ಖರ್ಜೂರ ಸೇವಿಸುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳಿವೆ. ಅದರಲ್ಲೂ ಪ್ರತಿ ದಿನ ಖರ್ಜೂರ ತಿನ್ನುವುದು ಆರೋಗ್ಯಕ್ಕೆ ವರದಾನವಿದ್ದಂತೆ ಎಂದು ಹೇಳಲಾಗುತ್ತದೆ.

ಪೋಷಕಾಂಶಗಳ ಗಣಿ ಖರ್ಜೂರದಲ್ಲಿ ಪ್ರೊಟೀನ್ ಕೂಡ ಸಮೃದ್ಧವಾಗಿದೆ. ಹಾಗಾಗಿಯೇ ಇದನ್ನು ಆರೋಗ್ಯಕ್ಕೆ ವರದಾನಕ್ಕಿಂತ ಕಡಿಮೆ ಇಲ್ಲ ಎಂದು ಹೇಳಲಾಗುತ್ತದೆ. ಪ್ರತಿ ದಿನ ಖರ್ಜೂರ ಸೇವನೆಯಿಂದ ಆರೋಗ್ಯಕ್ಕೆ ಸಿಗುವ ಐದು ಅದ್ಭುತ ಪ್ರಯೋಜನಗಳೆಂದರೆ…
ಆರೋಗ್ಯ ತಜ್ಞರ ಪ್ರಕಾರ, ಖರ್ಜೂರವನ್ನು ಪುರುಷರಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ನಿತ್ಯ ಖರ್ಜೂರ ಸೇವಿಸುವುದರಿಂದ ಪುರುಷರಲ್ಲಿ ವೀರ್ಯಾಣು ಸಂಖ್ಯೆ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.
ಪ್ರತಿ ದಿನ ಬಿಳಿಗೆ ಖಾಲಿ ಹೊಟ್ಟೆಯಲ್ಲಿ ಎರಡೇ ಎರಡು ಖರ್ಜೂರವನ್ನು ಸೇವಿಸುವುದರಿಂದ ಉದರ ಸಂಬಂಧಿ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ.
ನಿತ್ಯ ಖರ್ಜೂರ ಸೇವಿಸುವುದರಿಂದ ಕ್ಯಾನ್ಸರ್ ಅಪಾಯವನ್ನು ತಪ್ಪಿಸಬಹುದು ಎಂದು ಹೇಳಲಾಗುತ್ತದೆ.
ವಯಸ್ಸಾದಂತೆ ಮೂಳೆಗಳು ದುರ್ಬಲವಾಗುತ್ತವೆ. ಆದರೆ, ಪ್ರತಿ ದಿನ ಒಂದೆರಡು ಖರ್ಜೂರ ಸೇವಿಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ.
ಪ್ರತಿ ದಿನ ಒಂದೆರಡು ಖರ್ಜೂರ ಸೇವಿಸುವುದರಿಂದ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು SAMGRASUDDI ಖಚಿತಪಡಿಸುವುದಿಲ್ಲ.
Source : https://zeenews.india.com/kannada/photo-gallery/dates-are-good-for-health-151044/%E0%B2%96%E0%B2%B0%E0%B3%8D%E0%B2%9C%E0%B3%82%E0%B2%B0-%E0%B2%AA%E0%B3%81%E0%B2%B0%E0%B3%81%E0%B2%B7%E0%B2%B0%E0%B2%BF%E0%B2%97%E0%B3%86-%E0%B2%A4%E0%B3%81%E0%B2%82%E0%B2%AC%E0%B2%BE-%E0%B2%AA%E0%B3%8D%E0%B2%B0%E0%B2%AF%E0%B3%8B%E0%B2%9C%E0%B2%A8%E0%B2%95%E0%B2%BE%E0%B2%B0%E0%B2%BF-151049