ಎಚ್ಚರ! ವೇಗವಾಗಿ ಹೆಚ್ಚುತ್ತಿದೆ ಐ ಫ್ಲೂ ಅಪಾಯ, ಮಕ್ಕಳನ್ನು ಈ ರೀತಿ ರಕ್ಷಿಸಿ!

ಐ ಫ್ಲೂ ಅನ್ನು ಕಂಜಕ್ಟಿವಾಯಿಟಿಸ್ ಅಥವಾ ಪಿಂಕ್ ಐ ಹೆಸರಿಂದಿಂದಲೂ ಕೂಡ (Healht News In Kannada) ಗುರುತಿಸಲಾಗುತ್ತದೆ. 

ಬೆಂಗಳೂರು: ಮಳೆಗಾಲವು ನಿಸ್ಸಂದೇಹವಾಗಿ ನಮಗೆ ಪರಿಹಾರವನ್ನು ನೀಡುತ್ತದೆ, ಆದರೆ ಅದು ತನ್ನೊಂದಿಗೆ ಹಲವು ಕಾಯಿಲೆಗಳನ್ನು ಕೂಡ ತರುತ್ತದೆ. ಇತ್ತೀಚಿನ ದಿನಗಳಲ್ಲಿ ಜನರು ಪ್ರವಾಹದ ನಂತರ ಹೊಸ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಪ್ರವಾಹದ ನಂತರ, ಜನರು ಕಣ್ಣಿನ ಕಾಯಿಲೆಯನ್ನು ಎದುರಿಸುತ್ತಿದ್ದಾರೆ. ಐ ಫ್ಲೂ ಎಂದರೆ ಕಣ್ಣಿನ ಕಾಯಿಲೆ (Health News In Kannada), ಮಕ್ಕಳೂ ಸಹ ಈ ಕಾಯಿಲೆಗೆ ಅಸ್ಪ್ರಷ್ಯರಾಗಿ ಉಳಿದಿಲ್ಲ. ಹೀಗಾಗಿ  ಮಕ್ಕಳನ್ನು ಇದರಿಂದ ರಕ್ಷಿಸಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ತುಂಬಾ ಮುಖ್ಯ.
ಐ ಫ್ಲೂ ಎಂದರೇನು?
ಕಣ್ಣಿನ ಜ್ವರವನ್ನು ಕಂಜಂಕ್ಟಿವಿಟಿಸ್ ಅಥವಾ ಗುಲಾಬಿ ಕಣ್ಣು ಎಂದೂ ಕರೆಯುತ್ತಾರೆ. ಶೀತ ಕೆಮ್ಮು ವೈರಸ್ನಿಂದ ಅದರ ಪ್ರಕರಣಗಳೂ ಕೂಡ ಹೆಚ್ಚಾಗುತ್ತಿವೆ. ಈ ಸೋಂಕು ಕಣ್ಣಿನ ಬಿಳಿ ಭಾಗದಲ್ಲಿ ಕಂಡುಬರುತ್ತದೆ, ವಿಶೇಷವಾಗಿ ಇದು ಮಳೆಗಾಲದಲ್ಲಿ ವೇಗವಾಗಿ ಹರಡುತ್ತದೆ. ಈ ಕಾರಣದಿಂದಾಗಿ, ಮಕ್ಕಳ ಕಣ್ಣುಗಳಲ್ಲಿ ಸೋಂಕಿನ ಸಮಸ್ಯೆ ಉಂಟಾಗುತ್ತದೆ, ಇದರಿಂದಾಗಿ ಕಣ್ಣುಗಳಲ್ಲಿ ಕೆಂಪು, ಊತ ಮತ್ತು ತೀವ್ರವಾದ ನೋವು ಕೂಡ ಹೆಚ್ಚಾಗುತ್ತದೆ. ವೈದ್ಯರ ಪ್ರಕಾರ, ಇದು ತುಂಬಾ ಗಂಭೀರವಾಗಿಲ್ಲ, ಆದರೆ ಈ ಸಮಯದಲ್ಲಿ ಕಣ್ಣುಗಳ ಶುಚಿತ್ವದ ಬಗ್ಗೆ ವಿಶೇಷ ಕಾಳಜಿ ವಹಿಸುವ ಅವಶ್ಯಕತೆಯಿದೆ.

ಕಣ್ಣಿನ ಜ್ವರದಿಂದ ಮಕ್ಕಳನ್ನು ಹೇಗೆ ರಕ್ಷಿಸುವುದು

ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ
ಕಣ್ಣಿನ ಜ್ವರದಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಇಂತಹ  ಪರಿಸ್ಥಿತಿಯಲ್ಲಿ, ಮಕ್ಕಳು ಎಲ್ಲಿಂದ ಬಂದರೂ, ಅವರಿಗೆ ತಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಲು ಸಲಹೆ ನೀಡಿ. ಅವರು ಯಾವುದೇ ಕೊಳೆಯಾದ ವಸ್ತುಗಳನ್ನು ಮುಟ್ಟಿದರೆ, ಹೊರಗೆ ಆಟವಾಡಿದ ನಂತರ ಮನೆಗೆ ಬಂದಾಗ ಅಥವಾ ಶಾಲೆಯಿಂದ ಮನೆಗೆ ಹಿಂತಿರುಗಿದಾಗ, ಅವರ ಕೈಗಳನ್ನು ತೊಳೆಯಲು ಮರೆಯಬೇಡಿ. ಇದರೊಂದಿಗೆ, ಕಾಲಕಾಲಕ್ಕೆ ಅವರ ಕೈಗಳನ್ನು ಸ್ಯಾನಿಟೈಸ್ ಮಾಡಲು ಹೇಳಿ.

