ಬಾಳೆಹಣ್ಣಿನ ಜೊತೆ ಈ ಹಣ್ಣನ್ನು ತಿಂದರೆ ದೇಹದಲ್ಲಿ ವಿಷ ಹರಡುತ್ತದೆ..! ಎಚ್ಚರ

Banana side effect : ಬಾಳೆಹಣ್ಣು ಹೃದಯ ಮತ್ತು ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಈ ಹಣ್ಣುಗಳನ್ನು ಪ್ರತ್ಯೇಕವಾಗಿ ತಿಂದರೆ ದೇಹಕ್ಕೆ ಲಾಭವಾಗುತ್ತದೆ. ಆದರೆ ಈ ಹಣ್ಣಿನ ಜೊತೆ ಕೆಲವೊಂದಿಷ್ಟು ಹಣ್ಣುಗಳನ್ನು ಸೇರಿ ತಿನ್ನುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

Eating banana with papaya : ಒಂದೊಂದು ಹಣ್ಣಿನ ಸ್ವಭಾವವೂ ಭಿನ್ನವಾಗಿರುತ್ತದೆ. ವಿಭಿನ್ನ ಸ್ವಭಾವದ ಎರಡು ಹಣ್ಣುಗಳನ್ನು ಒಟ್ಟಿಗೆ ತಿಂದರೆ ಅದು ಹಾನಿಕರ. ಆಯುರ್ವೇದದ ಪ್ರಕಾರ ಬಾಳೆಹಣ್ಣು ಮತ್ತು ಪಪ್ಪಾಯಿ ಹಣ್ಣನ್ನು ಒಟ್ಟಿಗೆ ತಿನ್ನುವುದರಿಂದ ಆರೋಗ್ಯಕ್ಕೆ ಅಪಾಯಕಾರಿ ಎಂದು ಹೇಳಲಾಗುತ್ತದೆ.

ಹೌದು.. ಬಾಳೆಹಣ್ಣು ಹೃದಯ ಮತ್ತು ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಪಪ್ಪಾಯಿ ಹಣ್ಣು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಹಾಗೂ ಮಧುಮೇಹಕ್ಕೆ ಪ್ರಯೋಜನಕಾರಿಯಾಗಿದೆ. ಎರಡೂ ಹಣ್ಣುಗಳನ್ನು ಪ್ರತ್ಯೇಕವಾಗಿ ತಿಂದರೆ ದೇಹಕ್ಕೆ ಲಾಭ. ಆದರೆ ಒಟ್ಟಿಗೆ ತಿನ್ನುವುದರಿಂದ ದೇಹಕ್ಕೆ ಹಾನಿಯಾಗುತ್ತದೆ.

ಆಯುರ್ವೇದದ ಪ್ರಕಾರ, ಬಾಳೆಹಣ್ಣು ದೇಹವನ್ನು ತಂಪಾಗಿಸುತ್ತದೆ ಮತ್ತು ಪಪ್ಪಾಯಿಯ ದೇಹವನ್ನು ಬಿಸಿಯಾಗಿಸುತ್ತದೆ. ನೀವು ಈ ಎರಡು ಪದಾರ್ಥಗಳನ್ನು ಒಟ್ಟಿಗೆ ತಿಂದರೆ, ನಿಮ್ಮ ಜೀರ್ಣಕ್ರಿಯೆಯು ಹದಗೆಡಬಹುದು ಮತ್ತು ತಲೆನೋವು, ವಾಂತಿ, ತಲೆತಿರುಗುವಿಕೆ, ಅಲರ್ಜಿ, ಅಜೀರ್ಣದಂತಹ ಸಮಸ್ಯೆಗಳು ಉಂಟಾಗಬಹುದು.

ಕೆಲವು ಸಂಶೋಧನೆಗಳ ಪ್ರಕಾರ, ಅಸ್ತಮಾ ಅಥವಾ ಉಸಿರಾಟದ ತೊಂದರೆ ಇರುವವರು ಪಪ್ಪಾಯಿಯನ್ನು ತಿನ್ನಬಾರದು. ಪಪ್ಪಾಯಿ ತಿನ್ನುವುದರಿಂದ ಅಲರ್ಜಿ ಉಂಟಾಗುತ್ತದೆ. ಇದಲ್ಲದೇ ತ್ವಚೆಯಲ್ಲಿ ಮೊಡವೆ ತುರಿಕೆಯಂತಹ ಸಮಸ್ಯೆ ಇರುವವರು ಕೂಡ ಪಪ್ಪಾಯಿ ತಿನ್ನುವುದನ್ನು ತಪ್ಪಿಸಬೇಕು. 

ಗರ್ಭಿಣಿಯರು ಸಹ ಪಪ್ಪಾಯಿ ತಿನ್ನುವುದನ್ನು ತಪ್ಪಿಸಬೇಕು. ಪಪ್ಪಾಯಿ ದೇಹವನ್ನು ಬಿಸಿಯಾಗಿಸುತ್ತದೆ ಇದರಿಂದಾಗಿ ಗರ್ಭಾವಸ್ಥೆಯಲ್ಲಿ ಪಪ್ಪಾಯಿ ತಿನ್ನುವುದು ಭ್ರೂಣಕ್ಕೆ ಹಾನಿ ಮಾಡುತ್ತದೆ. ಅಲ್ಲದೆ, ಪಪ್ಪಾಯಿ ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗಬಹುದು ಆದರೆ ಅತಿಯಾಗಿ ಸೇವಿಸಿದರೆ ಅದು ದೇಹಕ್ಕೆ ಹಾನಿಕಾರಕ. ಔಷಧಿ ಮತ್ತು ಪಪ್ಪಾಯಿಯನ್ನು ಒಟ್ಟಿಗೆ ಸೇವಿಸುವುದರಿಂದ ಗಂಭೀರ ಸಮಸ್ಯೆಗಳು ಉಂಟಾಗಬಹುದು.

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://zeenews.india.com/kannada/health/eating-banana-with-papaya-cause-health-issues-155852

Leave a Reply

Your email address will not be published. Required fields are marked *