ದೇಹದಲ್ಲಿ ಈ ವಿಟಮಿನ್ ಕೊರತೆಯಾದರೆ ದೃಷ್ಟಿ ಮತ್ತು ಹೃದಯದ ಮೇಲೆ ಆಗುವುದು ಪರಿಣಾಮ

ಬೆಂಗಳೂರು : ದೇಹದ ಉತ್ತಮ ಕಾರ್ಯನಿರ್ವಹಣೆಗೆ ವಿಟಮಿನ್ ಇ ಬಹಳ ಮುಖ್ಯವಾದ ಪೋಷಕಾಂಶಗಳಲ್ಲಿ ಒಂದಾಗಿದೆ. ದೇಹದಲ್ಲಿ ಇದರ ಕೊರತೆಯಾದರೆ ಅನೇಕ ರೀತಿಯ ಸೋಂಕುಗಳ ಅಪಾಯ ಕಂಡು ಬರುತ್ತದೆ. ಅಲ್ಲದೆ, ಇದು ಸ್ನಾಯು ದೌರ್ಬಲ್ಯಕ್ಕೆ ಕಾರಣವಾಗುತ್ತದೆ.  ದೇಹದಲ್ಲಿ ವಿಟಮಿನ್ ಇ ಕೊರತೆಯಿಂದ ಹೃದಯದ ಆರೋಗ್ಯ ಮತ್ತು ದೃಷ್ಟಿಯ ಮೇಲೂ ಪರಿಣಾಮ ಬೀರುತ್ತದೆ. 

ಒಂದು ಹಿಡಿ ಬಾದಾಮಿಯನ್ನು ಸೇವಿಸುವುದರಿಂದ ದೇಹದಲ್ಲಿ ವಿಟಮಿನ್ ಇ  ಕೊರತೆ ನೀಗಿಸಬಹುದು. ಬಾದಾಮಿಯನ್ನು ನೆನೆಸಿ ಅಥವಾ ಹುರಿದು ಸೇವಿಸಬಹುದು. ಇದಲ್ಲದೇ ಬಾದಾಮಿಯನ್ನು ಹಲವು ಖಾದ್ಯಗಳ ರೂಪದಲ್ಲಿಯೂ ಸೇವಿಸಬಹುದು. 

ಇದರಲ್ಲಿ ವಿಟಮಿನ್ ಇ ಮತ್ತು ಪ್ರೊಟೀನ್ ಸಮೃದ್ಧವಾಗಿದೆ. ಬ್ರೊಕೊಲಿಯು ಡಿಟಾಕ್ಸ್ ಆಹಾರಗಳಲ್ಲಿ ಒಂದಾಗಿದೆ. ಇದರ ಸಹಾಯದಿಂದ ಕ್ಯಾನ್ಸರ್ ಅಪಾಯವನ್ನು ಕೂಡಾ ಕಡಿಮೆ ಮಾಡಬಹುದು. ಇದಲ್ಲದೆ, ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.  ಬ್ರೊಕೊಲಿಯನ್ನು ಸೂಪ್ ಅಥವಾ ಇತರ ಯಾವುದೇ ರೀತಿಯ ಭಕ್ಷ್ಯದ ರೂಪದಲ್ಲಿ ಸೇವಿಸಬಹುದು

ಪಾಲಕ್ ಸೊಪ್ಪು ಸಹ ವಿಟಮಿನ್ ಗಳಲ್ಲಿ ಸಮೃದ್ಧವಾಗಿದೆ. ಇದು ವಿವಿಧ ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ಕಬ್ಬಿಣದಂತಹ ಅನೇಕ ಅಗತ್ಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಕೇವಲ ಅರ್ಧ ಕಪ್  ಪಾಲಕ್ ನಿಮ್ಮ ದೇಹಕ್ಕೆ 16% ವಿಟಮಿನ್ ಇ ಅನ್ನು ಒದಗಿಸುತ್ತದೆ. 

ಆವಕಾಡೊ ವಿಟಮಿನ್ ಇ ಸಮೃದ್ಧವಾಗಿರುವ ಆಹಾರವಾಗಿದೆ. ಇದಲ್ಲದೆ, ಇದು ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ದಿನವಿಡೀ ಕೇವಲ ಒಂದು ಆವಕಾಡೊವನ್ನು ಸೇವಿಸುವ ಮೂಲಕ, ನಿಮ್ಮ ದೇಹದಲ್ಲಿನ ವಿಟಮಿನ್ ಇ ಕೊರತೆಯನ್ನು  20% ಪೂರೈಸಬಹುದು.

ಸೂರ್ಯಕಾಂತಿ ಬೀಜಗಳು ವಿಟಮಿನ್ ಇ, ಫೈಬರ್, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಸತುವಿನಲ್ಲಿ ಸಮೃದ್ಧವಾಗಿವೆ. ಬೆಳಗಿನ ಉಪಾಹಾರಕ್ಕೆ ಇದು ಉತ್ತಮ ಆಯ್ಕೆಯಾಗಿದೆ. ಬೆರಳೆಣಿಕೆಯಷ್ಟು ಸೂರ್ಯಕಾಂತಿ ಬೀಜಗಳು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿ ವಿಟಮಿನ್ ಇ ಕೊರತೆಯನ್ನು ನೀಗಿಸಬಹುದು. ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. SAMAGRASUDDI ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

Source : https://zeenews.india.com/kannada/photo-gallery/vitamin-e-foof-for-healthy-heart-and-eyes-151412/sunflower-seed-151413

  

Leave a Reply

Your email address will not be published. Required fields are marked *