ನೀವು ಹಾಲು ಕುಡಿಯಲು ಇಷ್ಟಪಡುವುದಿಲ್ಲವೇ ಹಾಗಾದರೆ ಈ ಆಹಾರಗಳಿಂದ ದೇಹಕ್ಕೆ ಕ್ಯಾಲ್ಸಿಯಂ ಪಡೆಯಿರಿ

Calcium Foods : ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಮತ್ತು ಆರೋಗ್ಯಕರವಾಗಿರಲು ಅನೇಕ ಪೋಷಕಾಂಶಗಳು ಮತ್ತು ಖನಿಜಗಳ ಅಗತ್ಯವಿದೆ. ದೇಹದಲ್ಲಿ ಯಾವುದೇ ಪೌಷ್ಟಿಕಾಂಶದ ಅಂಶದ ಕೊರತೆಯಿದ್ದರೆ, ಆಗ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಅಂತಹ ಒಂದು ಖನಿಜವೆಂದರೆ ಕ್ಯಾಲ್ಸಿಯಂ.   

Calcium : ಇಡೀ ದೇಹದ ಭಾರವು ಮೂಳೆಯ ರಚನೆಯ ಮೇಲೆ ನಿಂತಿದೆ ಮತ್ತು ಕ್ಯಾಲ್ಸಿಯಂ ಮೂಳೆಗಳಿಗೆ ಜೀವ ತುಂಬುವ ಮತ್ತು ಬಲಶಾಲಿಯಾಗಿಸುವ ಕೆಲಸವನ್ನು ಮಾಡುತ್ತದೆ.  ವಯಸ್ಸಾದವರಿಗೆ ದಿನಕ್ಕೆ ಕನಿಷ್ಠ 1,000 ಮಿಲಿಗ್ರಾಂ ಕ್ಯಾಲ್ಸಿಯಂ ಬೇಕಾಗುತ್ತದೆ.

ಹಾಲಿನಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇದೆ. ಆದರೆ ಅನೇಕ ಜನರು ಹಾಲನ್ನು ಇಷ್ಟಪಡುವುದಿಲ್ಲ. ಆದ್ದರಿಂದ ಹಾಲನ್ನು ಹೊರತುಪಡಿಸಿ ಈ ಕೆಳಗಿನ ಆಹಾರಗಳು ನಿಮ್ಮ ದೇಹದಲ್ಲಿ ದೇಹದಲ್ಲಿ ಕ್ಯಾಲ್ಸಿಯಂ ಅನ್ನು ಪೂರೈಸಲು ಸಹಾಯ ಮಾಡುತ್ತದೆ. ಈ ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ…

ಹಸಿರು ತರಕಾರಿಗಳು
ತರಕಾರಿಗಳು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿವೆ. ಇದರಲ್ಲಿ ಕೊಲಾರ್ಡ್ ಗ್ರೀನ್ಸ್, ಪಾಲಕ ಮತ್ತು ಕೇಲ್ ಇನ್ನು ಹೆಚ್ಚಿನ ಪ್ರಯೋಜನ ನೀಡುತ್ತವೆ. 100 ಗ್ರಾಂ ಎಲೆಕೋಸಿನಲ್ಲಿ ಸುಮಾರು 250 ಮಿಗ್ರಾಂ ಕ್ಯಾಲ್ಸಿಯಂ ಇದೆ. 100 ಗ್ರಾಂ ಹಾಲಿನಲ್ಲಿ ಕೇವಲ 110 ಮಿಗ್ರಾಂ ಕ್ಯಾಲ್ಸಿಯಂ ಲಭ್ಯವಿರುತ್ತದೆ. ಹಾಗಾಗಿ ಹಸಿರು ತರಕಾರಿಗಳನ್ನು ಸೇವಿಸಿ .

ಮೊಸರು
ಮೊಸರು ಕ್ಯಾಲ್ಸಿಯಂನ ಅತ್ಯುತ್ತಮ ಮೂಲವಾಗಿದೆ. ಅಧ್ಯಯನದ ಪ್ರಕಾರ, ಮೊಸರು ಪ್ರೋಬಯಾಟಿಕ್‌ಗಳ ಉತ್ತಮ ಮೂಲವಾಗಿದೆ ಮತ್ತು ಪ್ರೋಬಯಾಟಿಕ್‌ಗಳು ರೋಗನಿರೋಧಕ ಕಾರ್ಯವನ್ನು ಹೆಚ್ಚಿಸುವುದರ ಜೊತೆಗೆ ಹೃದಯದ ಆರೋಗ್ಯವನ್ನು ಸುಧಾರಿಸುವ ಒಂದು ರೀತಿಯ ಉತ್ತಮ ಬ್ಯಾಕ್ಟೀರಿಯಾಗಳಾಗಿವೆ. 

ಅಲ್ಲದೇ ಇದು ಇತರ ಪೋಷಕಾಂಶಗಳನ್ನು ದೇಹದಲ್ಲಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಒಂದು ಕಪ್ ಮೊಸರನ್ನು ಸೇವಿಸುವುದರಿಂದ ನಿಮ್ಮ ನಿಯಮಿತ ಕ್ಯಾಲ್ಸಿಯಂ ಅಗತ್ಯವನ್ನು ಸುಮಾರು 25% ರಷ್ಟು ಪೂರೈಸಬಹುದು. 

ರಾಗಿ
ರಾಗಿಯಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. 100 ಗ್ರಾಂ ರಾಗಿಯಲ್ಲಿ 345 ಮಿಗ್ರಾಂ ಕ್ಯಾಲ್ಸಿಯಂ ಇದೆ. ನೀವು ವಾರಕ್ಕೆ ಕನಿಷ್ಠ 4 ಬಾರಿ ಯಾವುದೇ ರೂಪದಲ್ಲಿ ರಾಗಿಯನ್ನು ತಿನ್ನುವುದು ದೇಹಕ್ಕೆ ಪ್ರಯೋಜನ. 

ಸೋಯಾಬೀನ್
ಸೋಯಾಬೀನ್ ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಇದರ ಸರಿಯಾದ ಪ್ರಯೋಜನವನ್ನು ಪಡೆಯಲು, ಹುರಿದು ತಿನ್ನಿ. ಸಸ್ಯಾಹಾರಿ ಆಹಾರ ಸೇವಿಸುವವರಿಗೆ ದೇಹದಲ್ಲಿನ ಕ್ಯಾಲ್ಸಿಯಂ ಅಗತ್ಯವನ್ನು ಪೂರೈಸಲು ಸೋಯಾಬೀನ್ ಉತ್ತಮ ಆಯ್ಕೆಯಾಗಿದೆ.

Source : https://zeenews.india.com/kannada/lifestyle/if-you-dont-like-drinking-milk-then-get-calcium-from-these-foods-153677

Leave a Reply

Your email address will not be published. Required fields are marked *