Heart attack: ಹೃದಯಾಘಾತವಾಗುವ ಮೊದಲು ದೇಹದ ಈ 5 ಭಾಗಗಳು ಮರಗಟ್ಟುತ್ತವೆ..!

Heart Attack Symptoms: ಹೃದಯಾಘಾತಕ್ಕೂ ಮೊದಲು ದೇಹವು 5 ದೊಡ್ಡ ಸೂಚನೆಗಳನ್ನು ನೀಡುತ್ತದೆ. ಇದನ್ನು ನಾವು ಗುರುತಿಸಿ ಜಾಗರೂಕರಾಗಿದ್ದರೆ ಹೃದಯಾಘಾತ  ತಪ್ಪಿಸಬಹುದು.

ಹೃದಯಾಘಾತಕ್ಕೂ ಮುನ್ನ ಮರಗಟ್ಟುವಿಕೆ: ಹೃದಯಾಘಾತವು ಇದ್ದಕ್ಕಿದ್ದಂತೆ ಬರುವುದಿಲ್ಲವೆಂದು ವೈದ್ಯರು ಹೇಳುತ್ತಾರೆ. ಹೃದಯಾಘಾತಕ್ಕೂ ಮೊದಲು ದೇಹವು 5 ದೊಡ್ಡ ಸೂಚನೆಗಳನ್ನು ನೀಡುತ್ತದೆ. ಇದನ್ನು ನಾವು ಗುರುತಿಸಿ ಜಾಗರೂಕರಾಗಿದ್ದರೆ ಹೃದಯಾಘಾತ  ತಪ್ಪಿಸಬಹುದು. ಈ ಲಕ್ಷಣಗಳು ದೇಹದ ಕೆಲವು ಭಾಗಗಳ ಮರಗಟ್ಟುವಿಕೆಗೆ ಸಂಬಂಧಿಸಿವೆ. ಇಂದು ನಾವು ಈ ಅಂಗಗಳ ಬಗ್ಗೆ ವಿವರವಾಗಿ ನಿಮಗೆ ತಿಳಿಸಿಕೊಡಲಿದ್ದೇವೆ.

ವೈದ್ಯರ ಪ್ರಕಾರ ಹೃದಯವು ಸರಿಯಾಗಿ ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗದಿದ್ದಾಗ ಸಮಸ್ಯೆ ಉದ್ಭವಿಸುತ್ತದೆ. ರಕ್ತದ ಹರಿವು ಸರಿಯಾಗಿ ಆಗದಿದ್ದರೆ ಹೃದಯದ ಜೊತೆಗೆ ಅದರ ಸುತ್ತಮುತ್ತಲಿನ ಭಾಗಗಳ ಮೇಲೆ ಪರಿಣಾಮ ಬೀರಬಹುದು. ಈ ಕಾರಣದಿಂದ ಸೊಂಟದ ಮೇಲಿನ ಎಡ ಭಾಗವು ನಿಶ್ಚೇಷ್ಟಿತವಾಗಬಹುದು. ಅಲ್ಲದೆ ಇದರಲ್ಲಿ ಸೌಮ್ಯವಾದ ನೋವಿನ ಭಾವನೆಯೂ ಇರಬಹುದು.

ತಜ್ಞರ ಪ್ರಕಾರ ಹೃದಯಾಘಾತಕ್ಕೂ ಮೊದಲು ಎಡಭಾಗದಲ್ಲಿರುವ ದವಡೆಯು ನಿಶ್ಚೇಷ್ಟಿತವಾಗಬಹುದು ಅಥವಾ ನೋವು ಇರಬಹುದು. ಯಾವುದೇ ಒಬ್ಬ ವ್ಯಕ್ತಿಯು ಈ ರೋಗಲಕ್ಷಣಗಳನ್ನು ಅನುಭವಿಸಿದರೆ ನಿರ್ಲಕ್ಷ್ಯ ಮಾಡಬಾರದು. ಕೂಡಲೇ ವೈದ್ಯರನ್ನು ಸಂಪರ್ಕಿಸಿ ಆರೋಗ್ಯ ಪರಿಶೀಲಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು.

