ಜರ್ಮನಿಯಲ್ಲಿ ನಡೆದ 8ನೇ ವಿಶ್ವ ಕುಬ್ಜರ ಕ್ರೀಡಾಕೂಡದಲ್ಲಿ ಬೆಳಗಾವಿ ಜಿಲ್ಲೆಯ ಕುವರಿ ಸಾಧನೆ

World Dwarf Games: ಜರ್ಮನಿಯಲ್ಲಿ ನಡೆದ 8ನೇ ವಿಶ್ವ ಕುಬ್ಜರ ಕ್ರೀಡಾಕೂಡದಲ್ಲಿ ಮೂರು ಪದಕ ಪಡೆದು ಬೆಳಗಾವಿ ಯುವರಿ ಸಾಧನೆಗೈದಿದ್ದಾರೆ.

ಜರ್ಮನಿಯಲ್ಲಿ ನಡೆದ 8ನೇ ವಿಶ್ವ ಕುಬ್ಜರ ಕ್ರೀಡಾಕೂಡದಲ್ಲಿ ಬೆಳಗಾವಿ ಜಿಲ್ಲೆಯ ಕುವರಿ ಮೂರು ಪದಕಗಳನ್ನು ಗೆಲ್ಲುವ ಮೂಲಕ ಸಾಧನೆ ಮಾಡಿದ್ದಾರೆ. 

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮದ ಕುಬ್ಜ ಕುವರಿ ಮಂಜುಳಾ ಗೊರಗೊದ್ದಿ ಈ ಸಾಧನೆ ಮಾಡಿರುವ ಕುವರಿ. 

ಕುಬ್ಜ ಕುವರಿ ಮಂಜುಳಾ ಗುಂಡು ಎಸೆತದಲ್ಲಿ ಪ್ರಥಮ, ಚಕ್ರ ಎಸೆತದಲ್ಲಿ ಎರಡನೇ ಸ್ಥಾನ, ಜಾವೆಲಿನ್ ಥ್ರೋ ದಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. 

2.5 ಲಕ್ಷ ರೂ.  ಬಡ್ಡಿಗೆ ಸಾಲ ಪಡೆದು ಜರ್ಮನಿಗೆ ಹೋಗಿ ಕುಬ್ಜ ಕುವರಿ ಮಂಜುಳಾ ಈ  ಸಾಧನೆ ಮಾಡಿದ್ದಾರೆ. 

2023ರಲ್ಲಿ ಜುಲೈ 28ರಿಂದ ಆರಂಭವಾಗಿರುವ ಈ ಕುಬ್ಜರ ಕ್ರೀಡಾಕೂಡದಲ್ಲಿ ಮೂರು ಪದಕ ತಂದು ಕುಬ್ಜ ಕುವರಿ ಮಂಜುಳಾ ದೇಶಕ್ಕೆ, ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಹೆಸರು ಕೀರ್ತಿಯನ್ನು ತಂದಿದ್ದಾರೆ. ಮಾತ್ರವಲ್ಲ, ತಮ್ಮ ಸಾಧನೆ ಮೂಲಕ ಇತರರಿಗೂ ಮಾದರಿ ಆಗಿದ್ದಾರೆ.

Source :  https://zeenews.india.com/kannada/photo-gallery/belagavi-girl-won-three-medals-in-8th-world-dwarf-games-held-in-germany-150297/%E0%B2%9C%E0%B3%81%E0%B2%B2%E0%B3%88-28%E0%B2%B0%E0%B2%BF%E0%B2%82%E0%B2%A6-%E0%B2%86%E0%B2%B0%E0%B2%82%E0%B2%AD%E0%B2%B5%E0%B2%BE%E0%B2%97%E0%B2%BF%E0%B2%B0%E0%B3%81%E0%B2%B5-%E0%B2%95%E0%B3%8D%E0%B2%B0%E0%B3%80%E0%B2%A1%E0%B2%BE%E0%B2%95%E0%B3%82%E0%B2%9F-150298

  

Leave a Reply

Your email address will not be published. Required fields are marked *