Best Way To Drink Tea: ನೀವು ಕೂಡಾ ಚಹಾ ಪ್ರಿಯರಾಗಿದ್ದರೆ, ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ, ಅದನ್ನು ಕುಡಿಯಲು ಸರಿಯಾದ ಸಮಯ ಮತ್ತು ವಿಧಾನ ತಿಳಿದಿರಬೇಕು.
![](https://samagrasuddi.co.in/wp-content/uploads/2023/09/image-49-300x169.png)
Best Way To Drink Tea : ಚಹಾ ಎನ್ನುವುದು ಭಾರತೀಯರಿಗೆ ಕೇವಲ ಪಾನೀಯವಲ್ಲ ಅದೊಂದು ಇಮೊಶನ್. ಖುಷಿಯಾದರೂ ಚಹಾ, ಬೇಜಾರಾದರೂ ಚಹಾ, ನಿದ್ದೆ ಬರುತ್ತಿದ್ದರೂ ಚಹಾ, ಆಲಸ್ಯವಾದರೂ ಚಹಾ ಹೀಗೆ ಪ್ರತಿಯೊಂದು ಹೆಜ್ಜೆಯಲ್ಲಿಯೂ ಚಹಾ ನಮ್ಮ ಜೊತೆಗಾರ. ನಿಜ ಹೇಳಬೇಕೆಂದರೆ ಚಹಾ ಹೀರುವುದಕ್ಕೆ ಒಂದು ನೆಪ ಬೇಕು ಅಷ್ಟೇ. ಕೆಲವರ ದಿನ ಒಂದು ಲೋಟ ಚಹಾದೊಂದಿಗೆಯೇ ಆರಂಭವಾಗುವುದು. ಇನ್ನು ಕೆಲವರು ಗಂಟೆಗೊಮ್ಮೆ ಚಹಾ ಕುಡಿಯುತ್ತಾರೆ. ಚಟಕ್ಕೆ ಬಿದ್ದು ಅಗತ್ಯಕ್ಕಿಂತ ಹೆಚ್ಚು ಚಹಾ ಸೇವಿಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೀವು ಕೂಡಾ ಚಹಾ ಪ್ರಿಯರಾಗಿದ್ದರೆ, ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ, ಅದನ್ನು ಕುಡಿಯಲು ಸರಿಯಾದ ಸಮಯ ಮತ್ತು ವಿಧಾನ ತಿಳಿದಿರಬೇಕು.
ಚಹಾ ಕುಡಿಯಲು ಸರಿಯಾದ ಮಾರ್ಗ ಮತ್ತು ಸಮಯ ಯಾವುದು? :
ದಿನಕ್ಕೆ ಎಷ್ಟು ಬಾರಿ ಚಹಾ ಕುಡಿಯಬಹುದು ? :
ಬೆಳಗ್ಗೆ ಎದ್ದ ತಕ್ಷಣ ಟೀ ಕುಡಿಯುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಹೀಗಾಗಿ ಆರೋಗ್ಯಕರ ಪಾನೀಯದೊಂದಿಗೆ ದಿನವನ್ನು ಪ್ರಾರಂಭಿಸಿ. ಎದ್ದ 1 ಅಥವಾ 2 ಗಂಟೆಗಳ ನಂತರವೇ ಚಹಾ ಕುಡಿಯಬೇಕು.
ದೀರ್ಘಕಾಲದವರೆಗೆ ಖಾಲಿಯಿರುವ ಹೊಟ್ಟೆಗೆ ಒಂದೇ ಸಲ ಚಹಾ ಬಿದ್ದಾಗ ಅಸಿಡಿಟಿ ಅಥವಾ ಅಜೀರ್ಣದ ಸಮಸ್ಯೆ ಕಾಣಿಸಿಕೊಳ್ಳಬಹುದು. ಮಲಬದ್ಧತೆಯ ಸಮಸ್ಯೆಯೂ ಎದುರಾಗಬಹುದು. ಇದು ಹಸಿವಿನ ನಷ್ಟಕ್ಕೂ ಕಾರಣವಾಗಬಹುದು. ಖಾಲಿ ಹೊಟ್ಟೆಗೆ ಚಹಾ ಕುಡಿಯುವ ಬದಲು ಬಿಸ್ಕತ್ತು, ಟೋಸ್ಟ್ ಜೊತೆಗೆ ಚಹಾ ಕುಡಿದರೆ ಒಳ್ಳೆಯದು.
ಊಟದ ಜೊತೆಗೆ ಚಹಾ ಕುಡಿದರೆ ಆಹಾರವನ್ನು ರುಚಿಯಿಲ್ಲದಂತೆ ಮಾಡುತ್ತದೆ. ಆಹಾರದಿಂದ ಪೋಷಕಾಂಶಗಳ ಹೀರಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಆಹಾರವನ್ನು ಸೇವಿಸಿದ 1 ಗಂಟೆಯ ನಂತರವೇ ಚಹಾವನ್ನು ಕುಡಿಯುವುದು ಉತ್ತಮ ಆಯ್ಕೆಯಾಗಿದೆ.
ಮಲಗುವ ಮುನ್ನ ಚಹಾ ಕುಡಿಯುವುದನ್ನು ತಪ್ಪಿಸಿ. ಇದು ನಿದ್ರೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ಕಿರಿಕಿರಿ ಉಂಟು ಮಾಡುವುದಲ್ಲದೆ ಜ್ಞಾಪಕ ಶಕ್ತಿ ಮೇಲೆಯೂ ಪರಿಣಾಮ ಬೀರುತ್ತದೆ. ಮಲಗುವ ಹತ್ತು ಗಂಟೆಗಳ ಮೊದಲು ಚಹಾ ಕುಡಿಯಬೇಕು. ನಂತರ ಯಾವುದೇ ಕಾರಣಕ್ಕೂ ಚಹಾ ಕುಡಿಯಬಾರದು.
ಚಹಾದಲ್ಲಿ ಕೆಫೀನ್ ಇರುತ್ತದೆ. ಆದ್ದರಿಂದ ಕೆಫೀನ್ ಅನ್ನು ಅಧಿಕವಾಗಿ ಸೇವಿಸಿದರೆ, ಅದು ನಿರ್ಜಲೀಕರಣದ ಸಮಸ್ಯೆಯನ್ನು ಉಂಟುಮಾಡಬಹುದು. ಇದು ದೇಹದಲ್ಲಿನ ನೀರಿನ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಭಯ, ಅನಿಯಮಿತ ಹೃದಯ ಬಡಿತ ಮತ್ತು ಆಯಾಸಕ್ಕೆ ಕಾರಣವಾಗಬಹುದು. ಆದ್ದರಿಂದ, ದಿನಕ್ಕೆ 1 ರಿಂದ 2 ಕಪ್ ಮಾತ್ರ ಕುಡಿಯಬೇಕು.
ಅತಿಯಾಗಿ ಟೀ ಕುಡಿಯುವುದರಿಂದ ಹಲ್ಲುಗಳಿಗೆ ಸಂಬಂಧಿಸಿದ ಸಮಸ್ಯೆಗಳೂ ಉಂಟಾಗಬಹುದು. ನಿಮ್ಮ ಹಲ್ಲುಗಳು ಹಳದಿಯಾಗಬಹುದು ಮತ್ತು ಕುಹರದ ಸಮಸ್ಯೆಯೂ ಉಂಟಾಗಬಹುದು.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಸಮಗ್ರ ಸುದ್ದಿ ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ).
ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk
ನಮ್ಮ Facebook page: https://www.facebook.com/samagrasudii