ಚಿತ್ರದುರ್ಗ : ಸೀಬಾರ ಬಳಿ ರಸ್ತೆ ಅಪಘಾತ, ಓರ್ವ ಸಾವು

ಚಿತ್ರದುರ್ಗ, (ಡಿ.31) : ರಾಷ್ಟ್ರೀಯ ಹೆದ್ದಾರಿ 4 (48) ರ ಸೀಬಾರ ಬಳಿ ನಡೆದ ರಸ್ತೆ ಅಪಘಾತದಲ್ಲಿ ಓರ್ವ ಬೈಕ್ ಸವಾರ ಮೃತಪಟ್ಟಿದ್ದಾನೆ.

ಶನಿವಾರ ಸಂಜೆ ವೇಳೆಗೆ ಚಿತ್ರದುರ್ಗದಿಂದ ಕಲ್ಕುಟೆ ಗ್ರಾಮಕ್ಕೆ ಹೋಗುತ್ತಿದ್ದ ಬೈಕ್ ಸವಾರನಿಗೆ ಹೆದ್ದಾರಿಯಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ 22 ವರ್ಷದ ವಿಶ್ವನಾಥ ಎಂಬ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

The post ಚಿತ್ರದುರ್ಗ : ಸೀಬಾರ ಬಳಿ ರಸ್ತೆ ಅಪಘಾತ, ಓರ್ವ ಸಾವು first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/QVMc7rz
via IFTTT

Leave a Reply

Your email address will not be published. Required fields are marked *