  

ಹೃದಯಾಘಾತದ ಅನೇಕ ಪ್ರಕರಣಗಳಲ್ಲಿ ವ್ಯಕ್ತಿಯ ಎಡ ಭುಜದ ಮರಗಟ್ಟುವಿಕೆ ಪ್ರಕರಣಗಳು ವರದಿಯಾಗಿವೆ. ವಾಸ್ತವವಾಗಿ ನಮ್ಮ ಹೃದಯವು ದೇಹದ ಎಡಭಾಗದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಹೃದಯದಲ್ಲಿ ಸಮಸ್ಯೆ ಉಂಟಾದಾಗ, ದೇಹದ ಎಡಭಾಗದಲ್ಲಿ ರಕ್ತ ಪರಿಚಲನೆಯು ಸ್ಥಗಿತಗೊಳ್ಳಲು ಪ್ರಾರಂಭಿಸುತ್ತದೆ. ಇದರಿಂದಾಗಿ ಅದು ನಿಶ್ಚೇಷ್ಟಿತವಾಗುತ್ತದೆ. ಈ ರೋಗಲಕ್ಷಣವನ್ನು ಸಹ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು.

ಹೃದಯದ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆಯಿದ್ದರೆ, ಕತ್ತಿನ ಎಡಭಾಗದ ಮೇಲೂ ಪರಿಣಾಮ ಬೀರುತ್ತದೆ. ರಕ್ತ ಪೂರೈಕೆಯಲ್ಲಿ ಅಡಚಣೆಯಿಂದ ಕತ್ತಿನ ಎಡಭಾಗವು ನಿಶ್ಚೇಷ್ಟಿತವಾಗುತ್ತದೆ. ಅದೇ ರೀತಿ ಕ್ರಮೇಣ ನೋವು ಅನುಭವಿಸಲು ಪ್ರಾರಂಭಿಸುತ್ತದೆ. ತಕ್ಷಣ ಚಿಕಿತ್ಸೆ ನೀಡದಿದ್ದರೆ ಪರಿಸ್ಥಿತಿ ಗಂಭೀರವಾಗಬಹುದು. 

ಹೃದಯಾಘಾತಕ್ಕೂ ಮೊದಲು ದೇಹದ ಅನೇಕ ಭಾಗಗಳಲ್ಲಿ ರಕ್ತದ ಹರಿವು ಕಡಿಮೆಯಾಗುತ್ತದೆ. ಈ ಕಾರಣದಿಂದ ಆ ಭಾಗಗಳಲ್ಲಿ ಮರಗಟ್ಟುವಿಕೆ ಪ್ರಾರಂಭವಾಗುತ್ತದೆ. ಇದರಲ್ಲಿ ಎಡಗೈಯೂ ಸೇರಿದೆ. ನಿಮ್ಮ ಎಡಗೈಯಲ್ಲಿಯೂ ಜುಮ್ಮೆನಿಸುವ ಅನುಭವ ಕಂಡುಬಂದರೆ ಎಚ್ಚರ ವಹಿಸಬೇಕು. ಹೃದಯದ ಸಮಸ್ಯೆಯಿಂದ ಇದು ಸಂಭವಿಸಬಹುದು. ಕೂಡಲೇ ನೀವು ವೈದ್ಯರ ಹತ್ತಿರ ಪರಿಶೀಲಿಸಬೇಕು. (ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿ ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ಸಮಗ್ರ ಸುದ್ದಿ ಇದನ್ನು ದೃಢಪಡಿಸುವುದಿಲ್ಲ.)

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source: https://zeenews.india.com/kannada/photo-gallery/sign-of-heart-attack-these-5-body-parts-start-becoming-numb-before-a-heart-attack-155343/symptoms-of-heart-attack-155344

Leave a Reply

Your email address will not be published. Required fields are marked *