಕೆ ಹೆಚ್ಚು ಸುದ್ದಿಯಾದವರು ಇದೀಗ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ. ಕನ್ನಡದ ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಮದುವೆಯಾಗುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ತಮ್ಮ ಸೋಷಿಯಲ್ ಮೀಡಿಯಾದಲ್ಲಿ ನರೇಶ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ನರೇಶ್ ಹಾಗೂ ಪವಿತ್ರಾ ಕೇಕ್ ಕಟ್ ಮಾಡಿ. ಒಬ್ಬರಿಗೊಬ್ಬರು ತಿನ್ನಿಸಿದ್ದಾರೆ. ಬಳಿಕ ಲಿಪ್ ಕಿಸ್ ಮಾಡಿ, ಹೊಸ ವರ್ಷದ ಶುಭಾಶಯ ತಿಳಿಸಿ, ಇಬ್ಬರು ಶೀಘ್ರವೇ ಮದುವೆಯಾಗುತ್ತಿದ್ದೀವಿ ಎಂಬುದನ್ನು ಅನೌನ್ಸ್ ಮಾಡಿದ್ದಾರೆ.
ನರೇಶ್ ಹಾಗೂ ಪವಿತ್ರಾ ಲೋಕೇಶ್ ಈಗಾಗಲೇ ಮದುವೆಯಾಗಿದ್ದಾರೆ ಎಂಬ ಸುದ್ದಿ ಜೋರಾಗಿ ಹಬ್ಬಿತ್ತು. ಬಳಿಕ ನರೇಶ್ ಅವರ ಹೆಂಡತಿ ಮಧ್ಯ ಪ್ರವೇಶಿಸಿ ಜಗಳ ಮಾಡಿದ್ದರು, ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇಬ್ಬರು ಮೈಸೂರಿನ ಖಾಸಗಿ ಹೊಟೇಲ್ ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಇದೀಗ ಇಬ್ಬರು ಅಧಿಕೃತವಾಗಿ ತಾವಿಬ್ಬರು ಮದುವೆಯಾಗುತ್ತಿರುವುದಾಗಿ ಅನೌನ್ಸ್ ಮಾಡಿಕೊಂಡಿದ್ದಾರೆ.
New Year
New Beginnings
Need all your blessingsFrom us to all of you #HappyNewYear
– Mee #PavitraNaresh pic.twitter.com/JiEbWY4qTQ
— H.E Dr Naresh VK actor (@ItsActorNaresh) December 31, 2022
The post ಮದುವೆಯಾಗುತ್ತಿರುವ ಸುದ್ದಿ ಹಂಚಿಕೊಂಡ ಪವಿತ್ರಾ ಲೋಕೇಶ್ ಅಂಡ್ ನರೇಶ್..! first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/oAybESX
via IFTTT