ಕಣ್ಣುಗಳನ್ನು ಸ್ಪರ್ಶಿಸಲು ಬಿಡಬೇಡಿ
ಕಣ್ಣಿನ ಜ್ವರದಿಂದ ಮಕ್ಕಳನ್ನು ರಕ್ಷಿಸಲು, ಅವರ ಕಣ್ಣುಗಳನ್ನು ಅವರು ಪದೇ ಪದೇ ಸ್ಪರ್ಶಿಸುವುದನ್ನು ತಡೆಯಿರಿ. ಅವರು ಶಾಲೆಯಿಂದ ಬಂದಾಗ  ಮತ್ತು ಕೈ ತೊಳೆಯದೆ ಕಣ್ಣುಗಳನ್ನು ಮುಟ್ಟಿದರೆ ಅದು ಹಾನಿಕಾರಕವಾಗಿದೆ. ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳು ಸುಲಭವಾಗಿ ಕೈಗಳ ಸಂಪರ್ಕಕ್ಕೆ ಬರುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಕೊಳೆಯಾದ ಕೈಗಳಿಂದ  ಕಣ್ಣುಗಳನ್ನು ಸ್ಪರ್ಶಿಸುವ ಮೂಲಕ ಮಗು ಸೋಂಕಿಗೆ ಒಳಗಾಗಬಹುದು.

ಸಮತೋಲಿತ ಆಹಾರವನ್ನು ನೀಡಿ
ಕಣ್ಣಿನ ಜ್ವರದ ಸಮಯದಲ್ಲಿ ಮಗುವಿನ ಆಹಾರದ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕು. ಮಗುವಿಗೆ ಸಮತೋಲಿತ ಆಹಾರವನ್ನು ನೀಡಿ. ಆಹಾರದಲ್ಲಿ ಹಸಿರು ತರಕಾರಿಗಳು, ಕಿತ್ತಳೆಯಂತಹ ಆರೋಗ್ಯಕರ ಆಹಾರವನ್ನು ಶಾಮೀಲುಗೊಳಿಸಿ.

ಸೋಂಕಿತ ವ್ಯಕ್ತಿಯಿಂದ ದೂರವಿರಿ
ನಿಮ್ಮ ಮನೆಯಲ್ಲಿ ಯಾರಿಗಾದರೂ ಕಣ್ಣಿನ ಜ್ವರ ಬಂದಿದ್ದರೆ, ಮಗುವನ್ನು ಸೋಂಕಿತ ವ್ಯಕ್ತಿಯಿಂದ ದೂರವಿರಿಸಲು ಪ್ರಯತ್ನಿಸಿ. ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದರೆ ಮಗುವಿಗೆ ಹಾನಿಯಾಗಬಹುದು. ಇದರೊಂದಿಗೆ, ಸೋಂಕಿತ ವ್ಯಕ್ತಿಯ ವಸ್ತುಗಳನ್ನು ಮುಟ್ಟದಂತೆ ಮಗುವಿಗೆ ತಿಳಿ ಹೇಳಿ.

ಒಳಾಂಗಣ ಆಟವನ್ನು ಆಡಲು ಶಿಫಾರಸು ಮಾಡಿ
ಈ ಸಮಯದಲ್ಲಿ ಫ್ಲೂ ತೀವ್ರತೆ ಹೆಚ್ಚಾಗಿರುವ ಕಾರಣ ಮಗುವಿಗೆ ಒಳಾಂಗಣ ಆಟಗಳನ್ನು ಆಡಲು ಸಲಹೆ ನೀಡಿ. ಆಟವಾಡಲು ಹೊರಗೆ ಹೋಗದಂತೆ ತಡೆಯಿರಿ. ಸಾರ್ವಜನಿಕ ಈಜುಕೊಳಗಳಿಗೆ ಮಕ್ಕಳನ್ನು ಹೋಗಲು ಬಿಡಬೇಡಿ. ಏಕೆಂದರೆ ಅದರಿಂದ ಸೋಂಕು ಹರಡುವ ಅಪಾಯ ಹೆಚ್ಚಾಗಿರುತ್ತದೆ.

Source : https://zeenews.india.com/kannada/health/alert-eye-flu-is-spreading-fast-protect-your-child-like-this-149291

Leave a Reply

Your email address will not be published. Required fields are marked *