Kidney Health: ಕಿಡ್ನಿ ನಮ್ಮ ದೇಹದ ಮಹತ್ವಪೂರ್ಣ ಅಂಗಗಳಲ್ಲಿ ಒಂದಾಗಿದೆ. ಹೀಗಾಗಿ ಈ ಲೇಖನದಲ್ಲಿ ನಾವು ಮೂತ್ರಪಿಂಡಗಳಿಂದ ವಿಷಕಾರಿ ಪದಾರ್ಥಗಳನ್ನು ಹೇಗೆ ಹೊರಹಾಕಬೇಕು ಎಂಬುದನ್ನು ಹೇಳಿಕೊಡಲಿದ್ದೇವೆ (Lifestyle News In Kannada).

ಬೆಂಗಳೂರು: ಮೂತ್ರಪಿಂಡಗಳು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗ್ವೆ, ಕಿಡ್ನಿ ನಮಗೆ ನಮ್ಮ ದೇಹದ ಅನೇಕ ಕಾರ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ.ಆದ್ದರಿಂದ ಮೂತ್ರಪಿಂಡವನ್ನು ಆರೋಗ್ಯಕರವಾಗಿಡುವುದು ತುಂಬಾ ಮಹತ್ವದ್ದಾಗಿದೆ. ಮತ್ತೊಂದೆಡೆ, ಆರೋಗ್ಯಕರ ಆಹಾರ ಮತ್ತು ಸಾಕಷ್ಟು ನೀರು ಕುಡಿಯುವ ಮೂಲಕ ಮೂತ್ರಪಿಂಡವನ್ನು ಆರೋಗ್ಯಕರವಾಗಿರಿಸಿಕೊಳ್ಳಬಹುದು (Lifestyle News In Kannada). ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಕಿಡ್ನಿ ಹಾಳಾಗುವ ಅಪಾಯ ಕಡಿಮೆಯಾಗುತ್ತದೆ. ಇನ್ನೊಂದೆಡೆ ಕಿಡ್ನಿಯನ್ನು ಆರೋಗ್ಯಕರವಾಗಿರಿಸಿಕೊಳ್ಳಲು ಕಿಡ್ನಿಯನ್ನು ಡಿಟಾಕ್ಸ್ ಮಾಡುವುದು ಕೂಡ ಮಹತ್ವದ್ದಾಗಿದೆ. ಇದಕ್ಕಾಗಿ ನಿಮ್ಮ ಆಹಾರದಲ್ಲಿ ನೀವು ಕೆಲವು ಪಾನೀಯಗಳನ್ನು ಶಾಮೀಲುಗೊಳಿಸಬೇಕು . ನಿಮ್ಮ ಕಿಡ್ನಿಯನ್ನು ನೀವು ಹೇಗೆ ಡಿಟಾಕ್ಸ್ ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ಕಿಡ್ನಿ ಡಿಟಾಕ್ಸ್ ಪಾನೀಯಗಳು
ಸೇಬು-ವಿನೆಗರ್ ನಿಂದ ತಯಾರಿಸಿದ ಪಾನೀಯ
ಆಪಲ್ ಸೈಡರ್ ವಿನೆಗರ್‌ನಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಮತ್ತು ಸಿಡ್ರಿಕ್ ಆಮ್ಲವು ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಲು ಮತ್ತು ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದನ್ನು ಬಳಸಿ ಡಿಟಾಕ್ಸ್ ಪಾನೀಯವನ್ನು ತಯಾರಿಸಬಹುದು, ಇದಕ್ಕಾಗಿ ನೀವು ಒಂದು ಲೋಟ ಉಗುರುಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಸೇರಿಸಿ. ಮತ್ತು ಇದನ್ನು ಪ್ರತಿದಿನ ಸೇವಿಸಿ, ಹೀಗೆ ಮಾಡುವುದರಿಂದ ನಿಮ್ಮ ಮೂತ್ರಪಿಂಡವು ನಿರ್ವಿಶಗೊಳ್ಳಲು ಆರಂಭಗೊಳ್ಳುತ್ತದೆ.
ದಾಳಿಂಬೆ ಜ್ಯೂಸ್
ದಾಳಿಂಬೆಯು ಪೊಟ್ಯಾಸಿಯಮ್‌ನ ಉತ್ತಮ ಮೂಲವಾಗಿದೆ ಮತ್ತು ಇದು ಮೂತ್ರಪಿಂಡದಲ್ಲಿನ ಕಲ್ಲುಗಳ ಸಮಸ್ಯೆಯನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ. ಅಷ್ಟೇ ಅಲ್ಲ, ಇದರಲ್ಲಿರುವ ಗುಣಗಳು ಕಲ್ಲುಗಳ ಸಂರಚನೆಯನ್ನು ತಡೆಯುತ್ತದೆ. ಇದನ್ನು ಸೇವಿಸಲು, ನೀವು ಪ್ರತಿದಿನ ತಾಜಾ ದಾಳಿಂಬೆ ಜ್ಯೂಸ್ ಅನ್ನು ಸೇವಿಸಬಹುದು.
ಬೀಟ್ರೂಟ್ ಜ್ಯೂಸ್
ಬೀಟ್ ರಸದಲ್ಲಿ ಬೀಟೈನ್ ಎಂಬ ರಾಸಾಯನಿಕ ಇರುತ್ತದೆ, ಇದು ತುಂಬಾ ಪ್ರಯೋಜನಕಾರ ಮತ್ತು ಫೈಟೊಕೆಮಿಕಲ್ ಆಗಿರುತ್ತದೆ. ಇದು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ, ಇಂತಹ ಪರಿಸ್ಥಿತಿಯಲ್ಲಿ, ನೀವು ಪ್ರತಿದಿನ ಬೀಟ್ ಜ್ಯೂಸ್ ಅನ್ನು ಸೇವಿಸಿದರೆ, ನಂತರ ಮೂತ್ರಪಿಂಡಗಳನ್ನು ನಿರ್ವಿಷಗೊಳಿಸುವುದರ ಜೊತೆಗೆ, ಮೂತ್ರಪಿಂಡ ಕಲ್ಲುಗಳ ಅಪಾಯ ಕೂಡ ದೂರಾಗುತ್ತದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)