ಆರೋಗ್ಯಕ್ಕೆ ಬಲು ಉಪಕಾರಿ ತೆಂಗಿನಕಾಯಿ ! ನಿತ್ಯ ಅಡುಗೆಯಲ್ಲಿ ಬಳಸಿ ನೋಡಿ

Health benefits of Coconut: ತೆಂಗಿನಕಾಯಿ ಒಂದು ಬಹುಮುಖ ಹಣ್ಣಾಗಿದ್ದು, ಇದನ್ನು ಪೂಜೆಯಲ್ಲಿ ಮತ್ತು ಅನೇಕ ರೀತಿಯ ಭಕ್ಷ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ. ಇಂದು ನಾವು ತೆಂಗಿನಕಾಯಿಯ 5 ಆರೋಗ್ಯ ಪ್ರಯೋಜನಗಳ ಬಗ್ಗೆ ಹೇಳಲಿದ್ದೇವೆ.

Health benefits of Coconut : ತೆಂಗಿನಕಾಯಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಇದನ್ನು ಅಡುಗೆಯಲ್ಲಿ ಬಳಸಿದರೆ ರುಚಿ ದುಪ್ಪಟ್ಟಾಗುತ್ತದೆ. ಚಟ್ನಿ, ಸಾಂಬಾರ್, ಗಸಿಂ ಕೂಟು,  ಪಲ್ಯ, ಹೀಗೆ ಹಲವು ಬಗೆಯ ಅಡುಗೆಯಲ್ಲಿ ತೆಂಗಿನಕಾಯಿಯನ್ನು ಬಳಸಲಾಗುತ್ತದೆ. ಸಿಹಿ ತಿಂಡಿಗಳನ್ನು ಮಾಡುವಾಗಲೂ ತೆಂಗಿನಕಾಯಿ ಬಳಕೆ ಇದ್ದೇ ಇರುತ್ತದೆ. ಇನ್ನು ಕರಾವಳಿ ಭಾಗದಲ್ಲಿಯಂತೂ ಪ್ರತಿ ಅಡುಗೆಗೆ ತೆಂಗಿನಕಾಯಿ ಬೇಕೇ ಬೇಕು.  ತೆಂಗಿನಕಾಯಿ ಅಡುಗೆಯ ರುಚಿ ಮತ್ತು ಘಮ ಹೆಚ್ಚಿಸುವುದು ಮಾತ್ರವಲ್ಲ ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ತೆಂಗಿನಕಾಯಿ ಪೌಷ್ಟಿಕಾಂಶದಿಂದ ಕೂಡಿರುವ ಆಹಾರವಾಗಿದೆ.

ತೆಂಗಿನ ಕಾಯಿಯ 5 ಆರೋಗ್ಯ ಪ್ರಯೋಜನಗಳು : 
1. ತೂಕ ಇಳಿಕೆಗೆ ಸಹಕಾರಿ : 

ತೆಂಗಿನಕಾಯಿ ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದರಲ್ಲಿರುವ ಉತ್ತಮ ಪ್ರಮಾಣದ ನಾರಿನಂಶವು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದರಿಂದ ಕಡಿಮೆ  ಆಹಾರ ಸೇವಿಸುತ್ತೀರಿ. 12 ವಾರಗಳವರೆಗೆ ದಿನಕ್ಕೆ 30 ಗ್ರಾಂ ಫೈಬರ್ ಸೇವಿಸುವುದರಿಂದ ತೂಕ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ ಎನ್ನುವುದನ್ನು ಅಧ್ಯಯನವೊಂದು ಕಂಡುಹಿಡಿದಿದೆ.

2. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ : 
ತೆಂಗಿನಕಾಯಿ ಉತ್ತಮ ಪ್ರಮಾಣದ ಫೈಬರ್ ಮತ್ತು ಪ್ರೋಟೀನ್ ಅನ್ನು ಹೊಂದಿರುತ್ತದೆ. ಇದು ಜೀರ್ಣಕ್ರಿಯೆಗೆ ಸಹಕಾರಿ. ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಆದರೆ ಪ್ರೋಟೀನ್ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. 4 ವಾರಗಳ ಕಾಲ ಪ್ರತಿದಿನ 20 ಗ್ರಾಂ ತೆಂಗಿನ ಮಾಂಸವನ್ನು ಸೇವಿಸುವುದರಿಂದ ಮಲಬದ್ಧತೆ ಮತ್ತು ಜೀರ್ಣಕಾರಿ ಕಾಯಿಲೆಗಳನ್ನು ಸುಧಾರಿಸುತ್ತದೆ ಎನ್ನುವುದು ಕೂಡಾ ಅಧ್ಯಯನದಿಂದ ಸಾಬೀತಾಗಿದೆ. 

3. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ : 
ವಿಟಮಿನ್ ಸಿ ಮತ್ತು ಮ್ಯಾಂಗನೀಸ್ ನಂತಹ ಉತ್ಕರ್ಷಣ ನಿರೋಧಕಗಳು ತೆಂಗಿನಕಾಯಿಯಲ್ಲಿ ಹೇರಳವಾಗಿ ಇರುತ್ತವೆ. ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಉತ್ಕರ್ಷಣ ನಿರೋಧಕಗಳು  ಫ್ರೀ  ರಾಡಿಕಲ್ ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. 12 ವಾರಗಳ ಕಾಲ ಪ್ರತಿದಿನ 10 ಗ್ರಾಂ ತೆಂಗಿನ ಮಾಂಸವನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಸುಧಾರಿಸುತ್ತದೆ. 

4.  ಹೊಳೆಯುವ ತ್ವಚೆ ಮತ್ತು ಕೂದಲಿಗಾಗಿ :  
ತೆಂಗಿನಕಾಯಿ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಪ್ರಮುಖವಾದ ವಿಟಮಿನ್ -ಇ ಮತ್ತು ಇತರ ಪೋಷಕಾಂಶಗಳನ್ನು ಹೊಂದಿರುತ್ತದೆ. ವಿಟಮಿನ್ ಇ ಒಂದು ಉತ್ಕರ್ಷಣ ನಿರೋಧಕವಾಗಿದ್ದು ಅದು ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ವಿಟಮಿನ್ ಇ ಸಮೃದ್ಧವಾಗಿರುವ ತೆಂಗಿನ ಎಣ್ಣೆಯನ್ನು ಬಳಸುವುದರಿಂದ ವಯಸ್ಸಾದ ಚಿಹ್ನೆಗಳನ್ನು ಮರೆ ಮಾಚಬಹುದು. 

5. ಹೃದಯದ ಆರೋಗ್ಯಕ್ಕಾಗಿ :  
ತೆಂಗಿನಕಾಯಿ MCTs ಹೊಂದಿರುತ್ತದೆ. ಇದು ಒಂದು ರೀತಿಯ ಕೊಬ್ಬು. ಇದು ಇತರ ಕೊಬ್ಬುಗಳಿಗಿಂತ ಸುಲಭವಾಗಿ ಜೀರ್ಣವಾಗುತ್ತದೆ. MCT ಗಳು ನಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಹೃದ್ರೋಗದ ಅಪಾಯ ಕಡಿಮೆಯಾಗುತ್ತದೆ.

(ಸೂಚನೆ :  ಪ್ರಿಯ ಓದುಗರೇ, ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ. )

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://zeenews.india.com/kannada/lifestyle/amazing-benefits-of-coconut-helps-in-digesion-weight-lose-skin-and-haircare-159621

Leave a Reply

Your email address will not be published. Required fields are marked *